HomeIndiaನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ; ಇದು ನನ್ನ 'ಗ್ಯಾರಂಟಿ' ಎಂದ ರಾಹುಲ್ ಗಾಂಧಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ; ಇದು ನನ್ನ ‘ಗ್ಯಾರಂಟಿ’ ಎಂದ ರಾಹುಲ್ ಗಾಂಧಿ

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನ, ಕೊನೆಯ ಹಂತಕ್ಕೆ ಬಂದಿದ್ದು ಜೂನ್ 1 ರಂದು 7ನೇ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಬಹುತೇಕ ಅಂದೇ ಫಲಿತಾಂಶ ಹೊರಬೀಳಲಿದೆ.

ಪ್ರಧಾನಿಯಾಗಿ ಈಗಾಗಲೇ ಎರಡು ಅವಧಿ ಪೂರೈಸಿರುವ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾಗುವ ವಿಶ್ವಾಸದಲ್ಲಿದ್ದು, ಇದರ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿಯವರು ಸ್ಪರ್ಧಿಸಿರುವ ವಾರಣಾಸಿಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ವೇಳೆ ‘ಗ್ಯಾರಂಟಿ’ ಒಂದನ್ನು ನೀಡಿದ್ದಾರೆ.

ಅಂತಿಮ ಹಂತದ ಮತದಾನ ದಿನವಾದ ಜೂನ್ 1 ರಂದು ವಾರಣಾಸಿ ಕ್ಷೇತ್ರದ ಮತದಾನವೂ ನಡೆಯಲಿದ್ದು, ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಅಜಯ್ ರೈ ಸ್ಪರ್ಧಿಸಿದ್ದು, ಅವರ ಪರವಾಗಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದಿಲ್ಲ ಎಂದು ನಾನು ನಿಮಗೆ ‘ಗ್ಯಾರಂಟಿ’ ನೀಡುತ್ತೇನೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾರಣಾಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ಹಾಗೂ ಅಜಯ್ ರೈ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಕ್ಷದ ಅಭ್ಯರ್ಥಿ ಅಜಯ್ ರೈ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಜೂನ್ 4 ರ ಬಳಿಕ ನರೇಂದ್ರ ಮೋದಿ ಪ್ರಧಾನಿಯಾಗಿರುವುದಿಲ್ಲ ಎಂದು ನಾನು ನಿಮಗೆ ಗ್ಯಾರಂಟಿಯೊಂದಿಗೆ ಹೇಳುತ್ತಿದ್ದೇನೆಂದು ಮತದಾರರಿಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular