HomeBusinessಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್: ಗಗನಕ್ಕೇರಿದ ಈರುಳ್ಳಿ ದರ ಕೆಜಿಗೆ 65 ರೂ.,...

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೊಂದು ಶಾಕ್: ಗಗನಕ್ಕೇರಿದ ಈರುಳ್ಳಿ ದರ ಕೆಜಿಗೆ 65 ರೂ., ಗ್ರಾಹಕರಿಗೆ ಕಣ್ಣೀರು

ಬೆಂಗಳೂರು: ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿ ದರ 65 ರೂ.ಗೆ ತಲುಪಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಮಳೆ ಕೊರತೆಯಿಂದಾಗಿ ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಕೆಜಿ ಈರುಳ್ಳಿದರ 60- 65 ರೂಪಾಯಿಗೆ ಮಾರಾಟವಾಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಕೆಜಿಗೆ 80-100 ರೂಪಾಯಿ ತಲುಪಬಹುದು ಎಂದು ಹೇಳಲಾಗಿದೆ.

ಮಳೆ ಕೊರತೆಯ ಕಾರಣ ರಾಜ್ಯದಲ್ಲಿ ಈರುಳ್ಳಿ ಬೆಳೆ ಕಡಿಮೆಯಾಗಿದೆ. ಹೊರ ರಾಜ್ಯಗಳಿಂದಲೂ ಈರುಳ್ಳಿ ಬರುತ್ತಿಲ್ಲ. ಮಹಾರಾಷ್ಟ್ರ, ಗುಜರಾತ್ ನಿಂದ ಈರುಳ್ಳಿ, ಪೂರೈಕೆಯಾಗದ ಹಿನ್ನೆಲೆ ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಶವಂತಪುರ ಎಪಿಎಂಸಿಯಲ್ಲಿ ಗುರುವಾರ ಸಾಧಾರಣ ಗುಣಮಟ್ಟದ ಈರುಳ್ಳಿ 4,200 ರೂ.ವರೆಗೆ ಮಾರಾಟವಾಗಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮೂಲಕ ಬೆಲೆ ನಿಯಂತ್ರಣ ಉದ್ದೇಶದಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿರುವ ಈರುಳ್ಳಿ ಕ್ವಿಂಟಲ್ ಗೆ 4000- 4,600 ರೂ. ದರ ಇದೆ.

ಅತ್ಯುತ್ತಮ ಮಹಾರಾಷ್ಟ್ರ ಈರುಳ್ಳಿ ದರ 5000-6000 ರೂಪಾಯಿಗೆ ಮಾರಾಟವಾಗಿದ್ದು, ಗುಣಮಟ್ಟದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಸಾಗಾಣೆ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 50 ರಿಂದ 65 ರೂ. ಇದೆ. ಮಾಲ್ ಗಳಲ್ಲಿ ಇದಕ್ಕಿಂತ 5-6 ರೂಪಾಯಿ ಹೆಚ್ಚು ದರ ಇದೆ.

15 ದಿನಗಳ ಹಿಂದೆಯಷ್ಟೇ 100 ರೂಪಾಯಿಗೆ 3-4 ಕೆಜಿ ಈರುಳ್ಳಿ ಸಿಗುತ್ತಿತ್ತು. ಈಗ ದರ ಬಾರಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular