HomeBusinessಗಮನಿಸಿ: ಪಾನ್ ಕಾರ್ಡ್ - ಆಧಾರ್ ಜೋಡಣೆಗೆ ಕೇವಲ ಮೂರೇ ದಿನ ಬಾಕಿ....!

ಗಮನಿಸಿ: ಪಾನ್ ಕಾರ್ಡ್ – ಆಧಾರ್ ಜೋಡಣೆಗೆ ಕೇವಲ ಮೂರೇ ದಿನ ಬಾಕಿ….!

ಪಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಅವಕಾಶಗಳನ್ನು ನೀಡಿತ್ತು. ಇದೀಗ ಅಂತಿಮ ಎಚ್ಚರಿಕೆಯನ್ನು ನೀಡಿರುವ ಆದಾಯ ತೆರಿಗೆ ಇಲಾಖೆ, ಮೇ 31ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ತೆರಿಗೆಯ ದುಪ್ಪಟ್ಟು ಕಡಿತವಾಗಲಿದೆ ಎಂದು ಹೇಳಿದೆ.

ಆದಾಯ ತೆರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಪಾನ್ ಕಾರ್ಡ್ ಗೆ ಬಯೋಮೆಟ್ರಿಕ್ ಆಧಾರ್ ಜೋಡಣೆ ಮಾಡದಿದ್ದರೆ ಟಿಡಿಎಸ್ ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ತೆರಿಗೆ ಕಡಿತವಾಗಲಿದ್ದು, ಹಾಗಾಗಿ ಈವರೆಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದವರು ಮೇ 31ರೊಳಗೆ ಈ ಕಾರ್ಯ ಮಾಡಬೇಕಿದೆ.

ಕಳೆದ ತಿಂಗಳು ಸುತ್ತೋಲೆಯೊಂದನ್ನು ಹೊರಡಿಸಿದ್ದ ಆದಾಯ ತೆರಿಗೆ ಇಲಾಖೆ, ನಿಗದಿತ ಗಡುವಿನೊಳಗೆ ಪಾನ್ ಕಾರ್ಡ್ – ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ತಿಳಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular