
ಈ ಮೂಲಕ ಅಕ್ಷಯ್ ಕುಮಾರ್ ಹೊಸ ಗಿನ್ನಿಸ್ ದಾಖಲೆ ಬರೆದಿದ್ದು, ಈ ಮೊದಲು ಅಮೆರಿಕದ ಜೇಮ್ಸ್ ಸ್ಮಿತ್ ಎಂಬವರು ಮೂರು ನಿಮಿಷದಲ್ಲಿ 168 ಸೆಲ್ಫಿ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಇದಕ್ಕೂ ಮೊದಲು ಮೂರು ನಿಮಿಷದ ಅವಧಿಯಲ್ಲಿ 105 ಸೆಲ್ಫಿ ತೆಗೆದುಕೊಂಡಿದ್ದರು.
ಈ ದಾಖಲೆಯನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ ಎಂದಿರುವ ಅಕ್ಷಯ್ ಕುಮಾರ್, ಇದೇ ಸಂದರ್ಭದಲ್ಲಿ ಮಾಧ್ಯಮ ಒಂದರ ಜೊತೆ ಮಾತನಾಡುವ ವೇಳೆ ಭಾರತವೇ ನನಗೆ ಸರ್ವಸ್ವವಾಗಿದ್ದು, ಕೆನಡಾ ಪೌರತ್ವ ತೊರೆಯುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

