ಬೆಂಗಳೂರು: ಈಗಿನ ಕಾಲದಲ್ಲಿ ಮನೆ ಅಂದಾಕ್ಷಣ ಎಲ್ಲರೂ ಮೊದಲು ಇಷ್ಟಪಡುವುದು ಓಪನ್ ಕಿಚನ್ (Open Kitchen). ಗೋಡೆಗಳ ಹಂಗಿಲ್ಲದೆ ಲಿವಿಂಗ್ ರೂಮ್‌ಗೆ ಹೊಂದಿಕೊಂಡಿರುವ ಈ ಅಡುಗೆ ಮನೆಗಳು ನೋಡಲು ಸ್ಟೈಲಿಶ್ ಆಗಿರುತ್ತವೆ ನಿಜ.
ನಿಮ್ಮ ಮನೆಯಲ್ಲೂ ಓಪನ್ ಕಿಚನ್ ಮಾಡುವ ಪ್ಲಾನ್ ಇದ್ದರೆ, ಈ ಕೆಳಗಿನ ಪ್ರಮುಖ ವಾಸ್ತು ಅಂಶಗಳನ್ನು ಗಮನಿಸಿ:
ನೀರು ಮತ್ತು ಅಗ್ನಿ: ದೂರವಿದ್ದಷ್ಟೂ ಹಿತ
ಅಡುಗೆ ಮನೆಯಲ್ಲಿ ಸಿಂಕ್ (ನೀರು) ಮತ್ತು ಗ್ಯಾಸ್ ಸ್ಟೌವ್ (ಅಗ್ನಿ) ಪಕ್ಕ ಪಕ್ಕದಲ್ಲಿ ಅಥವಾ ಮುಖಾಮುಖಿಯಾಗಿ ಇರಬಾರದು. ವಾಸ್ತು ಪ್ರಕಾರ ಇವೆರಡೂ ವಿರುದ್ಧ ತತ್ವಗಳು. ಇವು ಹತ್ತಿರವಿದ್ದರೆ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕಲಹಗಳು ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಇವುಗಳ ನಡುವೆ ಕನಿಷ್ಠ ಅಂತರ ಕಾಯ್ದುಕೊಳ್ಳಿ.
ಗೋಡೆ ಇಲ್ಲದಿದ್ದರೂ ಗಡಿ ಇರಲಿ
ಓಪನ್ ಕಿಚನ್ ಅಂದರೆ ಅದು ಲಿವಿಂಗ್ ರೂಮ್‌ನಲ್ಲೇ ಇರಬಹುದು, ಆದರೆ ಅದಕ್ಕೆ ಒಂದು ನಿರ್ದಿಷ್ಟ ಸೀಮೆ ಇರುವುದು ಬಹಳ ಮುಖ್ಯ. ಅಡುಗೆ ಮಾಡುವ ‘ವರ್ಕ್ ಏರಿಯಾ’ ಬೇರೆಯೇ ಎಂದು ತಿಳಿಯುವಂತೆ ಸಣ್ಣದೊಂದು ಪಾರ್ಟಿಷನ್ ಅಥವಾ ಸ್ಲ್ಯಾಬ್ ಹಾಕಿ ವಿನ್ಯಾಸ ಮಾಡಿ. ಅಡುಗೆ ಮನೆಯ ಗೊಂದಲಗಳು ಮನೆಯ ಇತರ ಭಾಗಗಳಿಗೆ ಹರಡದಂತೆ ಇದು ತಡೆಯುತ್ತದೆ.
ದಿಕ್ಕು ತಪ್ಪದಿರಲಿ ಅಡುಗೆ ಒಲೆ:
ವಾಸ್ತು ಶಾಸ್ತ್ರದ ಅನ್ವಯ, ಅಡುಗೆ ಮನೆಯ ಆಗ್ನೇಯ (South-East) ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಇಡುವುದು ಅತ್ಯಂತ ಶುಭ. ಅಡುಗೆ ಮಾಡುವಾಗ ನಿಮ್ಮ ಮುಖ ಪೂರ್ವ ದಿಕ್ಕಿನ ಕಡೆಗಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy) ಹೆಚ್ಚಾಗುತ್ತದೆ ಮತ್ತು ಆರೋಗ್ಯವೂ ಉತ್ತಮವಾಗಿರುತ್ತದೆ.
ಬಣ್ಣಗಳ ಸಮತೋಲನ ಮುಖ್ಯ:
ಲಿವಿಂಗ್ ರೂಮ್ ಮತ್ತು ಅಡುಗೆ ಮನೆ ಒಂದಕ್ಕೊಂದು ಕಾಣುವುದರಿಂದ, ಬಣ್ಣಗಳ ಆಯ್ಕೆಯಲ್ಲಿ ಎಚ್ಚರಿಕೆ ಇರಲಿ. ಅಡುಗೆ ಮನೆಗೆ ಗಾಢ ಬಣ್ಣಗಳಿಗಿಂತ ತಿಳಿ ಬಣ್ಣಗಳು ಅಥವಾ ಮಣ್ಣಿನ ಬಣ್ಣಗಳನ್ನು (Earth tones) ಬಳಸುವುದು ವಾಸ್ತು ದೃಷ್ಟಿಯಿಂದ ಶ್ರೇಷ್ಠ. ಇದು ಮನೆಗೆ ಆಹ್ಲಾದಕರ ನೋಟ ನೀಡುತ್ತದೆ.

