HomeKarnatakaಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರೆದ ಅಕ್ರಮ: ಖಾಸಗಿ ಭಾಗದಲ್ಲಿ ತಂಬಾಕು, ಸಿಮ್ ಕಾರ್ಡ್ ಇಟ್ಟುಕೊಂಡು ಬಂದು...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರೆದ ಅಕ್ರಮ: ಖಾಸಗಿ ಭಾಗದಲ್ಲಿ ತಂಬಾಕು, ಸಿಮ್ ಕಾರ್ಡ್ ಇಟ್ಟುಕೊಂಡು ಬಂದು ಕೈದಿಗೆ ತಲುಪಿಸುತ್ತಿದ್ದ ಮಹಿಳೆ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳೆಯೊಬ್ಬರು ವಿಚಾರಣಾಧೀನ ಕೈದಿಗೆ ತಂಬಾಕು, ಸಿಮ್ ಕಾರ್ಡ್ ಪೂರೈಸಲು ಅವುಗಳನ್ನು ತನ್ನ ಖಾಸಗಿ ಭಾಗದಲಿಟ್ಟುಕೊಂಡು ಬಂದ ಘಟನೆ ನಡೆದಿದೆ.

27 ವರ್ಷದ ಮಹಿಳೆಯೊಬ್ಬಳು ಕೈದಿ ಫರ್ಹಾನ್ ಖಾನ್‌ಗೆ ತಂಬಾಕು ಹಾಗೂ 5ಜಿ ಸಿಮ್ ಕಾರ್ಡ್‌ಗಳನ್ನು ಖಾಸಗಿ ಭಾಗದಲ್ಲಿ ಅಡಗಿಸಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದು, ಮಹಿಳಾ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಿಳೆ ಮಾರ್ಚ್ 26ರಂದು ಸಂಜೆ ಸುಮಾರು 4 ಗಂಟೆಗೆ ಕೈದಿ ಭೇಟಿಗೆ ಬಂದಿದ್ದಳು. ಭೇಟಿಯ ವಿಭಾಗದಲ್ಲಿ ರಿತಿಕಾ ರೈ ಎಂಬಾಕೆ ಅಂಡರ್‌ಟ್ರಯಲ್ ಕೈದಿ ಫರ್ಹಾನ್ ಖಾನ್ ನನ್ನು ಭೇಟಿ ಮಾಡಲು ಪಾಸ್ ಪಡೆದು ಬಂದಿದ್ದಳು. ಸಾಮಾನ್ಯ ತಪಾಸಣೆ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅನುಮಾನ ಉಂಟಾಗಿ ಸವಿವರ ಪರಿಶೀಲನೆ ನಡೆಸಿದಾಗ, ಮಹಿಳೆ ತನ್ನ ದೇಹದ ಖಾಸಗಿ ಭಾಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್‌ಗಳನ್ನು ಹಾಗೂ ಏರ್ಟೆಲ್ 5ಜಿ ಸಿಮ್ ಕಾರ್ಡ್‌ಗಳನ್ನು ಅಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣವೇ ಮಹಿಳೆಯನ್ನು ವಶಕ್ಕೆ ಪಡೆದು, ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ರಿತಿಕಾ ರೈ ಮತ್ತು ಫರ್ಹಾನ್ ಖಾನ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022 ಮತ್ತು ಬಿಎನ್‌ಎಸ್ ಸೆಕ್ಷನ್ 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular