HomeKarnatakaಓಲಾ, ಊಬರ್‌ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್ ; ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ

ಓಲಾ, ಊಬರ್‌ಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್ ; ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ

ಬೆಂಗಳೂರು- ಓಲಾ, ಊಬರ್ ಸೇರಿದಂತೆ ಇನ್ನಿತರೆ App ಆಧಾರಿತ ವಾಣಿಜ್ಯ ಪ್ರಯಾಣಿಕ ವಾಹನಗಳಿಗೂ ʻನಮ್ಮ ಬಿಎಂಟಿಸಿ ಮೊಬೈಲ್ ಆಪ್ 2.0ʼ ಅನ್ನು ಒದಗಿಸಲಾಗುತ್ತದೆ.

ಈ ಮೂಲಕ ಓಲಾ, ಊಬರ್ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಾವು ಇಳಿಯುವ ಸ್ಥಳಗಳಿಗೆ ಹೋಗುವ ಬಿಎಂಟಿಸಿ ಬಸ್ ಗಳ ಸಂಚಾರ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.

ವಿಧಾನಸೌಧದಲ್ಲಿ ಮಂಗಳವಾರ ಸಾರಿಗೆ ಇಲಾಖೆ, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಖಾಸಗಿ ಆಪ್ ಆಧಾರಿತ ಪ್ರಯಾಣಿಕರ ವಾಹನಗಳಿಗೂ ಬಿಎಂಟಿಸಿ ಲೈವ್ ಟ್ರ್ಯಾಕಿಂಗ್ ಆಪ್ ಅನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೋರಿಕೆ ತಡೆಗೆ ಕ್ರಮಗಳು

ಸೋರಿಕೆ ತಡೆಗೆ ಕಟ್ಟಪ್ಪಣೆ

ಬಿಎಂಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳಲ್ಲಿ ಸೋರಿಕೆಯಾಗುವುದನ್ನು ತಡೆಗಟ್ಟಬೇಕು. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ ಸಚಿವರು, ದುಂದುವೆಚ್ಚಕ್ಕೆ ಕಡಿವಾಣ ಹಾಕುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

ಮೆಟ್ರೋ ನಿಲ್ದಾಣಗಳಿಗೆ ವಿಶಿಷ್ಟ ಸೇವೆ

ಮೆಟ್ರೋ ನಿಲ್ದಾಣಗಳಿಗೆ ಎಸಿ ಮಿನಿ ಬಸ್

ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆಯಡಿ ಬಿಎಂಟಿಸಿಗೆ ಬರುತ್ತಿರುವ 4500 ಎಲೆಕ್ಟ್ರಿಕ್ ಬಸ್ ಗಳ ಪೈಕಿ 200 ಮಿನಿ ಹವಾನಿಯಂತ್ರಿತ(ಎಸಿ) ಬಸ್ ಗಳನ್ನು ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳ ಸುತ್ತಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯಿಂದ ಸಂಪರ್ಕ ಕಲ್ಪಿಸಲು ಸಚಿವರು ಸೂಚನೆ ನೀಡಿದರು.

ಬಡಾವಣೆಗಳ ಕಟ್ಟಕಡೆಯ ಸ್ಥಳಗಳಿಂದ ಮೆಟ್ರೋ ರೈಲು ನಿಲ್ದಾಣಗಳಿಗೆ ಈ ಬಸ್ ಗಳು ಸಂಪರ್ಕ ಕಲ್ಪಿಸಲಿವೆ ಮತ್ತು ಇದರಿಂದ ಬೆಂಗಳೂರು ನಗರದ ನಾಗರಿಕರಿಗೆ ಅನುಕೂಲವಾಗಲಿದೆ.

ಐಟಿ ಕಂಪನಿಗಳಿಗೆ ಬಸ್ ಸೇವೆ

ಐಟಿ ಬಿಟಿ ಕಂಪನಿಗಳಿಗೂ ಬಿಎಂಟಿಸಿ ಬಸ್

ಬೆಂಗಳೂರಿನಲ್ಲಿರುವ ಸಾವಿರಾರು ಐಟಿಬಿಟಿ ