ತುರ್ತಾಗಿ ಹಣದ ಅಗತ್ಯವಿದ್ದಾಗ ಬಹುತೇಕರು ಬ್ಯಾಂಕ್‌ಗಳ ಸಾಲದ ಮೊರೆ ಹೋಗುತ್ತಾರೆ. ಅದರಲ್ಲೂ ಪರ್ಸನಲ್ ಲೋನ್ ಮೊದಲು ನೆನಪಿಗೆ ಬರುತ್ತದೆ. ಸಾಮಾನ್ಯವಾಗಿ ಪರ್ಸನಲ್ ಲೋನ್ ಪಡೆಯಲು ಉತ್ತಮ CIBIL ಸ್ಕೋರ್ ಹಾಗೂ ಆದಾಯದ ಪುರಾವೆ ಅಗತ್ಯವಾಗಿರುತ್ತದೆ. ಆದರೆ ಇವೆರಡೂ ಇಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಪಡೆಯುವ ಅವಕಾಶವಿದೆ. ಅದು ಹೇಗೆ ಎಂಬುದನ್ನು ನೋಡೋಣ.
ಬ್ಯಾಂಕ್‌ಗಳು ಯಾವುದನ್ನು ಪರಿಗಣಿಸುತ್ತವೆ?
ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹಲವು ಮಾರ್ಗಗಳಿವೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹೋಮ್ ಲೋನ್, ಪ್ರಾಪರ್ಟಿ ಲೋನ್, ಬಿಸಿನೆಸ್ ಲೋನ್, ವಾಹನ ಸಾಲ, ಮದುವೆ ಸಾಲ, ಶಿಕ್ಷಣ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳು ಲಭ್ಯವಿವೆ.
ಸಾಮಾನ್ಯವಾಗಿ ಉತ್ತಮ CIBIL ಸ್ಕೋರ್, ವಿಶೇಷವಾಗಿ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ ಸಾಲ ಮಂಜೂರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಕೋರ್ ಕಡಿಮೆಯಿದ್ದರೆ ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳು ನಿಮ್ಮ ಅರ್ಜಿ ಹಾಗೂ ಇತರ ಅಂಶಗಳನ್ನು ಹೆಚ್ಚು ಪರಿಶೀಲಿಸಬಹುದು.
ತುರ್ತಾಗಿ ಹಣದ ಅಗತ್ಯವಿದ್ದಾಗ ಹೆಚ್ಚಿನವರು ಪರ್ಸನಲ್ ಲೋನ್‌ಗೆ ಮೊರೆ ಹೋಗುತ್ತಾರೆ. ಈ ಸಾಲ ಪಡೆಯಲು ಯಾವುದೇ ಆಸ್ತಿಯನ್ನು ಅಡಮಾನ ಇಡುವ ಅಗತ್ಯವಿಲ್ಲ. ಉದ್ಯೋಗಿಗಳಾಗಿದ್ದರೆ ಸ್ಯಾಲರಿ ಸ್ಲಿಪ್ ಹಾಗೂ ಸ್ವಯಂ ಉದ್ಯೋಗಿಗಳು ಅಥವಾ ವ್ಯಾಪಾರಿಗಳು ತಮ್ಮ ಆದಾಯ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇದರ ಜೊತೆಗೆ CIBIL ಸ್ಕೋರ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಾಲ ಮರುಪಾವತಿ ಸಾಮರ್ಥ್ಯ, ಆದಾಯ ಹಾಗೂ ಕ್ರೆಡಿಟ್ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ.
ಈ ಎರಡು ಮಾರ್ಗಗಳಲ್ಲಿ ಸಾಲ ಪಡೆಯುವ ಅವಕಾಶ
CIBIL ಸ್ಕೋರ್ ಅಥವಾ ಆದಾಯದ ಪುರಾವೆ ಇಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ಬ್ಯಾಂಕಿಂಗ್ ಸಂಬಂಧ ಅಥವಾ ಗ್ಯಾರಂಟರ್ ಮೂಲಕ ಸಾಲ ಪಡೆಯುವ ಅವಕಾಶವಿದೆ.
1. ಬ್ಯಾಂಕಿಂಗ್ ಸಂಬಂಧ:
ಕೆಲವು ಬ್ಯಾಂಕ್‌ಗಳು ತಮ್ಮ ಖಾತೆದಾರರ ನಿಯಮಿತ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಿ ಸಾಲ ನೀಡುತ್ತವೆ. ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳ ಮೂಲಕ ಅರ್ಹ ಗ್ರಾಹಕರಿಗೆ ಪ್ರೀ-ಅಪ್ರೂವ್ಡ್ ಲೋನ್ ಆಫರ್‌ಗಳನ್ನು ನೀಡುವ ಸಾಧ್ಯತೆಯೂ ಇದೆ.
2. ಗ್ಯಾರಂಟರ್ ಮೂಲಕ:
ಕೆಲವು ಸಂದರ್ಭಗಳಲ್ಲಿ ಗ್ಯಾರಂಟರ್ ಒದಗಿಸುವ ಮೂಲಕವೂ ಸಾಲ ಪಡೆಯುವ ಅವಕಾಶವಿರುತ್ತದೆ. ಆದರೆ ಇದರ ನಿಯಮಗಳು ಬ್ಯಾಂಕ್ ಹಾಗೂ ಸಾಲದ ಪ್ರಕಾರ ಬದಲಾಗಬಹುದು. ಇದಲ್ಲದೆ, ಕೆಲವು ಬ್ಯಾಂಕ್‌ಗಳು ಗ್ರಾಹಕರ ಕ್ರೆಡಿಟ್ ಪ್ರೊಫೈಲ್ ಆಧರಿಸಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ.
ನಕಲಿ ಲೋನ್ ಆ್ಯಪ್‌ಗಳ ಬಗ್ಗೆ ಎಚ್ಚರ!
ಪರ್ಸನಲ್ ಲೋನ್ ಪಡೆಯುವ ಆತುರದಲ್ಲಿ ಕೆಲವರು ನಕಲಿ ಲೋನ್ ಆ್ಯಪ್‌ಗಳನ್ನು ನಂಬಿ ವಂಚನೆಗೆ ಒಳಗಾಗುತ್ತಿದ್ದಾರೆ. ಇಂತಹ ಆ್ಯಪ್‌ಗಳು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ.
ಹೀಗಾಗಿ ಯಾವುದೇ ಲೋನ್ ಆ್ಯಪ್ ಮೂಲಕ ಸಾಲ ಪಡೆಯುವ ಮೊದಲು ಅದು RBIಯಲ್ಲಿ ನೋಂದಾಯಿತ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿ. ನಂತರವೇ ಸಾಲ ಪಡೆಯುವ ನಿರ್ಧಾರ ಕೈಗೊಳ್ಳುವುದು ಸುರಕ್ಷಿತ.

