ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಗೃಹ ಸಚಿವ ಪರಮೇಶ್ವರ್,ಉದ್ಯಮಿ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಆಘಾತ ತಂದಿದೆ. ಮೂರು ದಿನಗಳ ಹಿಂದೆ ಅವರು ದುಬೈನಿಂದ ಬಂದಿದ್ದರು. 20 ನಿಮಿಷ ಬರ್ತೀನಿ ಎಂದು ಚೇಂಬರ್ ಗೆ ಹೋಗಿ ಬಾಗಿಲು ಹಾಕಿಕೊಂಡವರು ಬಾಗಿಲು ತೆರೆದಿಲ್ಲ. ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಸಿ.ಜೆ.ರಾಯ್ ಅವರ ಕಂಪನಿ ಮೇಲೆ ಡಿಸೆಂಬರ್ ನಲ್ಲಿ ಐಟಿ ದಾಳಿ ನಡೆದಿತ್ತು. ರಾಯ್ ದುಬೈನಿಂದ ಬೆಂಗಳೂರಿಗೆ ಮೂರು ದಿನಗಳ ಹಿಂದೆ ಬಂದಿದ್ದರು. ಫೆಬ್ರವರಿ ೪ರೊಳಗೆ ಎಲ್ಲವನ್ನೂ ಅಂತಿಮ ಮಾಡಲು ಅವರನ್ನು ಕರೆದಿದ್ದರು. ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳಲು ನಿರ್ಧರಿಸಿದ್ದರು. 20 ನಿಮಿಷ ಬರುತ್ತೇನೆ ಎಂದು ಸಿ.ಜೆ.ರಾಯ್ ಅವರ ಚೇಂಬರ್ ಗೆ ಹೋಗಿದ್ದಾರೆ. 20 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡವರು ಹೊರಗೆ ಬಂದಿಲ್ಲ. ಬಾಗಿಲು ಒಡೆದು ನೋಡಿದಾಗ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರವನ್ನು ತನಿಖೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಂದರು ಗೊತ್ತಿಲ್ಲ. ತನಿಖೆ ಬಳಿಕ ಗೊತ್ತಾಗಲಿದೆ ಎಂದರು.
ದಕ್ಷಿಣ ಭಾರತದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್, ಜನವರಿ 30ರಂದು ತಮ್ಮ ಕಚೇರಿಯ ಚೇಂಬರ್ ನಲ್ಲಿಯೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ಅಧಿಕಾರಿಗಳು ವಿಚಾರಣೆಗೆಂದು ಬಂದಿದ್ದ ವೇಳೆ ಅವರೊಂದಿಗೆ ಮಾತನಾಡಿ, ಚೇಂಬರ್ ಗೆ ಹೋದ ಸಿ.ಜೆ.ರಾಯ್, ಚೇಂಬರ್ ನಲ್ಲಿಯೇ ಏಕಾಏಕಿ ಗುಂಡು ಹಾಅರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

