ಹಿಜಾಬ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರು ಎಂದು ಇಬ್ಬರು ಮಹಿಳೆಯರ ಮೇಲೆ ಮೊಸರು ಎರಚಿದ ಪುರುಷನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಶಾಕಿಂಗ್ ವಿಚಾರವೆಂದರೆ, ಮೊಸರು ಎರಚಿದ ವ್ಯಕ್ತಿಯೊಂದಿಗೆ ಸಂತ್ರಸ್ತೆಯರನ್ನೂ ಬಂಧಿಸಲಾಗಿದೆ. ತಮ್ಮ ಕೂದಲನ್ನು ಸಾರ್ವಜನಿಕವಾಗಿ ತೋರಿದ ಆಪಾದನೆ ಮೇಲೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಮೊಸರು ಎರಚಿದ ಪುರುಷನನ್ನು ಸಾರ್ವಜನಿಕ ಶಾಂತಿ ಕದಡಿದ ಆಪಾದನೆ ಮೇಲೆ ಬಂಧಿಸಲಾಗಿದೆ.
ಇಡೀ ಘಟನೆ ಅಂಗಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇಬ್ಬರು ಮಹಿಳೆಯರಲ್ಲಿ ಒಬ್ಬರು ಜೀನ್ಸ್ ಧಿರಿಸಿದ್ದು, ಕೂದಲನ್ನು ಮುಕ್ತವಾಗಿ ಬಿಟ್ಟಿದ್ದರು ಎಂದು ಕಾರಣಕ್ಕೆ ಅಂಗಡಿಗೆ ಬಂದ ಪುರುಷನೊಬ್ಬ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ನೋಡನೋಡುತ್ತಲೇ ಆ ಮಹಿಳೆಯರ ಮೇಲೆ ಡಬ್ಬದಲ್ಲಿದ್ದ ಮೊಸರನ್ನು ಸುರಿದಿದ್ದಾನೆ.
ಘಟನೆಯ ವಿಡಿಯೋ ಭಾರೀ ವೈರಲ್ ಆದ ಬೆನ್ನಿಗೇ, ಹಿಜಾಬ್ ಧರಿಸಬೇಕೆಂಬ ಕಾನೂನು ಇಲ್ಲದೇ ಇದ್ದರೂ ಸಹ, ಧಾರ್ಮಿಕ ಅಗತ್ಯತೆಯ ಕಾರಣದಿಂದ ಇರಾನೀ ಮಹಿಳೆಯರು ಹಿಜಾಬ್ ಧರಿಸಬೇಕು ಎಂದು ಇರಾನ್ ಅಧ್ಯಕ್ಷ ಎಬ್ರಾಹಿಂ ರೈಸಿ ಸ್ಪಷ್ಟಪಡಿಸಿದ್ದಾರೆ.
https://twitter.com/ksadjadpour/status/1641852721018830856?ref_src=twsrc%5Etfw%7Ctwcamp%5Etweetembed%7Ctwterm%5E1641852721018830856%7Ct