ಧಾರವಾಡ ಜಿಲ್ಲೆಯ 135 ಗ್ರಾಮ ಪಂಚಾಯತಗಳ ಸದಸ್ಯರ ಅವಧಿ ಮುಕ್ತಾಯವಾಗಿರುವ ಹಿನ್ನಲೆಯಲ್ಲಿ ಮತ್ತು ನವಲಗುಂದ ತಾಲೂಕಿನ ಬೆಳವಟಿಗೆ ಗ್ರಾಮ ಪಂಚಾಯತ (ಏ.20, 2026) ಹಾಗೂ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯತ (ಆ.23, 2026) ಗಳಲ್ಲಿನ ಸದಸ್ಯರ ಅವಧಿಯು ಮುಕ್ತಾಯವಾಗುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯ ಎಲ್ಲ 137 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ, ಜನವರಿ 29, 2026 ರಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಈ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ಧಾರವಾಡ ತಾಲೂಕಿನ 35, ಅಳ್ನಾವರ ತಾಲೂಕಿನ 4, ನವಲಗುಂದ ತಾಲೂಕಿನ 14, ಅಣ್ಣಿಗೇರಿ ತಾಲೂಕಿನ 8, ಹುಬ್ಬಳ್ಳಿ ತಾಲೂಕಿ 26, ಕುಂದಗೋಳ ತಾಲೂಕಿನ 23 ಮತ್ತು ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಿಗಳಿಗೆ ಧಾರವಾಡ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನೇಮಕಗೊಂಡಿರುವ ಗ್ರಾಮ ಪಂಚಾಯತಿಗಳ ಸದಸ್ಯರ ಅವಧಿಯು ಮುಕ್ತಾಯವಾದ ದಿನದಂದು ಆ ಗ್ರಾಮ ಪಂಚಾಯತಿಯ ಆಡಳತಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲು ಅವರು ಆದೇಶಿಸಿದ್ದಾರೆ.
ಆಡಳಿತಾಧಿಕಾರಿಗಳು ತಮಗೆ ವಹಿಸಿಕೊಟ್ಟ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗುವ ದಿನಾಂಕದಂದು ಆಡಳಿತಾಧಿಕಾರಿಯ ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳಬೇಕು. ಹಾಗೂ ಸದರಿ ಅಧಿಕಾರಿಗಳು ಕರ್ನಾಟಕ ಪಂಚಾಯತ ರಾಜ್ 1993 ರ ಅಧಿನಿಯಮದಂತೆ ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಗಳನ್ನು ಚಲಾಯಿಸಬೇಕು ಮತ್ತು ಕರ್ತವ್ಯಗಳನ್ನು ನೆರವೇರಿಸಬೇಕು ಎಂದು ತಿಳಿಸಿದ್ದಾರೆ.
ಈ ಹಿಂದೆ 2020-2025ನೇ ಸಾಲಿಗೆ ರಚಿತವಾಗಿದ್ದ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅವಧಿಯು 2026ನೇ ಜನವರಿ, ಫೆಬ್ರವರಿ, ಏಪ್ರೀಲ್ ಹಾಗೂ ಆಗಸ್ಟ್ ತಿಂಗಳುಗಳ ವಿವಿಧ ದಿನಾಂಕಗಳಂದು ಮುಕ್ತಾಯಗೊಳ್ಳುವುದರಿಂದ, ಅಂತಹ ಗ್ರಾಮ ಪಂಚಾಯತಿಗಳಿಗೆ 2026-31 ರ ಅವಧಿಗಾಗಿ ಚುನಾವಣೆ ನಡೆದು ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯುವ ದಿನಾಂಕದವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ಸರ್ಕಾರವು ಆದೇಶಿಸಿದೆ. ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವಧಿ ಮುಕ್ತಾಯಗೊಳ್ಳುವ ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಗುಣವಾಗಿ ಆಡಳಿತಾಧಿಕಾರಿಗಳನ್ನು ನೇಮಿಸಿ, ಅಧಿಸೂಚನೆ ಹೊರಡಿಸಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದ್ದಾರೆ.
