HomeKarnatakaಉಪಲೋಕಾಯುಕ್ತರಿಗೆ 'ಆನ್ ಲೈನ್ ದೋಖಾ' : ಆರ್ಡರ್ ಮಾಡಿದ್ದು ಬ್ಲೇಡ್, ಬಂದಿದ್ದು ಹಳೇ ಬಟ್ಟೆ ತುಂಡು.!

ಉಪಲೋಕಾಯುಕ್ತರಿಗೆ ‘ಆನ್ ಲೈನ್ ದೋಖಾ’ : ಆರ್ಡರ್ ಮಾಡಿದ್ದು ಬ್ಲೇಡ್, ಬಂದಿದ್ದು ಹಳೇ ಬಟ್ಟೆ ತುಂಡು.!

ಬೆಂಗಳೂರು : ಆನ್‌ಲೈನ್ ಶಾಪಿಂಗ್ ವಂಚನೆ ಜಾಲವು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಕಾನೂನು ರಕ್ಷಕರಾದ ಉಪಲೋಕಾಯುಕ್ತರನ್ನೂ ಬಿಟ್ಟಿಲ್ಲ. ಕರ್ನಾಟಕದ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ.

ಹೌದು, ಕರ್ನಾಟಕದ ಉಪಲೋಕಾಯುಕ್ತ  ಕೆ.ಎನ್. ಫಣೀಂದ್ರ ಅವರು ‘ಗುಡ್ ಮ್ಯಾಕ್ಸ್’ ಕಂಪನಿಯ ಮೂಲಕ ಆನ್‌ಲೈನ್‌ನಲ್ಲಿ ರೇಜರ್ ಬ್ಲೇಡ್‌ಗಳನ್ನು ಆರ್ಡರ್ ಮಾಡಿದ್ದರು.’ಶ್ಯಾಡೋಫ್ಯಾಕ್ಸ್’ ಡೆಲಿವರಿ ಸಂಸ್ಥೆಯ ಮೂಲಕ ಬಂದಿದ್ದ ಪಾರ್ಸೆಲ್ ಅನ್ನು ತೆರೆದು ನೋಡಿದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲಿಗೆ ಹಳೆಯ ಬಟ್ಟೆಯ ತುಂಡುಗಳು ಪತ್ತೆಯಾಗಿವೆ.

ಈ ಸಂಬಂಧ ವಂಚನೆಗೊಳಗಾದ ಉಪಲೋಕಾಯುಕ್ತರು ದೂರು ನೀಡಿದ್ದು, ಆರ್ಡರ್ ಪಡೆದ ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸಂಸ್ಥೆಯಾದ ಶ್ಯಾಡೋಫ್ಯಾಕ್ಸ್ ಮತ್ತು ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯು ಆನ್‌ಲೈನ್ ಶಾಪಿಂಗ್ ವೇದಿಕೆಗಳ ವಿಶ್ವಾಸಾರ್ಹತೆ ಮತ್ತು ಗ್ರಾಹಕರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಉನ್ನತ ಹುದ್ದೆಯಲ್ಲಿರುವವರಿಗೇ ಇಂತಹ ಸ್ಥಿತಿ ಬಂದಿರುವಾಗ ಸಾಮಾನ್ಯ ಜನರ ಕಥೆ ಏನು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular