HomeHealthಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ ಕಿತ್ತಳೆ ಹಣ್ಣು

ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣಿನ ಸೀಸನ್ ಇದು. ಅದರ ಬಣ್ಣ ಹಾಗೂ ಗಾತ್ರ ನೋಡಿದರೆ ಯಾರಿಗಾದರು ಬಾಯಲ್ಲಿ ನೀರೂರದೆ ಇರದು. ಆದರೆ ಮಧುಮೇಹಿಗಳು ಇದನ್ನು ಸೇವಿಸುವುದು ಒಳ್ಳೆಯದೇ.

ವಿಟಮಿನ್ ಸಿ ಅಂಶ ಹೇರಳವಾಗಿರುವ ಕಿತ್ತಳೆ ಚಳಿಗಾಲದ ಹಲವು ಕಾಯಿಲೆಗಳನ್ನು ಬರದಂತೆ ನೋಡಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣಿನಲ್ಲಿ ನಾರಿನಂಶ, ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಾಕಷ್ಟಿದ್ದು ಇದು ಹೃದಯದ ಆರೋಗ್ಯವನ್ನು ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಇಳಿಸಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವ ಕಿತ್ತಳೆಯನ್ನು ಮಧುಮೇಹಿಗಳು ಮರೆಯದೆ ಸೇವಿಸಬಹುದು. ಆದರೆ ಚಳಿಗಾಲದಲ್ಲಿ ಅಸ್ತಮಾ ಸಮಸ್ಯೆ ಇರುವವರು ಇದನ್ನು ತಿಂದರೆ ಸಮಸ್ಯೆಗಳು ಹೆಚ್ಬಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಯಟ್ ಪ್ಲಾನ್ ಮಾಡುವವರು ಕಿತ್ತಳೆ ಹಣ್ಣನ್ನು ತಪ್ಪದೆ ಸೇವಿಸಿ. ಇದು ತೂಕ ಇಳಿಸಲು ನೆರವಾಗುವ ಹಣ್ಣುಗಳಲ್ಲಿ ಒಂದು. ಇದರ ಸಿಪ್ಪೆಯನ್ನು ಒಣಗಿಸಿಟ್ಟು ಸೌಂದರ್ಯ ವರ್ಧಕ ಉತ್ಪನ್ನವಾಗಿ ಬಳಸಬಹುದು. ಈ ಸೀಸನ್ ನಲ್ಲಿ ಹೇರಳವಾಗಿ ಲಭ್ಯವಾಗುವ ಕಿತ್ತಳೆಯನ್ನು ಮರೆಯದೆ ತಿನ್ನಿ.

For Latest News Updates, Join Our Whatsapp Community🚩
RELATED ARTICLES

Most Popular