ಈ ಆದೇಶವು ಹುದ್ದೆವಾರು ಇರುವುದರಿಂದ ಯಾವುದೇ ಅಧಿಕಾರಿಗಳು ವರ್ಗವಾದಲ್ಲಿ, ಅವರ ಪ್ರಭಾರ ಇರುವ ಅಧಿಕಾರಿಗಳು ಆಡಳಿತಾಧಿಕಾರಿಗಳೆಂದು ಕಾರ್ಯ ನಿರ್ವಹಿಸತಕ್ಕದ್ದು. ಸದರಿ ಅಧಿಕಾರಿಗಳ ಹುದ್ದೆ ರದ್ದಾದಲ್ಲಿ ಅಥವಾ ಮಾರ್ಪಡಿಸಿದಲ್ಲಿ ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆದು ಆಯಾ ತಹಶೀಲ್ದಾರರು ಈ ಕಾರ್ಯಾಲಯಕ್ಕೆ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ಅವರು ತಿಳಿಸಿದ್ದಾರೆ.
ನವಲಗುಂದ ತಾಲೂಕು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳ ವಿವರ: ಅಳಗವಾಡಿ ಗ್ರಾಮ ಪಂಚಾಯತ – ತಾಂತ್ರಿಕ ಸಹಾಯಕರು, ನೀರಾವರಿ ಇಲಾಖೆ, ಉಪ ವಿಭಾಗ ನಂ:4 ನವಲಗುಂದ, ಜಾವೂರ ಗ್ರಾಮ ಪಂಚಾಯತ -ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ನವಲಗುಂದ, ಗುಮ್ಮಗೋಳ ಗ್ರಾಮ ಪಂಚಾಯತ – ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾ.ಕು.ನೀ ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ನವಲಗುಂದ, ಶಿರೂರ ಗ್ರಾಮ ಪಂಚಾಯತ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ ರಾಜ್ ಉಪ-ವಿಭಾಗ, ನವಲಗುಂದ, ಮೊರಬ ಗ್ರಾಮ ಪಂಚಾಯತ- ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ನವಲಗುಂದ, ಶಿರಕೋಳ ಗ್ರಾಮ ಪಂಚಾಯತ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಉಪ ವಿಭಾಗ ಶಲವಡಿ, ತಿರ್ಲಾಪೂರ ಗ್ರಾಮ ಪಂಚಾಯತ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಉಪ ವಿಭಾಗ ನಂ:17 ನವಲಗುಂದ, ಬೆಳಹಾರ ಗ್ರಾಮ ಪಂಚಾಯತ- ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ಕಾರ್ಯಾಲಯ ನವಲಗುಂದ, ನಾಯಕನೂರ ಗ್ರಾಮ ಪಂಚಾಯತ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಉಪ ವಿಭಾಗ ಅಳಗವಾಡಿ, ತಡಹಾಳ ಗ್ರಾಮ ಪಂಚಾಯತ- ಸಹಾಯಕ ಅಭಿಯಂತರರು, ಕಾರ್ಯನಿರ್ವಾಹಕ ನೀರಾವರಿ ಇಲಾಖೆ ಉಪ ವಿಭಾಗ ಮೊರಬ, ಗುಡಿಸಾಗರ ಗ್ರಾಮ ಪಂಚಾಯತ- ಸಹಾಯಕ ಅಭಿಯಂತರರು, ಕಾರ್ಯನಿರ್ವಾಹಕ ನೀರಾವರಿ ಇಲಾಖೆ ಉಪ ವಿಭಾಗ ನಂ:16 ನವಲಗುಂದ, ಹಾಳಕುಸುಗಲ್ಲ ಗ್ರಾಮ ಪಂಚಾಯತ- ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ನವಲಗುಂದ, ಹೆಬ್ಬಾಳ ಗ್ರಾಮ ಪಂಚಾಯತ- ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ(ಬಿ.ಸಿ.ಎಮ್) ನವಲಗುಂದ ಮತ್ತು ಏಪ್ರೀಲ್ 20, 2026 ರಂದು ಗ್ರಾಮ ಪಂಚಾಯತ ಸದಸ್ಯರ ಅವಧಿ ಮುಕ್ತಾಯವಾಗಲಿರುವ ಬೆಳವಟಗಿ ಗ್ರಾಮ ಪಂಚಾಯತ- ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ನವಲಗುಂದ.
ಅಣ್ಣಿಗೇರಿ ತಾಲೂಕು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳ ವಿವರ: ಶಿಶ್ವಿನಹಳ್ಳಿ ಗ್ರಾಮ ಪಂಚಾಯತ-ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಉಪ ವಿಭಾಗ ನಂ-4 ಕಿರೇಸೂರ, ನಲವಡಿ ಗ್ರಾಮ ಪಂಚಾಯತ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನವಲಗುಂದ, ಭದ್ರಾಪೂರ ಗ್ರಾಮ ಪಂಚಾಯತ- ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕ ಪಂಚಾಯತ ಕಾರ್ಯಾಲಯ ಅಣ್ಣಿಗೇರಿ, ಹಳ್ಳಿಕೇರಿ ಗ್ರಾಮ ಪಂಚಾಯತ- ವಲಯ ಅರಣ್ಯಾಧಿಕಾರಿಗಳು, ಸಮಾಜಿಕ ಅರಣ್ಯ ಇಲಾಖೆ ನವಲಗುಂದ, ತುಪ್ಪದಕುರಹಟ್ಟಿ ಗ್ರಾಮ ಪಂಚಾಯತ- ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ನವಲಗುಂದ, ನಾವಳ್ಳಿ ಗ್ರಾಮ ಪಂಚಾಯತ- ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಅಣ್ಣಿಗೇರಿ, ಶಲವಡಿ ಗ್ರಾಮ ಪಂಚಾಯತ- ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ನವಲಗುಂದ, ಇಬ್ರಾಹಿಂಪೂರ ಗ್ರಾಮ ಪಂಚಾಯತ- ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ನವಲಗುಂದ.
ಕಲಘಟಗಿ ತಾಲೂಕು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳ ವಿವರ: ಧುಮ್ಮವಾಡ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು. ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಕಲಘಟಗಿ, ಗಂಬ್ಯಾಪೂರ ಗ್ರಾಮ ಪಂಚಾಯತ– ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಘಟಗಿ, ಗಳಗಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಕಲಘಟಗಿ, ಮುತ್ತಗಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ ರಾಜ್ ಇಂಜನೀಯರಿಂಗ್ ಉಪ-ವಿಭಾಗ ಕಲಘಟಗಿ, ಕುರುವಿನಕೊಪ್ಪ ಗ್ರಾಮ ಪಂಚಾಯತ– ತಾಲೂಕ ಆರೋಗ್ಯಾಧಿಕಾರಿಗಳು ಕಲಘಟಗಿ ತಾಲೂಕಾ ಆಸ್ಪತ್ರೆ, ದೇವಲಿಂಗಿಕೊಪ್ಪ ಗ್ರಾಮ ಪಂಚಾಯತ– ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಘಟಗಿ, ಜಿ.ಬಸನಕೊಪ್ಪ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಉಪ-ವಿಭಾಗ ಕಲಘಟಗಿ, ಹಿರೇಹೊನ್ನಿಹಳ್ಳಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕಲಘಟಗಿ, ಮಿಶ್ರಿಕೋಟಿ ಗ್ರಾಮ ಪಂಚಾಯತ– ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ ಕಲಘಟಗಿ, ಉಗ್ನಿಕೇರಿ ಗ್ರಾಮ ಪಂಚಾಯತ– ಪಶು ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ ದುಮ್ಮವಾಡ, ಗಂಜೀಗಟ್ಟಿ ಗ್ರಾಮ ಪಂಚಾಯತ– ತಾಲೂಕಾ ಯೋಜನಾಧಿಕಾರಿಗಳು, ತಾಲೂಕ ಪಂಚಾಯತ ಕಲಘಟಗಿ, ಭೋಗೇನಾಗರಕೊಪ್ಪ ಗ್ರಾಮ ಪಂಚಾಯತ– ಪಶು ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ ಸಂಗಮೇಶ್ವರ, ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯತ– ಪ್ರಾಂಶುಪಾಲರು, ಆದರ್ಶ ವಿದ್ಯಾಲಯ ದಾಸ್ತಿಕೊಪ್ಪ, ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯತ– ಪಶು ವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲಯ ಮಿಶ್ರಿಕೋಟಿ, ತಬಕದಹೊನ್ನಿಹಳ್ಳಿ ಗ್ರಾಮ ಪಂಚಾಯತ– ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಲಘಟಗಿ, ಬೀರವಳ್ಳಿ ಗ್ರಾಮ ಪಂಚಾಯತ– ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಲಘಟಗಿ, ಮುಕ್ಕಲ್ ಗ್ರಾಮ ಪಂಚಾಯತ– ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲಘಟಗಿ, ಬೆಲವಂತರ ಗ್ರಾಮ ಪಂಚಾಯತ– ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ) ಅರಣ್ಯ ಇಲಾಖೆ ಕಲಘಟಗಿ, ಜಿನ್ನೂರ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಕಲಘಟಗಿ, ಮಡಕಿಹೊನ್ನಿಹಳ್ಳಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲೂಕ ಪಂಚಾಯತ ಕಲಘಟಗಿ, ದಾಸ್ತಿಕೊಪ್ಪ ಗ್ರಾಮ ಪಂಚಾಯತ– ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಲಘಟಗಿ, ಬಮ್ಮಿಗಟ್ಟಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗ ಕಲಘಟಗಿ, ತಾವರಗೇರಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಉಪ-ವಿಭಾಗ ಕಲಘಟಗಿ, ಸಂಗಮೇಶ್ವರ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಕಲಘಟಗಿ, ಸೂಳಿಕಟ್ಟಿ ಗ್ರಾಮ ಪಂಚಾಯತ– ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ) ಅರಣ್ಯ ಇಲಾಖೆ ಕಲಘಟಗಿ, ದೇವಿಕೊಪ್ಪ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ ರಾಜ್ ಇಂಜನೀಯರಿಂಗ್ ಉಪ-ವಿಭಾಗ ಕಲಘಟಗಿ, ತಂಬೂರ ಗ್ರಾಮ ಪಂಚಾಯತ– ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ ಕಲಘಟಗಿ.
ಕುಂದಗೋಳ ತಾಲೂಕು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳ ವಿವರ: ಕಳಸ ಗ್ರಾಮ ಪಂಚಾಯತ ಮತ್ತು ಹರ್ಲಾಪೂರ ಗ್ರಾಮ ಪಂಚಾಯತ– ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕುಂದಗೋಳ, ಗೌಡಗೇರಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಯೋಜನೆ ಕುಂದಗೋಳ, ಗುಡಗೇರಿ ಗ್ರಾಮ ಪಂಚಾಯತ– ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಂದಗೋಳ, ಸಂಶಿ ಗ್ರಾಮ ಪಂಚಾಯತ ಮತ್ತು ಹಿರೇನರ್ತಿ ಗ್ರಾಮ ಪಂಚಾಯತ– ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ಕುಂದಗೋಳ, ಗುಡೇನಕಟ್ಟಿ ಗ್ರಾಮ ಪಂಚಾಯತ ಮತ್ತು ಯರೇಬೂದಿಹಾಳ ಗ್ರಾಮ ಪಂಚಾಯತ– ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬಿಆರ್ಸಿ ಕಚೇರಿ ಕುಂದಗೋಳ, ಹಿರೇಗುಂಜಳ ಗ್ರಾಮ ಪಂಚಾಯತ ಮತ್ತು ಯರಗುಪ್ಪಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕೃಷಿ ಇಲಾಖೆ ಕುಂದಗೋಳ, ರೊಟ್ಟಿಗವಾಡ ಗ್ರಾಮ ಪಂಚಾಯತ– ವಲಯ ಅರಣ್ಯ ಅಧಿಕಾರಿಗಳು ವಲಯ ಅರಣ್ಯ ಅಧಿಕಾರಿಗಳ ಕಚೇರಿ ಕುಂದಗೋಳ, ಕಮಡೊಳ್ಳಿ ಗ್ರಾಮ ಪಂಚಾಯತ ಮತ್ತು ಶಿರೂರ ಗ್ರಾಮ ಪಂಚಾಯತ– ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ಕುಂದಗೋಳ, ದೇವನೂರ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹೆಸ್ಕಾಂ ಕುಂದಗೋಳ, ಬೆಟದೂರ ಗ್ರಾಮ ಪಂಚಾಯತ– ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕ ಪಂಚಾಯತ ಕುಂದಗೋಳ, ಯಲಿವಾಳ ಗ್ರಾಮ ಪಂಚಾಯತ ಮತ್ತು ರಾಮನಕೊಪ್ಪ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕುಂದಗೋಳ, ಹಿರೇಹರಕುಣಿ ಗ್ರಾಮ ಪಂಚಾಯತ ಮತ್ತು ಬು. ತರ್ಲಘಟ್ಟ ಗ್ರಾಮ ಪಂಚಾಯತ–ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾ.ಇಂಜನೀಯರಿಂಗ್ ಉಪವಿಭಾಗ ಕುಂದಗೋಳ, ಕೂಬಿಹಾಳ ಗ್ರಾಮ ಪಂಚಾಯತ ಮತ್ತು ಇಂಗಳಗಿ ಗ್ರಾಮ ಪಂಚಾಯತ–ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕುಂದಗೋಳ, ಮತ್ತಿಗಟ್ಟಿ ಗ್ರಾಮ ಪಂಚಾಯತ ಮತ್ತು ಗುರುವಿನಹಳ್ಳಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಕುಂದಗೋಳ.
ಹುಬ್ಬಳ್ಳಿ ತಾಲೂಕು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳ ವಿವರ: ಬ್ಯಾಹಟ್ಟಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯದರ್ಶಿಗಳು, ಎ.ಪಿ.ಎಮ್.ಸಿ ಹುಬ್ಬಳ್ಳಿ, ಸುಳ್ಳ ಗ್ರಾಮ ಪಂಚಾಯತ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹುಬ್ಬಳ್ಳಿ, ಕುಸುಗಲ್ಲ ಗ್ರಾಮ ಪಂಚಾಯತ– ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ಹುಬ್ಬಳ್ಳಿ, ಹೆಬಸೂರ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕನೀನಿನಿ, ಮ.ಬ.ದಂ.ಕಾನಿ, ಉ.ವಿಭಾಗ ನಂ.4 ಕಿರೇಸೂರ, ಕಿರೇಸೂರ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ವಿದ್ಯುತ್ ಸರಬರಾಜು (ಹೆಸ್ಕಾಂ ಗ್ರಾ.) ಉಪವಿಭಾಗ ಹುಬ್ಬಳ್ಳಿ, ಇಂಗಳಹಳ್ಳಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು (ಗ್ರಾ.ಉ). ತಾಲೂಕ ಪಂಚಾಯತ ಹುಬ್ಬಳ್ಳಿ, ಕೋಳಿವಾಡ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಉಪವಿಭಾಗ, ಹುಬ್ಬಳ್ಳಿ, ಶಿರಗುಪ್ಪಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕನೀನಿನಿ, ಮ.ಬ.ದಂ.ಕಾನಿ, ಉಪವಿಭಾಗ ನಂ.11 ಬ್ಯಾಹಟ್ಟಿ, ಮಂಟೂರ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಭೂ ಮಾಪನ ಇಲಾಖೆ ಹುಬ್ಬಳ್ಳಿ, ಭಂಡಿವಾಡ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಕಾರ್ಯಕ್ರಮ ಹುಬ್ಬಳ್ಳಿ. ಹಳ್ಯಾಳ ಗ್ರಾಮ ಪಂಚಾಯತ– ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ನವನಗರ, ಹುಬ್ಬಳ್ಳಿ, ಅದರಗುಂಚಿ ಗ್ರಾಮ ಪಂಚಾಯತ– ವಲಯ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಕಚೇರಿ (ಪ್ರಾದೇಶಿಕ) ಹುಬ್ಬಳ್ಳಿ, ನೂಲ್ವಿ ಶರೇವಾಡ ಗ್ರಾಮ ಪಂಚಾಯತ– ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಸಿ.ಡಿ.ಪಿ.ಓ ಕಛೇರಿ ಹುಬ್ಬಳ್ಳಿ (ಗ್ರಾ), ಬಿ.ಅರಳಿಕಟ್ಟಿ ಗ್ರಾಮ ಪಂಚಾಯತ– ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ ರಾಜ್ ಇಂಜನೀಯರಿಂಗ್ ಉಪ ವಿಭಾಗ ಹುಬ್ಬಳ್ಳಿ, ವರೂರ ಗ್ರಾಮ ಪಂಚಾಯತ– ತಾಲೂಕಾ ವೈದ್ಯಾಧಿಕಾರಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕಿಮ್ಸ್ ಆವರಣ ಹುಬ್ಬಳ್ಳಿ, ಅಗಡಿ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು, ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಹುಬ್ಬಳ್ಳಿ, ಕರಡಿಕೊಪ್ಪ ಗ್ರಾಮ ಪಂಚಾಯತ– ಸಹಾಯಕ ನಿರ್ದೇಶಕರು (ಪಂ.ರಾಜ್), ತಾಲೂಕ ಪಂಚಾಯತ ಹುಬ್ಬಳ್ಳಿ, ಬೆಳಗಲಿ ಗ್ರಾಮ ಪಂಚಾಯತ– ತಾಲೂಕಾ ವಿಸ್ತರಣಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹುಬ್ಬಳ್ಳಿ, ಕಟ್ನೂರ ಗ್ರಾಮ ಪಂಚಾಯತ– ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕ ಪಂಚಾಯತ ಹುಬ್ಬಳ್ಳಿ, ಅಂಚಟಗೇರಿ ಗ್ರಾಮ ಪಂಚಾಯತ– ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ ಹುಬ್ಬಳ್ಳಿ, ಚನ್ನಾಪೂರ ಗ್ರಾಮ ಪಂಚಾಯತ– ಕೈಗಾರಿಕಾ ವಿಸ್ತರಣಾಧಿಕಾರಿಗಳು, ಕೈಗಾರಿಕಾ ಇಲಾಖೆ ಹುಬ್ಬಳ್ಳಿ, ರಾಯನಾಳ ಗ್ರಾಮ ಪಂಚಾಯತ– ವಲಯ ಅರಣ್ಯಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳ ಕಚೇರಿ (ಸಾಮಾಜಿಕ) ಹುಬ್ಬಳ್ಳಿ, ದೇವರಗುಡಿಹಾಳ ಗ್ರಾಮ ಪಂಚಾಯತ– ತಾಲೂಕಾ ಯೋಜನಾಧಿಕಾರಿಗಳು, ತಾಲೂಕ ಪಂಚಾಯತ ಹುಬ್ಬಳ್ಳಿ ಮತ್ತು ಆಗಸ್ಟ್ 23, 2026 ರಂದು ಗ್ರಾಮ ಪಂಚಾಯತ ಸದಸ್ಯರ ಅವಧಿ ಮುಕ್ತಾಯವಾಗಲಿರುವ ಮಲ್ಲಿಗವಾಡ ಗ್ರಾಮ ಪಂಚಾಯತ ಸಹಾಯಕ ನಿರ್ದೇಶಕರು (ಗ್ರೇ-1), ತಾಲೂಕ ಸಮಾಜ ಕಲ್ಯಾಣ ಇಲಾಖೆ ಹುಬ್ಬಳ್ಳಿ.

