HomeIndiaBIG NEWS: ವಿಪಕ್ಷ ನಾಯಕನ ಆಯ್ಕೆ ವಿಳಂಬ; ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಲೀಗಲ್ ನೋಟಿಸ್

BIG NEWS: ವಿಪಕ್ಷ ನಾಯಕನ ಆಯ್ಕೆ ವಿಳಂಬ; ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಲೀಗಲ್ ನೋಟಿಸ್

ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಎನ್.ಪಿ.ಅಮೃತೇಶ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ವಿಪಕ್ಷ ನಾಯಕನಿಲ್ಲದ ಕಾರಣಕ್ಕೆ ಹಲವು ನೇಮಕ ವಿಳಂಬವಾಗಿದೆ. ಮಾನವ ಹಕ್ಕುಗಳ ಆಯೋಗ, ಉಪಲೋಕಾಯುಕ್ತ, ಕೆಪಿಎಸ್ ಸಿ ಸೇರಿದಂತೆ ಹಲವು ನೇಮಕಗಳಾಗುತ್ತಿಲ್ಲ. ಕಾನೂನಿನ ಪ್ರಕಾರ ಕೆಲ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ, ಮುಖ್ಯ ನ್ಯಾಯಮೂರ್ತಿಗಳ ಸಮಾಲೋಚನೆಯ ಅಗತ್ಯವಿದೆ.

ಸರ್ಕಾರ ಎಡವಿದಾಗ ಎಚ್ಚರಿಸಲು, ಜನರ ಪರವಾಗಿ ಸಮರ್ಥ ದನಿಯಾಗಲು ವಿರೋಧ ಪಕ್ಷದ ನಾಯಕನ ಅಗತ್ಯವಿದೆ. ಭಾರತದ ಪ್ರಜೆಯಾಗಿ ಮತದಾರನಾಗಿ ವಿರೋಧ ಪಕ್ಷದ ನಾಯಕನನ್ನು ನೇಮಿಸುವಂತೆ ಕೋರಿಕೊಳ್ಳುವ ಹಕ್ಕು ನನಗಿದೆ. ಹೀಗಾಗಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ನಳೀನ್ ಕುಮಾರ್ ಕಟೀಲ್, ಸ್ಪೀಕರ್, ರಾಜ್ಯಪಾಲರಿಗೂ ನೋಟೀಸ್ ಪ್ರತಿಯನ್ನು ಕಳುಹಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular