ಆನ್ಲೈನ್ ಗೇಮ್ ಗಳಿಗೆ ಅಂಕುಶ: ಬೆಟ್ಟಿಂಗ್, ಜೂಜು ಒಳಗೊಂಡ ಎಲ್ಲಾ ಆಟ ನಿಷೇಧ

ನವದೆಹಲಿ: ಆನ್ಲೈನ್ ಗೇಮಿಂಗ್ ಗೆ ಅಂಕುಶ ಹಾಕಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಬೆಟ್ಟಿಂಗ್ ಅಥವಾ ಜೂಜು ಒಳಗೊಂಡಂತೆ ಎಲ್ಲಾ ಆಟಗಳಿಗೆ ನಿಷೇಧ ಹೇರಲಾಗಿದೆ.

ಆನ್ಲೈನ್ ಗೇಮ್ ಗಳಲ್ಲಿ ನೈಜ ಹಣ ತೊಡಗಿಸಲಾಗುತ್ತದೆಯೇ ಎಂದು ನಿರ್ಧರಿಸಲು ಸ್ವಯಂ ನಿಯಂತ್ರಣ ಸಂಸ್ಥೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಆನ್ಲೈನ್ ಗೇಮಿಂಗ್ ಕ್ಷೇತ್ರ ನವೋದ್ಯಮಗಳಿಗೆ ದೊಡ್ಡಮಟ್ಟದಲ್ಲಿ ಹೊಸ ಅವಕಾಶ ಒದಗಿಸಿದೆ. ಆದರೆ, ಅವುಗಳಲ್ಲಿ ಎಂತಹ ಗೇಮಿಂಗ್ ಗೆ ಅವಕಾಶ ನೀಡಬೇಕು, ಯಾವುದಕ್ಕೆ ಅವಕಾಶ ನೀಡಬಾರದು ಎನ್ನುವ ಗೊಂದಲವಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read