HomeIndiaಸ್ಯಾನಿಟೈಸರ್‌ ಎಂದು ಭಾವಿಸಿ ಬಿಸಿ ಕಾಫಿ ಕೈಗೆ ಸುರವಿಕೊಂಡು ಫಜೀತಿ...!

ಸ್ಯಾನಿಟೈಸರ್‌ ಎಂದು ಭಾವಿಸಿ ಬಿಸಿ ಕಾಫಿ ಕೈಗೆ ಸುರವಿಕೊಂಡು ಫಜೀತಿ…!

ಈಗ ಹೋದಲ್ಲಿ, ಬಂದಲ್ಲಿ ಸ್ಯಾನಿಟೈಸರ್‌ ಅವಶ್ಯಕವಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಹಲವರಿಗೆ ಇಂದಿಗೂ ಸ್ಯಾನಿಟೈಸರ್‌ ಅನ್ನು ಬಿಟ್ಟು ಬಿಡಲು ಆಗುತ್ತಿಲ್ಲ. ಎಲ್ಲಿಯಾದರೂ ಸ್ಯಾನಿಟೈಸರ್‌ ಬಾಟಲಿ ಕಂಡರೆ ಅದನ್ನು ಒತ್ತಿ ಕೈಗೆ ಸುರಿದುಕೊಂಡು ಕೈಯನ್ನು ತಿಕ್ಕಿಕೊಂಡರೆ ಏನೋ ಸಮಾಧಾನ.

ಸ್ಯಾನಿಟೈಸರ್‌ ಎಂದು ತಿಳಿದು ಬಿಸಿಬಿಸಿ ಕಾಫಿ ಕೈಗೆ ಬಿದ್ದರೆ ಹೇಗೆ ಇರುತ್ತದೆ ? ಊಹಿಸಿಕೊಳ್ಳುವುದೂ ಕಷ್ಟ ಅಲ್ಲವೆ? ಆದರೆ ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್‌ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟೀ ಅಂಗಡಿಗೆ ಬಂದಿದ್ದಾನೆ. ಅಲ್ಲಿ ಕಾಫಿ ಮಗ್‌ ನೋಡಿದ್ದಾನೆ. ಅದನ್ನು ನೋಡಿದಾಗ ಆತನಿಗೆ ಅದು ಸ್ಯಾನಿಟೈಸರ್‌ ಬಾಟಲಿ ಎಂದು ಎನಿಸಿದೆ. ಅಷ್ಟೇ ಅದರ ಕೆಳಗೆ ಕೈ ಇಟ್ಟು ಅದನ್ನು ಒತ್ತಿದ್ದಾನೆ. ಬಿಸಿಬಿಸಿ ಕಾಫಿ ಕೈಮೇಲೆ ಚೆಲ್ಲಿದೆ. ಒಂದೇ ಸಲಕ್ಕೆ ಶಾಕ್‌ ಆದವರಂತೆ ಆತ ಕೈ ಉಜ್ಜಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನು ನೋಡಿ ಹಲವರು ನೆಟ್ಟಿಗರು ತಮಾಷೆಯಿಂದ ನಗುತ್ತಿದ್ದರೆ, ಕೆಲವರು ಮಾತ್ರ ಆ ವ್ಯಕ್ತಿಯ ಸ್ಥಿತಿ ಕಂಡು ಮರುಗಿದ್ದಾರೆ.

https://twitter.com/Outofcon8ext/status/1624747443383599107?ref_src=twsrc%5Etfw%7Ctwcamp%5Etweetembed%7Ctwterm%5E1624747443383599107%7Ctwgr%5Eb8e895f0b506c2972286d265d93fcae1e48ca2dc%7Ctwcon%5Es1_&ref_url=https%3A%2F%2Fwww.india.com%2Fviral%2Fouch-man-pours-hot-coffee-on-his-palms-mistaking-it-for-sanitiser-watch-viral-video-5896559%2F

For Latest News Updates, Join Our Whatsapp Community🚩
RELATED ARTICLES

Most Popular