HomeLatest Newsಪಂತ್ ತಮ್ಮ ಆಟ ಬದಲಿಸಬೇಕಿಲ್ಲ: ರವಿಶಾಸ್ತ್ರಿ ಸಲಹೆ

ಪಂತ್ ತಮ್ಮ ಆಟ ಬದಲಿಸಬೇಕಿಲ್ಲ: ರವಿಶಾಸ್ತ್ರಿ ಸಲಹೆ

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಏರಿಳಿತಗಳನ್ನು ಕಾಣುತ್ತಿದ್ದು, ವಿಶೇಷವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಒನ್ ಆಯ್ಕೆಯಾಗಿ ಮುಂದುವರಿದಿರುವ ಪಂತ್, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂಬರುವ ಏಕಕ ದಿನ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ತಂಡವನ್ನು ಕಟ್ಟುತ್ತಿದ್ದು, ಈ ಯೋಜನೆಗಳಲ್ಲಿ ಪಂತ್ ಸದ್ಯ ಎಲ್ಲೂ ಕಾಣುತ್ತಿಲ್ಲ.

ಪಂತ್ ಅವರ ಈ ಹಿನ್ನಡೆಗೆ ಅಸ್ಥಿರತೆ ಮತ್ತು ನಿರ್ಣಾಯಕ ಹಂತಗಳಲ್ಲಿ ಜವಾಬ್ದಾರಿಯಿಲ್ಲದೆ ಆಡುವ ಆಕ್ರಮಣಕಾರಿ ಶೈಲಿಯೇ ಪ್ರಮುಖ ಕಾರಣ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಈ ಶೈಲಿ ಯಶಸ್ವಿಯಾದರೂ, ಏಕದಿನ ಮತ್ತು ಟಿ20ಗಳಲ್ಲಿ ಇದು ಹಿನ್ನಡೆಯನ್ನುಂಟು ಮಾಡಿದೆ. ಇದರೊಂದಿಗೆ ಕೆ.ಎಲ್. ರಾಹುಲ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರಂತಹ ಆಟಗಾರರ ತೀವ್ರ ಪೈಪೋಟಿಯೂ ಪಂತ್ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ.

ಸ್ವಾಭಾವಿಕ ಆಟ ಬದಲಿಸದಂತೆ ರವಿಶಾಸ್ತ್ರಿ ಸಲಹೆ: ಪಂತ್ ತಮ್ಮ ಆಟದ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕು ಎಂಬ ಚರ್ಚೆಗಳು ನಡೆಯುತ್ತಿರುವ ಮಧ್ಯೆ, ಮಾಜಿ ಕೋಚ್ ರವಿಶಾಸ್ತ್ರಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಟೈಮ್ಸ್ ಆಫ್ ಇಂಡಿಯಾ’ ಜತೆ ಮಾತನಾಡಿದ ಅವರು, ಪಂತ್ ತಮ್ಮ ಸ್ವಾಭಾವಿಕ ಆಟವನ್ನು ಬದಲಾಯಿಸಬಾರದು, ಬದಲಿಗೆ ಮೈದಾನದಲ್ಲಿ ‘ಸ್ಮಾರ್ಟ್’ ಆಗಿ ಯೋಚಿಸಿ ಆಡಬೇಕು ಎಂದು ಸಲಹೆ ನೀಡಿದ್ದಾರೆ. ಪಂತ್ ಅಗಾಧ ಪ್ರತಿಭೆಯುಳ್ಳ ಆಟಗಾರನಾಗಿದ್ದು, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಜಾಣ್ಮೆಯಿಂದ ಆಡುವುದು ಮಾತ್ರ ಮುಖ್ಯ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular