HomeLatest NewsBREAKING : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಫೆ. 28 ರಂದು ನಿಗದಿಯಾಗಿದ್ದ ಪೋಷಕರ-ಶಿಕ್ಷಕರ ಸಭೆ ಮುಂದೂಡಿಕೆ...

BREAKING : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಫೆ. 28 ರಂದು ನಿಗದಿಯಾಗಿದ್ದ ಪೋಷಕರ-ಶಿಕ್ಷಕರ ಸಭೆ ಮುಂದೂಡಿಕೆ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 28ರಂದು ಆಯೋಜಿಸಲಾಗಿದ್ದ ‘ಪೋಷಕ-ಶಿಕ್ಷಕರ ಸಭೆ’ಯನ್ನು (PTM) ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಇಲಾಖೆಯು, ಫೆಬ್ರವರಿ 28ರಂದು ರಾಜ್ಯ ಮಟ್ಟದ ಶೈಕ್ಷಣಿಕ ಮಹಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಶಾಲಾ ಶಿಕ್ಷಕರು, ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಬೇಕಾಗಿರುವುದರಿಂದ, ಅಂದು ನಿಗದಿಯಾಗಿದ್ದ ಸಭೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.

ಹೊಸ ದಿನಾಂಕ ಯಾವಾಗ? ಮರು ನಿಗದಿಪಡಿಸಲಾದ ವೇಳಾಪಟ್ಟಿಯಂತೆ, ಪೋಷಕ-ಶಿಕ್ಷಕರ ಸಭೆಯು ಇದೇ ಮಾರ್ಚ್ 07, 2026 (ಶನಿವಾರ) ರಂದು ನಡೆಯಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಸ್ಥರು ಈ ಸೂಚನೆಯನ್ನು ಪಾಲಿಸಬೇಕು ಮತ್ತು ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular