HomeKarnatakaಚರ್ಮ ಕೈಗಾರಿಕೆಯಲ್ಲಿ ವಿವಿಧ ಯೋಜನೆಗಾಗಿ ಆನ್ಲೈನ್ ಅರ್ಜಿ ಆಹ್ವಾನ

ಚರ್ಮ ಕೈಗಾರಿಕೆಯಲ್ಲಿ ವಿವಿಧ ಯೋಜನೆಗಾಗಿ ಆನ್ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ : ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚರ್ಮಕೈಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ವಿವಿಧ ಯೋಜನೆಗಳಾದ ತರಬೇತಿ, ಸ್ವಯಂ ಉದ್ಯೋಗ, ಸ್ವಾವಲಂಭಿ ಮಾರಾಟ ಮಳಿಗೆ, ಸಂಚಾರಿ ಮಾರಾಟ ಮಳಿಗೆ, ನೇರ ಸಾಲ ಯೋಜನೆ, ಪಾದುಕೆ ಕುಟೀರ ಯೋಜನೆ, ವಸತಿ ಹಾಗೂ ಇನ್ನಿತರೆ ಯೋಜನೆಗಾಗಿ ಆಸಕ್ತರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತರು https://sevasindhu.karnataka.gov.in ಪೋರ್ಟಲ್ ಮೂಲಕ ಅ. 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಲಿಡ್ಕರ್ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್ಕರ್, ನೆಹರು ರಸ್ತೆ, ಶಿವಮೊಗ್ಗ ಇವರನ್ನು ಸಂಪರ್ಕಿಸುವುದು  ಎಂದು ಪ್ರಕಟಣೆ ತಿಳಿಸಿದೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular