ಬೆಂಗಳೂರು: ಪರಪ್ಪನ ಅಗ್ರಹಾರದ ವಿಚಾರಣಾಧೀನ ಕೈದಿಗಳು ನಮಗೆ ಡಿಜಿಪಿ ಅಲೋಕ್ ಕುಮಾರ್ ಅವರೇ ಮೊಬೈಲ್ ಕೊಟ್ಟಿದ್ದಾರೆ. ದುಡ್ಡು ಕೊಟ್ಟರೆ ಜೈಲಿನಲ್ಲಿ ಎಲ್ಲವೂ ಸಿಗುತ್ತೆ. ಐಪಿಎಲ್ ಮ್ಯಾಚ್ ಇದೆ ಕಪ್ ನಮ್ದೆ ಎಂದು ವಿಡಿಯೋ ಮಾಡಿ ವೈರಲ್ ಮಾಡಿರುವ ಘಟನೆ ನಡೆದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ಗಳ ಬ್ಯಾಅರಕ್ ಚೇಂಜ್ ಮಾಡುವಂತೆ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದ ಬೆನ್ನಲ್ಲೇ ಹಾಅಗೂ ಜೈಲಿನ ಕೈದಿಗಳಿಗೆ ಮೊಬೈಲ್, ಗಾಂಜಾ, ಸ್ಗರೇಟ್ ಇನ್ನಿತರ ನಿಷೇಧಿತ ವಸ್ತುಗಳು ಸಿಗದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದ ಕಾರಣಕ್ಕೆ ಅಲೋಕ್ ಕುಮಾರ್ ಮೇಲಿನ ದ್ವೇಷಕ್ಕೆ ವಿಚಾರಣಾಧೀನ ಕೆಲ ಕೈದಿಗಳು ಈರೀತಿ ವಿಡಿಯೋ ಹರಿಬಿಟ್ಟಿದ್ದಾರೆ.
ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಕಳಮ್ಕತರುವ ಉದ್ದೇಶದಿಂದ ಜೈಲಿನಲ್ಲಿರುವ ಕೈದಿಗಳೇ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಜೈಲಿನಲ್ಲಿ ಕಟ್ಟುನಿಟ್ತಿನ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಕೈದಿಗಳಿಗೆ ಮೊಬೈಲ್ ಸಿಕಿದ್ದು ಹೇಗೆ? ಎಂದು ಜೈಲಿನ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಕಾರಾಗೃಹದ 9ನೇ ಬ್ಯಾರಕ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಡ್ರೈನೇಜ್ ಮಾರ್ಗದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ.
ಹಾಲಿನ ಪ್ಯಾಕೆಟ್ಗಳಲ್ಲಿ ಮೊಬೈಲ್ ಗಳನ್ನು ಸುತ್ತಿ ಅಡಗಿಸಿಡಲಾಗಿದ್ದು, ಮೊಬೈಲ್ಗಳನ್ನು ಅಧಿಕಾರಿಗಳು ಆರೋಪಿಗಳಿಂದಲೇ ಹೊರತೆಗೆಸಿದ್ದಾರೆ. ತನಿಖೆಯಲ್ಲಿ ವಿಡಿಯೋ ಮಾಡಿದ್ದ ಕೈದಿಗಳನ್ನು ಪತ್ತೆಹಚ್ಚಲಾಗಿದೆ. ದರ್ಶನ್, ಅಭಿಷೇಕ್ ಮತ್ತು ಎಂಡ್ರೋಸ್ ಎಂಬ ವಿಚಾರಣಾಧೀನ ಕೈದಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಇವರು ಹಿಂದೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಬೇರೆ ಬ್ಯಾರಕ್ಗೆ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಅಸಮಾಧಾನದಿಂದ ಉದ್ದೇಶಪೂರ್ವಕವಾಗಿ ಡಿಜಿಪಿ ಅಲೋಕ್ ಕುಮಾರ್ ಹೆಸರಿಗೆ ಚ್ಯುತಿ ತರಲು ವಿಡಿಯೋ ಮಾಡಿ ವೈರಲ್ ಮಾಡಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಕ್ವಾರಂಟೈನ್ ಸೆಲ್ಗೆ ಸ್ಥಳಾಂತರಿಸಲಾಗಿದೆ.

