ಹಾಸನ ಯಾರ್ಡ್ ನಲ್ಲಿ ಸುರಕ್ಷತೆ ಸಂಬಂಧಿತ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮೈಸೂರು -ತಾಳಗುಪ್ಪ -ಮೈಸೂರು ಎಕ್ಸ್ ಪ್ರೆಸ್ ಮತ್ತು ಅರಸೀಕೆರೆ -ಮೈಸೂರು ಪ್ಯಾಸೆಂಜರ್ ರೈಲುಗಳ ಪ್ರಯಾಣವನ್ನು ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ರದ್ದುಗೊಳಿಸಲಾಗಿದೆ.
ಮೈಸೂರು -ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 29, ಮೇ 4 ಮತ್ತು ಮೇ 6ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದೆ. ಅರಸೀಕೆರೆ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.
ಮೈಸೂರು -ಅರಸೀಕೆರೆ ಪ್ಯಾಸೆಂಜರ್ ರೈಲು ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಮಾವಿನಕೆರೆ ಮತ್ತು ಅರಸೀಕೆರೆ ನಡುವೆ ರದ್ದುಗೊಳ್ಳಲಿದೆ. ಮಾವಿನಕೆರೆ ನಿಲ್ದಾಣದಲ್ಲಿ ಪ್ರಯಾಣ ಕೊನೆಗೊಳಿಸಲಿದೆ.
ಯಶವಂತಪುರ -ಕಾರವಾರ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 29, ಮೇ 4 ಮತ್ತು ಮೇ 6ರಂದು ಬೆಂಗಳೂರು ವಿಭಾಗದಲ್ಲಿ ಸುಮಾರು 65 ನಿಮಿಷ ವಿಳಂಬವಾಗಿ ಸಂಚರಿಸುತ್ತದೆ ಎಂದು ಹೇಳಲಾಗಿದೆ.

