HomeKarnatakaBIG NEWS: ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ಟ್ರಸ್ಟಿಗಳು ಮೊದಲು ಮಠ ತೊರೆಯಲಿ: ವಚನಾನಂದ ಶ್ರೀ...

BIG NEWS: ಹರಿಹರ ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ಟ್ರಸ್ಟಿಗಳು ಮೊದಲು ಮಠ ತೊರೆಯಲಿ: ವಚನಾನಂದ ಶ್ರೀ ಆಗ್ರಹ

ದಾವಣಗೆರೆ: ದಾವಣಗೆರೆ ಹರಿಹರ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವಿನ ಸಂಘರ್ಷ ಮುಂದುವರೆದಿದ್ದು, ಇಂದು ಮಠದಲ್ಲಿ ಮತ್ತೆ ಹೈಡ್ರಾಮ ನಡೆದಿದೆ. ಒಂದೆಡೆ ಟ್ರಸ್ಟಿಗಳು 2018ರಿಂದ 2026ರವರೆಗಿನ ಲೆಕ್ಕ ಕೊಡಲು ಆಗಮಿಸಿದ್ದಾರೆ. ಮತ್ತೊಂದೆ ವಚನಾನಂದ ಶ್ರಿಗಳನ್ನು ಭಕ್ತರು ಮತ್ತೆ ಪಂಚಮಸಾಲಿ ಪೀಠದಲ್ಲಿ ಕೂರಿಸಿದ್ದು, ಭಕ್ತರ ಜೊತೆ ಸ್ವಾಮೀಜಿ ಸಮಾಲೋಚನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ವಚನಾನಂದ ಶ್ರೀಗಳು, ನನ್ನ ಪರವಗಿ ಅಪಾರ ಭಕ್ತ ಸಮೂಹವಿದೆ. ಕಳೆದ ಎಂಟು ವರ್ಷಗಳಿಂದ ಮಠವನ್ನು ಅತ್ಯುತ್ತಮವಾಗಿ ಕಟ್ಟಿದ್ದೇನೆ. ಟ್ರಸ್ಟಿಗಳು ನನ್ನನ್ನು ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ನಾನು ಮಠ ಖಾಲಿಮಾಡುವುದಲ್ಲ, ಮೊದಲು ನಾಲ್ವರು ಟ್ರಸ್ಟಿಗಳು ಮೊದಲು ಮಠ ತೊರೆಯಲಿ ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಮಠದಲ್ಲಿ ಲೆಕ್ಕಪತ್ರ ಮಂಡನೆ ಸಭೆ ನಡೆಯಲಿದೆ. ಟ್ರಸ್ಟಿಗಳು ಲೆಕ್ಕಕೊಡಲಿದ್ದಾರೆ ಎಂದರು. ಇಂದು ಭಕ್ತರು ನಮ್ಮನ್ನು ಮಠಕ್ಕೆ ಕರೆತಂದು ಮತ್ತೆ ಪೀಠದಲ್ಲಿ ಕೂರಿಸಿದ್ದಾರೆ. ಎಂಟು ವರ್ಷಗಳ ಹಿಂದೆ ನಾವು ಪಟ್ಟಾಧಿಕಾರ ತೆಗೆದುಕೊಂದಾಗ ಮಠದಲ್ಲಿ ಏನೂ ಇರಲಿಲ್ಲ. ಮಠಕ್ಕೆ ರೂಪವೊಂದನ್ನು ನೀಡಿ ಸಾವಿರಾರು ಭಕ್ತರು ಮಠಕ್ಕೆ ಬರುವಂತೆ ಮಾಡಿದ್ದೇವೆ. ಈಗ ಮಠದಿಂದ ಹೊರ ಹಾಕಿದರೆ ಹೇಗೆ? ಯಾವ ಕಾರಣಕ್ಕೂ ಮಠದಿಂದ ಹೊರ ಹೋಗಲ್ಲ ಎಂದರು.

ನಾನು ಬಡ ಪಂಚಮಸಾಲಿ ರೈತ ಕುಟುಂಬದಿಂದ ಬೆಳೆದು ಬಂದಿದ್ದೇನೆ. ಮಠದಲ್ಲಿ ಐಷಾರಾಮಿ ಜೀವನ ನಡೆಸುತ್ತಿದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ನಾನು ವಿಐಪಿ ಸಂಸ್ಕ್ಟಿತಿ ಪಾಲನೆ ಮಾಡಿದ್ದರೆ ಸಾಮಾನ್ಯ ಭಕ್ತರು ನನ್ನ ಪರವಾಗಿ ಮಠಕ್ಕೆ ಬರಿತ್ತಿದ್ದರೇ? ಎಂದು ಪ್ರಶ್ನಿಸಿದರು.

ಗುರುಪೀಠದ ಟ್ರಸ್ಟ್ ನಲ್ಲಿ ಅವ್ಯವಹಾರ ನಡೆದಿದೆ. ಪೀಠದ ಮೊದಲ ಗುರುಗಳಾದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಕೂಡ ಲೆಕ್ಕಪತ್ರ ಕೇಳಿದ್ದರು. ಇದೇ ಕಾರಣಕ್ಕೆ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಠದಿಂದ ಹೊರಹಾಕಲಾಯಿತು. ಈಗ ಲೆಕ್ಕಪತ್ರವನ್ನು ಭಕ್ತರು ಕೇಳಿದ ಕಾರಣಕ್ಕೆ ನನ್ನನ್ನು ಮಠದಿಂದ ಹೊರ ಹಾಕುವ ಪ್ರಯತ್ನ ನಡೆದಿದೆ. ಇದು ಸಫಲವಾಗಲ್ಲ ಎಂದರು.

ಹೊನ್ನಳಿಯ ರಾಜ್ ಕುಮಾರ್ ಅವರು ಮಠದ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ ಆಡಳಿತ ಚನ್ನಾಗಿ ನಡೆಯುತ್ತಿದೆ. ಮಠದಲ್ಲಿ ಆಧ್ಯಾತ್ಮ, ಅಕ್ಷರ, ಅನ್ನದಾಸೋಹ ನಿರಂತರವಾಗಿ ನಡೆಯಬೇಕು. ಸ್ವಾಮೀಜಿಗಳನ್ನು ಮನೆಗೆ ಕರೆಸಿ ಒಮ್ಮೆಯ್ ಪಾದಪೂಜೆಯನ್ನೂ ಮಾಡದ ಟ್ರಸ್ಟ್ ಸದಸ್ಯರಿದ್ದಾರೆ. ಅವರಲ್ಲಿ ಅಹಂಕಾರ ಭಾವ ಹೆಚ್ಚಾಗಿದೆ. ನಾಲ್ವರು ಟ್ರಸ್ಟಿಗಳು ಮೊದಲು ಮಠ ತೊರೆಯಲಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular