ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್ ಗಾಧ್ವಿ ಅವರ ಮೇಲೆ ಹಣದ ಸುರಿಮಳೆಯಾಗಿದೆ. ಗಾಯಕನ ಮೇಲೆ ಹಣದ ಸುರಿಮಳೆಗೈದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. ಭಜನಾ ಕಾರ್ಯಕ್ರಮಗಳಲ್ಲಿ ಜನರು ಹಣದ ಸುರಿಮಳೆಗೈದ ಘಟನೆಗಳು ಗುಜರಾತ್‌ನಲ್ಲಿ ಸಾಕಷ್ಟು ಸಾಮಾನ್ಯವಾಗಿದೆ.
ವೀಡಿಯೊದಲ್ಲಿ, ಗಾಯಕನು ತಮ್ಮ ಸಹ ಸಂಗೀತಗಾರರ ಜೊತೆಗೆ ವೇದಿಕೆಯ ಮೇಲೆ ಕುಳಿತು ಹಾಡುತ್ತಿರುವುದನ್ನು ನೋಡಬಹುದು. ಅವರ ಹಾಡಿಗೆ ಮನಸೋತು ಪ್ರೇಕ್ಷಕರು ಹಣದ ರಾಶಿಯನ್ನು ಸುರಿಯುತ್ತಾರೆ.
ಗಾಯಕರ ಮೇಲೆ ಹಣದ ಸುರಿಮಳೆಯಾಗುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಸಾಕಷ್ಟು ಇಂತಹ ಘಟನೆಗಳು ಸುದ್ದಿಯಾಗಿದ್ದವು.
ಕಳೆದ ಡಿಸೆಂಬರ್ನಲ್ಲಿ ಗುಜರಾತ್‌ನ ನವಸಾರಿ ಗ್ರಾಮದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಗಾಯಕ ಕೀರ್ತಿದನ್ ಗಾಧ್ವಿ ಅವರಿಗೆ 50 ಲಕ್ಷ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಯಾಗಿತ್ತು.
https://twitter.com/ANI/status/1634751497027088385?ref_src=twsrc%5Etfw%7Ctwcamp%5Etweetembed%7Ctwterm%5E1634751497027088385%7Ctwgr%5Eebc51cdd654c666f6159e5bb46391e792fe6e00e%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-people-shower-money-on-singer-kirtidan-gadhvi-at-an-event-in-gujarat