ಬೆಂಗಳೂರು ನಗರದಲ್ಲಿ ಪೇ & ಪಾರ್ಕ್ ವ್ಯವಸ್ಥೆ ಜಾರಿಗೊಳಿಸಲು ತಯಾರಿ ನಡೆದಿದೆ. ನಗರದ ಆಯ್ದ ಪ್ರದೇಶಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಸಿಬಿಡಿ, ಹೆಬ್ಬಾಳ, ಯಲಹಂಕ ಭಾಗದಲ್ಲಿ ಜನರು ವಾಹನಗಳನ್ನು ನಿಲ್ಲಿಸಲು ಹಣವನ್ನು ಪಾವತಿ ಮಾಡಬೇಕಿದೆ. ವಾರದ ದಿನದ ಮತ್ತು ಮಾಸಿಕ ಪಾಸುಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ.
ಪೇ & ಪಾರ್ಕ್ ವ್ಯವಸ್ಥೆ ಯಾವಾಗಿನಿಂದ ಆರಂಭ? ಎಂಬ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ. ಆದರೆ ವಾಹನಗಳ ಪಾರ್ಕಿಂಗ್ ಶುಲ್ಕ, ಪಾಸುಗಳ ವಿವರಗಳನ್ನು ನೀಡಲಾಗಿದೆ. ಸಂಚಾರಿ ಪೊಲೀಸರು ಪಟ್ಟಿ ಮಾಡಿರುವ ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಕಾರುಗಳಿಗೆ ಮೊದಲ 30 ನಿಮಿಷಕ್ಕೆ 30 ರೂ. ದ್ವಿಚಕ್ರವಾಹನಕ್ಕೆ 15 ರೂ.ಗಳ ದರ ನಿಗದಿ ಮಾಡಲಾಗಿದೆ. ದಿನದ ಪಾಸುಗಳ ದರ ಕಾರುಗಳಿಗೆ 150 ರೂ. ಮತ್ತು ಬೈಕ್ಗಳಿಗೆ 75 ರೂ. ಆಗಿರಲಿದೆ. ತಿಂಗಳ ಪಾಸುಗಳ ದರ ಕಾರುಗಳಿಗೆ 3,000 ರೂ. ಮತ್ತು ಬೈಕ್ಗಳಿಗೆ 1,500 ರೂ. ಎಂದು ನಿಗದಿಗೊಳಿಸಲಾಗಿದೆ.
ಯಾವ-ಯಾವ ರಸ್ತೆಗಳು?
- 1 ಎ, 13ಎ ಮುಖ್ಯ ರಸ್ತೆ ಮತ್ತು 3ಎ, 3ಬಿ, 16 ಬಿ, 15 ಎ ಕ್ರಾಸ್ ರಸ್ತೆಗಳು ಮತ್ತು ಸಂದೀಪ್ ಉನ್ನಿಕೃಷ್ಣನ್ ರಸ್ತೆ ಯಲಹಂಕ ನ್ಯೂ ಟೌನ್ ವಾರ್ಡ್ ನಂಬರ್ 5.
- ಹೆಬ್ಬಾಳ ವಿಭಾಗದಲ್ಲಿ ಟ್ಯಾಂಕ್ ಬಂಡ್ ರೋಡ್, ತರಳಬಾಳು ರಸ್ತೆ, ಭೂಪಸಂದ್ರ ಮುಖ್ಯ ರಸ್ತೆ
- ಕರ್ಮರ್ಷಿಯಲ್ ಸ್ಟ್ರೀಟ್ (ಕಾಮರಾಜ್ ರಸ್ತೆ) ರಸ್ತೆಯಿಂದ ಒಹೆಚ್ಪಿ ರಸ್ತೆ, ಗರುಡಾ ರಸ್ತೆಯಿಂದ ಸಫೀನಾ ಪ್ಲಾಜಾ ಮುಖ್ಯ ರಸ್ತೆ, ಡಿಸ್ಪೆನ್ಸರಿ ರಸ್ತೆ-ಡಿಕನ್ಸನ್ ರಸ್ತೆ.
- ಡಿಸ್ಪೆನ್ಸರಿ ರಸ್ತೆ (ಒಪಿಹೆಚ್ ರಸ್ತೆ)ಯಿಂದ ಕಾಮರಾಜ್ ರಸ್ತೆ & ಇಬ್ರಾಹಿಂ ಶಾಲಿಬ್ ಸ್ಟ್ರೀಟ್ ರೋಡ್.
- ಮಿಲ್ಲರ್ಸ್ ರೋಡ್ ಜಂಕ್ಷನ್, ಪ್ಲಾಟಿನಂ ರೋಡ್, ಸೆಂಟ್ ಜಾನ್ಸ್ ಚರ್ಚ್ ರೋಡ್, ಸೆಂಟ್ ಜಾನ್ಸ್ ರೋಡ್.
- ದತ್ತಾತ್ತೇಯ ದೇವಾಲಯ ವಾರ್ಡ್ನಲ್ಲಿ 2ನೇ ದೇವಾಲಯ ರಸ್ತೆ, ಸಂಪಿಗೆ ರಸ್ತೆ, ರೈಲ್ವೇ ಸಮಾನಾಂತರ ರಸ್ತೆ ಮತ್ತು ಬಿವಿಕೆ ಅಯ್ಯಾಂಗಾರ್ ರಸ್ತೆ.
- ಮಾವಳ್ಳಿ ಟ್ಯಾಂಕ್ ಬಾಂಡ್ ರೋಡ್, ಡಿವಿಜಿ ರೋಡ್ ಸುಂಕೇನಹಳ್ಳಿ ವಾರ್ಡ್. ಶಂಕರಮಠ ರಸ್ತೆ ಮತ್ತು ಪಿಎಂಕೆ ರಸ್ತೆ.
- ವಾಣಿ ವಿಲಾಸ ರಸ್ತೆ, ವಾಸವಿ ದೇವಾಲಯ ರಸ್ತೆ, ಕನಕಪುರ ರೋಡ್, ಡಯಾಗ್ನಲ್ ರೋಡ್, ಪಟಾಲಮ್ಮ ರೋಡ್ & ಟಿ.ಮರಿಯಪ್ಪ ರೋಡ್.
ಬೆಂಗಳೂರು ನಗರದಲ್ಲಿ ಹಲವಾರು ರಸ್ತೆಗಳಲ್ಲಿ ಈಗಾಗಲೇ ಪೇ & ಪಾರ್ಕ್ ವ್ಯವಸ್ಥೆ ಜಾರಿಗೆ ಬಂದಿದೆ. ವಾಹನಗಳ ದಟ್ಟಣೆ, ಜನರ ದಟ್ಟಣೆ ನೋಡಿಕೊಂಡು ಸಂಚಾರಿ ಪೊಲೀಸರ ಅನುಮತಿಯನ್ನು ಪಡೆದು ಹಂತ ಹಂತವಾಗಿ ವಿವಿಧ ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.
ಈಗ ಅದೇ ಮಾದರಿಯಲ್ಲಿ ಪ್ರಮುಖ ವಾಣಿಜ್ಯ ವ್ಯವಹಾರ ನಡೆಯುವ ರಸ್ತೆಗಳನ್ನು ಪಟ್ಟಿ ಮಾಡಲಾಗಿದ್ದು, ಯಾವಾಗ ಇದನ್ನು ಜಾರಿಗೊಳಿಸಲಾಗುತ್ತದೆ? ಎಂಬ ಕುರಿತು ಮಾಹಿತಿ ಇಲ್ಲ. ರಸ್ತೆ, ದರಪಟ್ಟಿಯನ್ನು ಬಿಡುಗೆ ಮಾಡಿರುವ ಕಾರಣ ಕೆಲವೇ ದಿನಗಳಲ್ಲಿ ಇದನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.

