HomeIndiaSHOCKING NEWS: ಸಾಕುನಾಯಿ ವಿಚಾರವಾಗಿ ಜಗಳ; ಹೋಮ್ ಗಾರ್ಡ್ ನಿಂದ ಫೈರಿಂಗ್; ಇಬ್ಬರು ಸ್ಥಳದಲ್ಲೇ ದುರ್ಮರಣ

SHOCKING NEWS: ಸಾಕುನಾಯಿ ವಿಚಾರವಾಗಿ ಜಗಳ; ಹೋಮ್ ಗಾರ್ಡ್ ನಿಂದ ಫೈರಿಂಗ್; ಇಬ್ಬರು ಸ್ಥಳದಲ್ಲೇ ದುರ್ಮರಣ

ಇಂದೋರ್: ಸಾಕುನಾಯಿ ವಿಚಾರವಾಗಿ ಆರಂಭವಾದ ಜಗಳ ಇಬ್ಬರ ಹತ್ಯೆಯಲ್ಲಿ ಕೊನೆಗೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ಸಾಕುನಾಯಿ ವಿಚಾರವಾಗಿ ನೆರೆಮನೆಯವರೊಂದಿಗೆ ಗಲಾಟೆ ಆರಂಭವಾಗಿದ್ದು, ಹೋಮ್ ಗಾರ್ಡ್ ಓರ್ವರು ಹಾರಿಸಿದ ಗುಂಡಿಗೆ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷ್ಣಬಾಗ್ ಕಾಲೋನಿಯ ರಾಜ್ ಪಾಲ್ ರಜಾವತ್ ಎಂಬ ಹೋಮ್ ಗಾರ್ಡ್ ನಾಯಿ ವಿಚಾರವಾಗಿ ನಡೆದ ಜಗಳದ ವೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಸಾಕುನಾಯಿ ವಿಚಾರವಾಗಿ ವಾಗ್ವಾದ ಆರಂಭವಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಸ್ಥಳದಲ್ಲಿ ಜಮಾವಣೆಗೊಂಡಿದ್ದಾರೆ. ಕೋಪದ ಬರದಲ್ಲಿ ರಜಾವತ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಜಗಳ ನಿಂತಿಲ್ಲ. ಇನ್ನಷ್ಟು ಕೋಪೋದ್ರಿಕ್ತರಾದ ರಜಾವತ್, ತನ್ನ ಎದುರು ನಿಂತಿದ್ದ ಜನರ ಮೇಲೆಯೇ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರು ಗುಂಡೇಟಿನಿಂದ ಗಾಯಗೊಂಡಿದ್ದಾಗಿ ಡಿಸಿಪಿ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular