HomeSportsಐಸಿಸಿ ಟಿ20 ವಿಶ್ವಕಪ್‌ 2026: ಬಾಂಗ್ಲಾದೇಶ ಬೆಂಬಲಕ್ಕೆ ನಿಂತ ಪಾಕಿಸ್ತಾನ

ಐಸಿಸಿ ಟಿ20 ವಿಶ್ವಕಪ್‌ 2026: ಬಾಂಗ್ಲಾದೇಶ ಬೆಂಬಲಕ್ಕೆ ನಿಂತ ಪಾಕಿಸ್ತಾನ

ವಿವಿಧ ಕಾರಣಕ್ಕೆ ಐಸಿಸಿ ಪುರುಷರ ಟಿ20 ವಿಶ್ವಕಪ್‌-2026 ಸುದ್ದಿಯಲ್ಲಿದೆ. ಐಸಿಸಿಯ ಈ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡದ ಭಾಗವಹಿಸುವಿಕೆ ಕುರಿತು ಇನ್ನೂ ಅನಿಶ್ಚಿತತೆ ಇದೆ. ಆದರೆ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶ ತಂಡದ ನಿಲುವು ಬೆಂಬಲಿಸಿ ಐಸಿಸಿಗೆ ಪತ್ರವನ್ನು ಬರೆದಿದೆ.

ESPNcricinfo ಈ ಕರಿತು ವರದಿಯೊಂದನ್ನು ಪ್ರಕಟಿಸಿದೆ. ಭಾರತದಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂಬ ಬಾಂಗ್ಲಾದೇಶದ ನಿಲುವನ್ನು ಬೆಂಬಲಿಸಿ ಪಿಸಿಬಿ ಐಸಿಸಿಗೆ ಪತ್ರ ಬರೆದಿದೆ. ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆ ಕುರಿತು ಇನ್ನೂ ಸಹ ಐಸಿಸಿ ನಿರ್ಧಾರ ಕೈಗೊಂಡಿಲ್ಲ.

ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಾದೇಶಿಕ ರಾಜಕೀಯ ಉದ್ವಿಗ್ನತೆಯ ನಡುವೆ ಭಾರತದಲ್ಲಿ ಪಂದ್ಯಗಳನ್ನು ಆಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ನಿರಾಕರಣೆಯನ್ನು ಔಪಚಾರಿಕವಾಗಿ ಬೆಂಬಲಿಸಿದೆ ಎಂದು ವರದಿ ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಸಿಬಿ ತನ್ನ ನಿಲುವನ್ನು ಐಸಿಸಿಗೆ ಸ್ಪಷ್ಟಪಡಿಸಿದೆ ಮತ್ತು ಐಸಿಸಿ ಮಂಡಳಿಯ ಸದಸ್ಯರನ್ನು ಹೆಸರಿಸಿ ಈ ಪತ್ರವನ್ನು ಬರೆಯಲಾಗಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ನಡೆಯುವ ಪಂದ್ಯಗಳನ್ನು ಭದ್ರತಾ ದೃಷ್ಟಿಯಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕು ಎಂದು ಬಿಸಿಬಿ ಮನವಿ ಮಾಡಿದೆ. ಭಾರತದಲ್ಲಿ ಪಂದ್ಯಗಳನ್ನು ಆಡುವುದಿಲ್ಲ ಎಂದು ಹೇಳಿದೆ.

ಈ ಮನವಿ ಕುರಿತು ಚರ್ಚಿಸಲು ಐಸಿಸಿ ಸಭೆ ಬುಧವಾರ ನಿಗದಿಯಾಗಿದೆ. ಆದರೆ ಸದ್ಯದ ವರದಿಯ ಪ್ರಕಾರ ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಬದಲಾವಣೆ ಮಾಡುವುದಿಲ್ಲ ಮತ್ತು ಬಾಂಗ್ಲಾದೇಶದ ಪಂದ್ಯಗಳನ್ನು ಸಹ-ಆತಿಥೇಯ ಶ್ರೀಲಂಕಾದೊಂದಿಗೆ ಆಡಲಾಗುವುದು ಎಂದು ಐಸಿಸಿ ಹೇಳಿದೆ.

ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಬಾಂಗ್ಲಾದೇಶವು ಯಾವುದೇ ಷರತ್ತುಗಳನ್ನು ಒಪ್ಪುವುದಿಲ್ಲ. ಐಸಿಸಿ ಭಾರತೀಯ ಕ್ರಿಕೆಟ್ ಮಂಡಳಿಯ ಪ್ರಭಾವದಿಂದ ದೇಶದ ಮೇಲೆ ಒತ್ತಡವನ್ನು ಉಂಟುಮಾಡಿದರೆ. ಐಸಿಸಿ ಭಾರತೀಯ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ತಲೆಬಾಗಿದರೆ ಮತ್ತು ನಮ್ಮ ಮೇಲೆ ಷರತ್ತುಗಳನ್ನು ಹಾಕಲು ಪ್ರಯತ್ನಿಸಿದರೆ, ನಾವು ಅದನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಷರತ್ತು ಒಪ್ಪುವುದಿಲ್ಲ ಎಂದ ಬಾಂಗ್ಲಾದೇಶ: ಒತ್ತಡದ ಸಂದರ್ಭದಲ್ಲಿ ಟಿ-20 ವಿಶ್ವಕಪ್ ಆಡಲು ಬಾಂಗ್ಲಾದೇಶ ತಂಡವನ್ನು ಭಾರತಕ್ಕೆ ಪ್ರಯಾಣಿಸಿ ಎಂದು ಹೇಳಲು ಆಗುವುದಿಲ್ಲ. ಢಾಕಾದಲ್ಲಿ ಇತ್ತೀಚೆಗೆ ನಡೆದ ಐಸಿಸಿ ಮತ್ತು ಬಿಸಿಬಿ ಅನೇಕ ಸಭೆಗಳಲ್ಲಿಯೂ ನಾವು ನಮ್ಮ ನಿಲುವನ್ನು ಬದಲಾಯಿಸಿಲ್ಲ. ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯಬೇಕು ಎಂದು ಐಸಿಸಿ ಒತ್ತಾಯಿಸುತ್ತದೆ, ಆದರೆ ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದ್ದಾರೆ.

ಈ ಗೊಂದಲವನ್ನು ಯಾವಾಗ ಬಗೆಹರಿಸಲಾಗುತ್ತದೆ ಎಂದು ಗಡುವನ್ನು ನಿಗದಿಪಡಿಸಬೇಕಿದೆ. ಪಿಸಿಬಿ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದರೆ ಮೂರು ವಾರಗಳಿಗಿಂತ ಕಡಿಮೆ ಸಮಯದ ಮೊದಲೇ ಸಂಭಾವ್ಯ ಬಿಕ್ಕಟ್ಟನ್ನು ಬಗೆಹರಿಸಿ ಸ್ಪಷ್ಟನೆಗಳನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.

ಬಾಂಗ್ಲಾದೇಶದ ನಿಲುವನ್ನು ಬೆಂಬಲಿಸಲಾಗಿದೆಯೇ? ಎಂಬ ಪ್ರಶ್ನಗೆ ಪಿಸಿಬಿ ಪ್ರತಿಕ್ರಿಯೆ ನೀಡಿಲ್ಲ. ಬಿಸಿಸಿಐ ಕೋಲ್ಕತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಫಿಜುರ್ ರಹಮಾನ್ ಅವರನ್ನು ಐಪಿಎಲ್ 2026ರ ತಮ್ಮ ತಂಡದಿಂದ ತೆಗೆದುಹಾಕುವಂತೆ ಸೂಚಿಸಿದ ನಂತರ ಪ್ರಾರಂಭವಾದ ವಿವಾದ ಇನ್ನೂ ಬಗೆಹರಿದಿಲ್ಲ.

ಸದ್ಯ ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ಹದಗೆಡುತ್ತಿದೆ. ರಾಜಕೀಯ ಸಂಬಂಧಗಳನ್ನು ಉಲ್ಲೇಖಿಸಿ ಬಾಂಗ್ಲಾದೇಶ ಸರ್ಕಾರ ಭಾರತದಲ್ಲಿ ತಮ್ಮ ರಾಷ್ಟ್ರೀಯ ತಂಡವು ಪಂದ್ಯಗಳನ್ನು ಆಡುವುದಿಲ್ಲ ಎಂದು ಔಪಚಾರಿಕವಾಗಿ ಹೇಳಿತ್ತು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular