HomeKarnatakaಬರೋಬ್ಬರಿ 6 ಲಕ್ಷ ರೂ.ಗೆ ಮಾರಾಟವಾದ ಜೋಡೆತ್ತು

ಬರೋಬ್ಬರಿ 6 ಲಕ್ಷ ರೂ.ಗೆ ಮಾರಾಟವಾದ ಜೋಡೆತ್ತು

ಬೆಳಗಾವಿ: ಕಬ್ಬೂರ ಪಟ್ಟಣದ ಜೋಡೆತ್ತುಗಳು ಬರೋಬ್ಬರಿ 6.11 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಕಬ್ಬೂರ ಚಿಮ್ಮಟ ತೋಟದ ರೈತ ಮಹದೇವ ಗುರಪ್ಪ ಚಿಮ್ಮಟ ಅವರ ಮಾಲೀಕತ್ವದ ಜೋಡೆತ್ತುಗಳು ಇಷ್ಟೊಂದು ದುಬಾರಿ ಮೊತ್ತಕ್ಕೆ ಮಾರಾಟವಾಗಿದೆ.

ವಿವಿಧೆಡೆ ನಡೆದ ಕೃಷಿ ಮೇಳಗಳಲ್ಲಿ ಪ್ರದರ್ಶನಗೊಂಡಿದ್ದ ಈ ಜೋಡೆತ್ತುಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರವೀಂದ್ರ ತಾತ್ಯಾ ಕಾಕೊಂಡ್ರೆ ಎಂಬುವರು 6.11 ಲಕ್ಷ ರೂ.ಗಳನ್ನು ನೀಡಿ ಇವುಗಳನ್ನು ಖರೀದಿಸಿದ್ದಾರೆ.

ದಾಖಲೆಯ ಬೆಲೆಗೆ ಜೋಡೆತ್ತುಗಳು ಮಾರಾಟವಾಗಿದ್ದರಿಂದ ಕಬ್ಬೂರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಎತ್ತುಗಳನ್ನು ಬೀಳ್ಕೊಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular