ಶಾಲೆಯಲ್ಲೇ ಶಿಕ್ಷಕನ ಬೆನ್ನಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೋಷಕರು ಅರೆಸ್ಟ್

ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡನೇ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ.

ತಮ್ಮ ಮಗುವಿನ ಮೇಲೆ ಶಿಕ್ಷಕ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಶಿಕ್ಷಕನ ಮೇಲೆ ಪೋಷಕರು ಹಲ್ಲೆ ನಡೆಸಿದ್ದಾರೆ. ಆದರೆ, ಆರೋಪವನ್ನು ಶಿಕ್ಷಕ ನಿರಾಕರಿಸಿದ್ದಾರೆ.

ತಮಿಳುನಾಡಿನ ಟುಟಿಕೋರಿನ್‌ನಲ್ಲಿರುವ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಆರ್. ಭರತ್ ವಿರುದ್ಧ ಆರೋಪ ಕೇಳಿ ಬಂದಿದೆ.

ಪೋಷಕರು ತರಗತಿಯೊಳಗೆ ನುಗ್ಗಿ ತಮ್ಮ ಮಗುವನ್ನು ಥಳಿಸಿದ್ದ ಬಗ್ಗೆ ಪ್ರಶ್ನಿಸುತ್ತಾರೆ. ಶಿಕ್ಷಕ ನಿರಾಕರಿಸಿದಾಗ ಮಗುವಿನ ತಾಯಿ ಸೆಲ್ವಿ, ಮಗುವಿಗೆ ಹೊಡೆಯುವುದನ್ನು ನಿಷೇಧಿಸಲಾಗಿದೆ. ಮಗುವನ್ನು ಹೊಡೆಯುವುದು ಕಾನೂನುಬಾಹಿರ, ನಿಮಗೆ ಯಾರು ಹಕ್ಕು ನೀಡಿದರು? ನಾನು ನನ್ನ ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ಹೇಳುತ್ತಾರೆ.

ಇತರ ಮಕ್ಕಳು ನೋಡುತ್ತಿರುವಂತೆಯೇ, ತಂದೆ ಶಿವಲಿಂಗಂ ಶಿಕ್ಷಕನ ಮೇಲೆ ಹಲ್ಲೆ ಮಾಡುತ್ತಾನೆ, ತರಗತಿ ಶಾಲೆ ಆವರಣದಲ್ಲಿ ಅಟ್ಟಾಡಿಸಿಕೊಂಡು ಥಳಿಸುತ್ತಾರೆ. ಇಬ್ಬರೂ ಭರತ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆ, ಮತ್ತೊಬ್ಬ ಶಿಕ್ಷಕಿ ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಬಹುದು. ಪೋಷಕರು ಹಾಗೂ ಮಗುವಿನ ಅಜ್ಜ ಮುನುಸಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾವು ಅವರ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಪಿತೂರಿ ಮತ್ತು ಸರ್ಕಾರಿ ನೌಕರ ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಎಲ್. ಬಾಲಾಜಿ ಸರವಣನ್ ಹೇಳಿದ್ದಾರೆ.

https://twitter.com/Itz_Katti/status/1638280803342864412

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read