HomeKarnatakaರವಿ. ಡಿ ಚನ್ನಣ್ಣನವರ್ ಹೆಸರಲ್ಲಿ ಆನ್ ಲೈನ್ ವಂಚನೆ : 55 ಸಾವಿರ ಎಗರಿಸಿದ ಖದೀಮ

ರವಿ. ಡಿ ಚನ್ನಣ್ಣನವರ್ ಹೆಸರಲ್ಲಿ ಆನ್ ಲೈನ್ ವಂಚನೆ : 55 ಸಾವಿರ ಎಗರಿಸಿದ ಖದೀಮ

ಗದಗ : ಇತ್ತೀಚೆಗೆ ಸಾಕಷ್ಟು ಆನ್ ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಆತಂಕಕಾರಿಯಾಗಿದೆ. ಇದೀಗ ಪೊಲೀಸ್ ಅಧಿಕಾರಿಗಳ ಹೆಸರಲ್ಲೇ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹೆಸರಲ್ಲಿ ಆನ್ಲೈನ್ ವಂಚನೆ ನಡೆದಿದ್ದು, ಖದೀಮನೋರ್ವ 55 ಸಾವಿರ ಹಣ ಎಗರಿಸಿದ್ದಾನೆ.

ಗದಗ ಜಿಲ್ಲೆಯ ರಮೇಶ್ ಹತ್ತಿಕಾಳ ಅವರಿಗೆ 55 ಸಾವಿರ ಹಣ ವಂಚಿಸಲಾಗಿದ್ದು, ರವಿ ಡಿ ಚನ್ನಣ್ಣನವರ್ ಹಾಗೂ ಯೋಧನ ಹೆಸರು ಹೇಳಿಕೊಂಡು ವಂಚಿಸಲಾಗಿದೆ,ಫೇಸ್ ಬುಕ್ ನಲ್ಲಿ ಈ ಇಬ್ಬರ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ 55 ಸಾವಿರ ಹಣ ವಂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಸ್ನೇಹಿತ ಸಿಆರ್ ಪಿಎಫ್ ಯೋಧ ಸಂತೋಷ್ ಕುಮಾರ್ ಅವರಿಗೆ ಟ್ರಾನ್ಸ್ ಫರ್ ಆಗಿದೆ. ಕಡಿಮೆ ಬೆಲೆಗೆ ಫರ್ನೀಚರ್ ಮಾರಾಟ ಮಾಡುತ್ತಿದ್ದಾರೆ, ನಿಮಗೆ ಅವರ ನಂಬರ್ ಕೊಡುತ್ತೇನೆ ಎಂದು ಅವರ ಜೊತೆ ವ್ಯವಹಾರ ಮಾಡಿಕೊಳ್ಳಿ ಎಂದು ಮೆಸೇಜ್ ಮಾಡಿದ್ದಾರೆ, ಇದನ್ನು ನಂಬಿದ ರಮೇಶ್ ಹಣ ಹಾಕಿ ಮೋಸ ಹೋಗಿದ್ದಾರೆ.

 

 

 

 

 

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular