HomeKarnatakaಆನ್ ಲೈನ್ ನಲ್ಲಿ ಕ್ಯಾಮರಾ ಆರ್ಡರ್ ಮಾಡಿದ್ದ ಉದ್ಯಮಿಗೆ ಬಾಕ್ಸ್ ನಲ್ಲಿ ಬಂದಿದ್ದು ವ್ಹೀಲ್ ಸೋಪ್...

ಆನ್ ಲೈನ್ ನಲ್ಲಿ ಕ್ಯಾಮರಾ ಆರ್ಡರ್ ಮಾಡಿದ್ದ ಉದ್ಯಮಿಗೆ ಬಾಕ್ಸ್ ನಲ್ಲಿ ಬಂದಿದ್ದು ವ್ಹೀಲ್ ಸೋಪ್ ಪೌಡರ್!

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಏನೇ ವಸ್ತಿಗಳನ್ನು ಖರೀದಿಸಬೇಕೆಂದರೂ ಮಾಲ್ ಗಳಿಗೆ, ಅಂಗಡಿಗಳಿಗೆ ಜನರು ಹೋಗುತ್ತಿಲ್ಲ ಹೆಚ್ಚು ಹೆಚ್ಚು ಆನ್ ಲೈನ್ ಶಾಪಿಂಗ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿಯೋ ಅಥವಾ ಕಚೇರಿಗಳಲ್ಲಿಯೋ ಬಿಡ್ವಿನ ಸಮಯದಲ್ಲಿಯೇ ಕೂತ ಜಾಗದಲ್ಲಿಯೇ ಆನ್ ಲೈನ್ ಮೂಲಕ ಆರ್ಡರ್ ಕೊಟ್ಟು ಬೇಕಾದ ವಸ್ತುಗಳನ್ನು ಖರೀದಿಸುವುದು ಇದೀಗ ಜಾಯಮಾನವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಂಚಕರು ಅಲ್ಲಿಯೂ ಕಳ್ಳತನ ಮಾಡುತ್ತಿದ್ದಾರೆ.

ಉದ್ಯಮಿಯೊಬ್ಬರು ಅಮೇಜಾನ್ ನಲ್ಲಿ ಆನ್ ಲೈನ್ ಮೂಲಕ ದುಬಾರಿ ಕ್ಯಾಮರಾ ಆರ್ಡರ್ ಮಾಡಿದ್ದರು. ಆದರೆ ಬಾಕ್ಸ್ ನಲ್ಲಿ ಬಂದಿದ್ದು ಮಾತ್ರ ವ್ಹೀಲ್ ಸೋಪ್ ಪೌಡರ್. ಬಾಕ್ಸ್ ಓಪನ್ ಮಾಡಿ ನೋಡಿದ ಉದ್ಯಮಿ ಶಾಕ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲ್ಫ್ರೆಡ್ ಎಂಬವರು ಅಮೆಜಾನ್‌ನಲ್ಲಿ 60,990 ರೂ. ಬೆಲೆಯ ಕ್ಯಾಮರಾ ಆರ್ಡರ್ ಮಾಡಿದ್ದರು. ಆದರೆ ಡೆಲಿವರಿ ಆಗಿದ್ದು ಮಾತ್ರ ವಾಷಿಂಗ್ ಪೌಡರ್ ಪ್ಯಾಕೇಟ್‌ಗಳು.

ಉದ್ಯಮಿ ಅಲ್ಫ್ರೆಡ್ ಆತ್ಮೀಯರೊಬ್ಬರಿಗೆ ಉಡುಗೊರೆಯಾಗಿ ನೀಡಲು ಅಮೆಜಾನ್​ನಲ್ಲಿ ಕ್ಯಾಮರಾ ಬುಕ್​​ ಮಾಡಿದ್ದರಂತೆ. ಅದರಂತೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನ ವಿಳಾಸಕ್ಕೆ ಕೊರಿಯರ್​​ ತಲುಪಿದೆ.

ಕೊರಿಯರ್ ತೆರೆದು ನೋಡಿದಾಗ ಕ್ಯಾಮರಾ ಬದಲು, 2 ಪಾಕೆಟ್ ವ್ಹೀಲ್ ಪೌಡರ್ ಇರೋದು ಕಂಡುಬಂದಿದೆ. ತಾನು ಆರ್ಡರ್​​ ಮಾಡಿದ್ದು 60,990 ರೂ. ಬೆಲೆಯ ಕ್ಯಾಮರಾ. ಆದರೆ ಅವರು ಕಳುಹಿಸಿರುವ ವಾಷಿಂಗ್ ಪೌಡರ್ ಪ್ಯಾಕೇಟ್​​ ನೋಡಿ ದಂಗಾಗಿದ್ದಾರೆ. ಈ ಬಗ್ಗೆ ಅಮೆಜಾನ್​ಗೆ ದೂರು ನೀಡಿದ್ರೂ ಅವರಿಂದ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಅಲ್ಫ್ರೆಡ್ ದೂರಿದ್ದಾರೆ.

ಎರಡು ದಿನಗಳ ಹಿಂದೆ ತಾನು ಕ್ಯಾಮರಾ ಅರ್ಡರ್​​ ಮಾಡಿದ್ದೆ. ದುಬೈನಲ್ಲಿಯೂ ತಾನು ಅಮೆಜಾನ್​ ಮೂಲಕ ಅನೇಕ ಬಾರಿ ವಸ್ತುಗಳನ್ನು ಆರ್ಡರ್​​ ಮಾಡಿದ್ದು, ಅಲ್ಲಿ ಒಮ್ಮೆಯೂ ತನಗೆ ಈ ರೀತಿ ವಂಚನೆ ಆಗಿರಲಿಲ್ಲ. ಆದರೆ ಸ್ನೇಹಿತ ವೈದ್ಯನಿಗಾಗಿ ಪಾಕೆಟ್​​ ಕ್ಯಾಮರಾ ಆರ್ಡರ್​​ ಮಾಡಿದ್ದ ತಾನು ಈ ಬಾರಿ ಮೋಸ ಹೋಗಿದ್ದೇನೆ ಎಂದಿದ್ದಾರೆ.

ಬುಕ್​​ ರಿಲೀಸ್​​ ಕಾರ್ಯಕ್ರಮಕ್ಕೆ ಆಗಮಿಸಿದ್ದ ನನ್ನ ಸ್ನೇಹಿತ, ಅತಿಥಿಗೆ ಉಡುಗೊರೆ ನೀಡಲೆಂದು ಕ್ಯಾಮರಾ ಆರ್ಡರ್​​ ಮಾಡಿದ್ದಾಗಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular