HomeLive Newsಇಂದು ʼವಾರ್ ಆಫ್ ಸ್ಟಾರ್ʼ ಪಂದ್ಯದಲ್ಲಿ ಪವನ್ ಸೆಹ್ರಾವತ್ ಮತ್ತು ಪರ್ದೀಪ್ ನರ್ವಾಲ್ ಮುಖಾಮುಖಿ

ಇಂದು ʼವಾರ್ ಆಫ್ ಸ್ಟಾರ್ʼ ಪಂದ್ಯದಲ್ಲಿ ಪವನ್ ಸೆಹ್ರಾವತ್ ಮತ್ತು ಪರ್ದೀಪ್ ನರ್ವಾಲ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ 81ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ಯುಪಿ ಯೋಧಾಸ್ ಮುಖಾಮುಖಿಯಾಗಲಿದ್ದು, ಪವನ್ ಸೆಹ್ರಾವತ್ ಮತ್ತು ಪರ್ದೀಪ್ ನರ್ವಾಲ್ ಈ ಇಬ್ಬರು ಸ್ಟಾರ್ ರೈಡರ್ಗಳ ಅಬ್ಬರ ನೋಡಲು ಕಬಡ್ಡಿ ಅಭಿಮಾನಿಗಳು ಸಜ್ಜಾಗಿದ್ದಾರೆ. ಎರಡು ತಂಡಗಳು ಸತತ ಸೋಲಿನಿಂದ ಕಬಡ್ಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿ ಉಳಿದುಕೊಂಡಿದ್ದು, ಜಯದ ಹುಡುಕಾಟದಲ್ಲಿವೆ.

ತೆಲುಗು ಟೈಟನ್ಸ್ ನಿನ್ನೆ ತನ್ನ ಹೋಂ ಗ್ರೌಂಡ್ ನಲ್ಲೂ ಕೂಡ ಸೋಲು ಕಾಣುವ ಮೂಲಕ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದಾರೆ. ಇಂದು ಪವನ್ ಸೆಹ್ರಾವತ್ ಅವರಿಂದ ಸಾಕಷ್ಟು ರೈಡಿಂಗ್ ಪಾಯಿಂಟ್ ಗಳು ಬಂದರೆ ತೆಲುಗು ಟೈಟನ್ಸ್ ತನ್ನ ಮನೆಯಂಗಳದಲ್ಲಿ ಜಯಭೇರಿ ಆಗಬಹುದು. ಇದಕ್ಕೂ ಮುನ್ನ ಎಂಬತ್ತನೇ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಾಂಗ್ ಡೆಲ್ಲಿ ಕಾದಾಟ ನಡೆಸಲಿವೆ.

For Latest News Updates, Join Our Whatsapp Community🚩
RELATED ARTICLES

Most Popular