HomeBeautyಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟಿ ತ್ವಚೆಯ ಪೋಷಣೆ ಮಾಡುತ್ತೆ ʼಆಕ್ಸಿಜನ್ʼ

ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟಿ ತ್ವಚೆಯ ಪೋಷಣೆ ಮಾಡುತ್ತೆ ʼಆಕ್ಸಿಜನ್ʼ

ಉಸಿರಾಡಲು ಆಕ್ಸಿಜನ್ ಹೇಗೆ ತುಂಬಾ ಮುಖ್ಯನೋ ಹಾಗೇ ಚರ್ಮದ ಪೋಷಣೆಗೂ ಆಕ್ಸಿಜನ್ ಅಷ್ಟೇ ಮುಖ್ಯ. ಇದರಿಂದ ಚರ್ಮಕ್ಕೆ ಹಲವು ಪ್ರಯೋಜನಗಳಿವೆ. ಹಾಗಾಗಿ ಆಕ್ಸಿಜನ್ ಚರ್ಮವನ್ನು ಹೇಗೆ ಪೋಷಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಆಕ್ಸಿಜನ್ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದರಿಂದ ಚರ್ಮದ ಮೇಲಿನ ಧೂಳು, ಕೊಳಕು, ಮಾಲಿನ್ಯಗಳು ನಿವಾರಣೆಯಾಗುತ್ತವೆ. ಇದರಿಂದ ಚರ್ಮ ಆರೋಗ್ಯವಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಹೆಚ್ಚಾಗಿ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ, ಆಹಾರದಲ್ಲಿನ ಏರಿಳಿತದಿಂದ, ಒತ್ತಡದಿಂದ ಚರ್ಮ ಕೋಶಗಳು ಸಾಯುತ್ತವೆ. ಈ ಚರ್ಮ ಕೋಶಗಳು ಹೊಸದಾಗಿ ಉತ್ಪತ್ತಿಯಾಗಲು ಮತ್ತು ದುರ್ಬಲವಾದ ಚರ್ಮಕೋಶಗಳು ಪುನರ್ ಚೇತನಗೊಳ್ಳಲು ಆಕ್ಸಿಜನ್ ಅತಿ ಅವಶ್ಯಕ.

*ಚರ್ಮದ ಯೌವನವನ್ನು ಕಾಪಾಡಲು ಸಹಾಯಕವಾಗುವ ಪ್ರೋಟೀನ್ ಅಂಶಗಳು ಉತ್ಪಾದನೆಯಾಗಲು ಆಕ್ಸಿಜನ್ ಅತಿ ಅವಶ್ಯಕ. ಆಕ್ಸಿಜನ್ ಸರಿಯಾದ ಪ್ರಮಾಣದಲ್ಲಿ ದೊರೆತರೆ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular