‘ಪಾಕಿಸ್ತಾನ ಜಿಂದಾಬಾದ್ ಓನ್ಲಿ ಮುಸ್ಲಿಂ ರಾಷ್ಟ್ರ’ ಎಂದು ಸ್ಟೇಟಸ್ ಹಾಕಿದ ಯುವಕ ಅರೆಸ್ಟ್

ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಓನ್ಲಿ ಮುಸ್ಲಿಂ ರಾಷ್ಟ್ರ ಎಂದು ಬರೆದು ಪಾಕಿಸ್ತಾನ ಧ್ವಜದ ಚಿತ್ರವಿದ್ದ ಫೋಟೋ ಸ್ಟೇಟಸ್ ಹಾಕಿದ ಆರೋಪದ ಮೇಲೆಗೆ ಯುವಕನೊಬ್ಬನನ್ನು ಬಂಧಿಸಲಾಗಿದೆ.

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕು ಹಿರೂರು ಗ್ರಾಮದ ಇಬ್ರಾಹಿಂ ಮುರ್ತುಜಾ ಸಾಹೇಬ್ ಮುಲ್ಲಾ(21) ಬಂಧಿತ ಯುವಕ ಎಂದು ಹೇಳಲಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಸೈಲೆಂಟ್ ಕಿಲ್ಲರ್ 35110 ಐಡಿಯಲ್ಲಿ ಆತ ಪಾಕಿಸ್ತಾನ ಜಿಂದಾಬಾದ್ ಸ್ಟೇಟಸ್ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಮುದ್ದೇಬಿಹಾಳದ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ವಹಿಸಿದೆ. ಹಿರೂರು ಗ್ರಾಮದ ಬೀಟ್ ಪೊಲೀಸ್ ಶಿವಪ್ಪ ಶರಣಪ್ಪ ಹಾಳಗೋಡಿ ಸರ್ಕಾರದ ಪರವಾಗಿ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read