ಟೇಕಾಫ್ ಗೆ ಮುನ್ನ 180 ಜನರಿದ್ದ ವಿಮಾನಕ್ಕೆ ಭಾರೀ ಬೆಂಕಿ: ಜ್ವಾಲೆ, ಹೊಗೆಯ ನಡುವೆ ಪ್ರಯಾಣಿಕರು ಪಾರು | ವೀಡಿಯೊ

ಬ್ರೆಜಿಲ್‌ ನ ಸಾವೊ ಪಾಲೊದ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(GRU) ಇಂದು LATAM ಏರ್‌ಲೈನ್ಸ್‌ನ ಏರ್‌ಬಸ್ A320 ವಿಮಾನವು ಟೇಕಾಫ್ ಆಗುವ ಸ್ವಲ್ಪ ಮೊದಲು ಬೆಂಕಿ ಹೊತ್ತಿಕೊಂಡಿದೆ. ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತುರ್ತು ಸ್ಥಳಾಂತರಿಸಲಾಯಿತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹೊಗೆ ವೇಗವಾಗಿ ಕ್ಯಾಬಿನ್ ಅನ್ನು ತುಂಬಿತು ಮತ್ತು ವಿಮಾನದ ಒಂದು ರೆಕ್ಕೆಯ ಕೆಳಗೆ ಜ್ವಾಲೆಗಳು ಗೋಚರಿಸುತ್ತಿದ್ದವು. ಪ್ರಯಾಣಿಕರು ಟಾರ್ಮ್ಯಾಕ್‌ ನಾದ್ಯಂತ ಓಡಾಡುತ್ತಿದ್ದಂತೆ ವಿಮಾನ ಸಿಬ್ಬಂದಿ ತ್ವರಿತವಾಗಿ ಪ್ರಯಾಣಿಕರನ್ನು ಸ್ಥಳಾಂತರಿಸಲು ಆದೇಶಿಸಿದರು, ಗಾಳಿ ತುಂಬಿದ ಸ್ಲೈಡ್‌ಗಳನ್ನು ಬಳಸಿದರು. ನಂತರ ಎಲ್ಲರೂ ಪಾರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿಮಾನವು ಟೇಕ್ ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಕ್ಯಾಬಿನ್ ಇದ್ದಕ್ಕಿದ್ದಂತೆ ಹೊಗೆಯಿಂದ ತುಂಬಿತ್ತು, ಮತ್ತು ಪ್ರಯಾಣಿಕರು ಕಿಟಕಿಗಳ ಮೂಲಕ ರೆಕ್ಕೆಯ ಕೆಳಗೆ ಜ್ವಾಲೆಗಳನ್ನು ನೋಡಿದ್ದಾರೆ. ಆದರೆ LATAM ಏರ್‌ಲೈನ್ಸ್ ಬೆಂಕಿ ವಿಮಾನದಿಂದಲ್ಲ, ನೆಲದ ಉಪಕರಣಗಳಿಂದಲೇ ಹುಟ್ಟಿಕೊಂಡಿತು ಎಂದು ಸ್ಪಷ್ಟಪಡಿಸಿದೆ. ಬ್ರೆಜಿಲ್‌ನ ಪೋರ್ಟೊ ಅಲೆಗ್ರೆಗೆ ಹೊರಡಲು ನಿಗದಿಯಾಗಿದ್ದ LA3418 ವಿಮಾನಕ್ಕೆ ಲಗೇಜ್ ಲೋಡ್ ಮಾಡುವಾಗ ಮೂರನೇ ವ್ಯಕ್ತಿಯ ಸರಕು ಕಂಪನಿಯಿಂದ ನಿರ್ವಹಿಸಲ್ಪಡುವ ಲಗೇಜ್ ಲೋಡರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ರೀತಿಯ ಪರಿಸ್ಥಿತಿಗೆ ತರಬೇತಿ ಪಡೆದ ಉದ್ಯೋಗಿಗಳ ಸಹಾಯದಿಂದ ಪ್ರಯಾಣಿಕರನ್ನು ಬೋರ್ಡಿಂಗ್ ಸೇತುವೆ ಮತ್ತು ಎಸ್ಕೇಪ್ ಸ್ಲೈಡ್ ಮೂಲಕ ವಿಮಾನದಿಂದ ಸ್ಥಳಾಂತರಿಸಲಾಯಿತು ಎಂದು ತಿಳಿಸಿದೆ. ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read