HomeIndiaVideo | ರೈಲಿನಡಿ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದವನನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ GRP ಪೇದೆ

Video | ರೈಲಿನಡಿ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದವನನ್ನು ಪವಾಡಸದೃಶ ರೀತಿಯಲ್ಲಿ ರಕ್ಷಿಸಿದ GRP ಪೇದೆ

ಚಲಿಸುತ್ತಿದ್ದ ರೈಲೊಂದನ್ನು ಏರಲು ಓಡಿ ಹೋಗುವ ಯತ್ನದಲ್ಲಿ ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಸಿಲುಕಲಿದ್ದ ಪ್ರಯಾಣಿಕನೊಬ್ಬನನ್ನು ಜಿಆರ್‌ಪಿ ಪೇದೆಯೊಬ್ಬರು ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಜರುಗಿದೆ.

ವಿಜಯ್‌ ಮಾಲೇಕರ್‌, 74, ಹೆಸರಿನ ಈ ಪ್ರಯಾಣಿಕ ಮಧ್ಯ ರಾತ್ರಿಯ ವೇಳೆ ಚಲಿಸುತ್ತಿದ್ದ ರೈಲೊಂದನ್ನು ಏರಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆಯತಪ್ಪಿದ ಕಾರಣ ವಿಜಯ್‌ ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಿಯೇ ಇದ್ದ ಪೇದೆ ಕೂಡಲೇ ವಿಜಯ್‌ರನ್ನು ಮೇಲಕ್ಕೆತ್ತಿದ್ದಾರೆ. ಸಂಪೂರ್ಣ ಘಟನೆಯು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular