HomeAstroಆಗಸ್ಟ್ ನಲ್ಲಿ ಜನಿಸುವವರು ಪಡೆಯುತ್ತಾರೆ ಕೆಲಸಗಳಲ್ಲಿ ಶೀಘ್ರ ಯಶಸ್ಸು

ಆಗಸ್ಟ್ ನಲ್ಲಿ ಜನಿಸುವವರು ಪಡೆಯುತ್ತಾರೆ ಕೆಲಸಗಳಲ್ಲಿ ಶೀಘ್ರ ಯಶಸ್ಸು

ಆಗಸ್ಟ್ ತಿಂಗಳು ಕ್ಯಾಲೆಂಡರ್‌ನ ಎಂಟನೇ ತಿಂಗಳು. ಇದು ಮಳೆಗಾಲ. ಜ್ಯೋತಿಷ್ಯದ ಪ್ರಕಾರ, ಕೆಲವು ವಿಶೇಷ ಗ್ರಹಗಳ ಪರಿಣಾಮವು ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರ ಸ್ವಭಾವದಲ್ಲಿ ಕಂಡುಬರುತ್ತದೆ.

ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರ ಮೇಲೆ ಸೂರ್ಯ ಗ್ರಹದ ಪ್ರಭಾವ ಕಂಡುಬರುತ್ತದೆ. ಅವರ ರಾಶಿ ಸಿಂಹ. ಈ ತಿಂಗಳಲ್ಲಿ ಜನಿಸಿದ ಜನರ ಪ್ರತಿಯೊಂದು ಕೆಲಸದಲ್ಲೂ ನಾಯಕತ್ವ ನೋಡಬಹುದು. ಮಿಥುನ ಮತ್ತು ಕನ್ಯಾ ರಾಶಿಯ ಜನರು ಇವರ ಉತ್ತಮ ಸ್ನೇಹಿತರಾಗಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರು, ಕೆಲಸಗಳಲ್ಲಿ ಶೀಘ್ರ ಯಶಸ್ಸು ಪಡೆಯುತ್ತಾರೆ. ಯಾವುದೇ ವಿಷಯವನ್ನು ತಮ್ಮ ಕಡೆಗೆ ತಿರುಗಿಸಲು ಬಲ್ಲವರು.

ಮಾತಿನಿಂದ ಅವರ ಬುದ್ಧಿವಂತಿಕೆಯನ್ನು ಸ್ಪಷ್ಟವಾಗಿ ಕಾಣಬಹುದು. ಆಗಸ್ಟ್ ತಿಂಗಳಲ್ಲಿ ಜನಿಸಿದ ಜನರು ಸ್ವಭಾವತಃ ಜಿಪುಣರು. ಅವರ ಈ ಸ್ವಭಾವ ಅವರನ್ನು ಶ್ರೀಮಂತರನ್ನಾಗಿಸುತ್ತದೆ. ಈ ತಿಂಗಳಲ್ಲಿ ಜನಿಸಿದವರು ಬುದ್ಧಿವಂತರು. ಸಮಾಜದ ಉದ್ಧಾರಕ್ಕೆ ಕೆಲಸ ಮಾಡುವ ಇವರು ಅದರಲ್ಲೂ ಸ್ವಾರ್ಥ ನೋಡ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಜನರೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಸ್ನೇಹಿತರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಅದ್ಭುತ ಪ್ರತಿಭೆ ಅಡಗಿರುತ್ತದೆ. ಕಲೆ, ಸಾಹಿತ್ಯ ಮತ್ತು ವಿವಿಧ ಸೃಜನಶೀಲ ಕೆಲಸಗಳಲ್ಲಿ ಛಾಪು ಮೂಡಿಸುತ್ತಾರೆ. ಇವರ ಸೌಂದರ್ಯ ಪ್ರಜ್ಞೆ ಅದ್ಭುತವಾಗಿದೆ. ಕೆಲವೊಂದು ಅಭ್ಯಾಸವು ತೊಂದರೆಗೆ ಸಿಲುಕಿಸುತ್ತದೆ.

ಹಣಕಾಸಿನ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರೆ. ಪ್ರೀತಿಗೆ ಸಂಬಂಧಪಟ್ಟಂತೆ, ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಕೆಲವೊಮ್ಮೆ ಸಂಬಂಧಕ್ಕಿಂತ ಹಣಕ್ಕೆ ಮಹತ್ವ ನೀಡುತ್ತಾರೆ. ಇವರ ಅದೃಷ್ಟ ಸಂಖ್ಯೆ 2, 5 ಮತ್ತು 9. ಬೂದು, ಚಿನ್ನ ಮತ್ತು ಕೆಂಪು ಬಣ್ಣ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.  ಭಾನುವಾರ ಮತ್ತು ಶುಕ್ರವಾರ ಶುಭದಿನವೆಂದು ಪರಿಗಣಿಸಲಾಗುತ್ತದೆ.

– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ

ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.

ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358

For Latest News Updates, Join Our Whatsapp Community🚩
RELATED ARTICLES

Most Popular