HomeIndiaಯೂತ್​ ಕಾಂಗ್ರೆಸ್​ನಲ್ಲಿ ಮಾರಾಮಾರಿ: ಕುರ್ಚಿ ಎಸೆದು ಗಲಾಟೆ

ಯೂತ್​ ಕಾಂಗ್ರೆಸ್​ನಲ್ಲಿ ಮಾರಾಮಾರಿ: ಕುರ್ಚಿ ಎಸೆದು ಗಲಾಟೆ

ಮುಂಬೈ: ಮುಂಬೈನಲ್ಲಿ ನಡೆದ ಯೂತ್ ಕಾಂಗ್ರೆಸ್ ಸಭೆಯಲ್ಲಿ ಕುರ್ಚಿಗಳನ್ನು ಎಸೆಯುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆಯಿತು.
ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಮುಖ್ಯಸ್ಥ ಕುನಾಲ್ ನಿತಿನ್ ರಾವುತ್ ಅವರನ್ನು ಪದಚ್ಯುತಗೊಳಿಸಬೇಕು ಎಂಬ ಬೇಡಿಕೆಗೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಮಾರಾಮಾರಿ ಆರಂಭವಾಯಿತು. ಎರಡೂ ಗುಂಪುಗಳು ಪರಸ್ಪರ ಕುರ್ಚಿಗಳನ್ನು ಎಸೆದುಕೊಳ್ಳುವಷ್ಟರ ಮಟ್ಟಿಗೆ ಮಾರಾಮಾರಿ ನಡೆದಿದೆ. ದೃಶ್ಯಗಳಲ್ಲಿ, ಕೆಲವು ಪುರುಷರು ಪರಸ್ಪರ ಗುದ್ದಾಡುತ್ತಿರುವುದು ಕಂಡುಬಂದಿದೆ.

ದಾದರ್ ತಿಲಕ್ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಲು ಮುಂದಾದ ಯುವ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಬಿ.ವಿ. ಶ್ರೀನಿವಾಸ್ ಮಾತನಾಡದೆ ನಿರ್ಗಮಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular