ʼಓಂ ಶಾಂತಿ ಓಂ’ ವಿವಾದ: 100 ಕೋಟಿ ದಾವೆ ಹೂಡಿದ್ದ ಮನೋಜ್ ಕುಮಾರ್ | Watch

ಹಿಂದಿ ಚಿತ್ರರಂಗದ ಹಿರಿಯ ನಟ, ದೇಶಭಕ್ತಿ ಪ್ರಧಾನ ಚಿತ್ರಗಳ ಮೂಲಕ ಮನೆಮಾತಾಗಿದ್ದ ‘ಭಾರತ್ ಕುಮಾರ್’ ಎಂದೇ ಖ್ಯಾತರಾಗಿದ್ದ ಮನೋಜ್ ಕುಮಾರ್ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ತಮ್ಮ ಸೈದ್ಧಾಂತಿಕ ನಿಲುವು ಹಾಗೂ ದಿಟ್ಟತನದ ಮಾತುಗಳಿಂದಲೇ ಗುರುತಿಸಿಕೊಂಡಿದ್ದ ಮನೋಜ್ ಕುಮಾರ್ ಅವರು 2008ರಲ್ಲಿ ನಟ ಶಾರುಖ್ ಖಾನ್ ಅವರ ‘ಓಂ ಶಾಂತಿ ಓಂ’ ಚಿತ್ರದಲ್ಲಿ ತಮ್ಮನ್ನು ವ್ಯಂಗ್ಯ ಮಾಡಲಾಗಿದೆ ಎಂದು ಆರೋಪಿಸಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2007ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶಾರುಖ್ ಅವರು ಮನೋಜ್ ಕುಮಾರ್ ಅವರ ವಿಶಿಷ್ಟ ಮುಖ ಮುಚ್ಚಿಕೊಳ್ಳುವ ಶೈಲಿಯನ್ನು ಅನುಕರಿಸಿದ್ದು ಮನೋಜ್ ಕುಮಾರ್ ಅವರಿಗೆ ತೀವ್ರ ಬೇಸರ ಉಂಟುಮಾಡಿತ್ತು.

ಜಪಾನ್‌ನಲ್ಲಿ ‘ಓಂ ಶಾಂತಿ ಓಂ’ ಬಿಡುಗಡೆಯಾದಾಗಲೂ ಆಕ್ಷೇಪಾರ್ಹ ದೃಶ್ಯವನ್ನು ತೆಗೆಯದ ಕಾರಣ ಮನೋಜ್ ಕುಮಾರ್ ಕೋಪಗೊಂಡು ಶಾರುಖ್ ಹಾಗೂ ಚಿತ್ರತಂಡದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದರು. ನಂತರ ಶಾರುಖ್ ಇ-ಮೇಲ್ ಮೂಲಕ ಕ್ಷಮೆ ಕೋರಿದ್ದರೂ, ಚಿತ್ರದಲ್ಲಿ ಆ ದೃಶ್ಯ ಹಾಗೆಯೇ ಉಳಿದಿದ್ದರಿಂದ ಮನೋಜ್ ಕುಮಾರ್ ತೀವ್ರ ಆಘಾತಕ್ಕೊಳಗಾಗಿದ್ದರು.

ಆದಾಗ್ಯೂ, 2013ರಲ್ಲಿ ಮನೋಜ್ ಕುಮಾರ್ ಅವರು ಶಾರುಖ್ ಖಾನ್ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆದರು. ಶಾರುಖ್ ಮತ್ತು ಫರಾ ಖಾನ್ ಅವರಿಗೆ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ ಆ ದಾವೆ ವಿಫಲವಾಯಿತು ಎಂದು ಅವರು ಅಂದು ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read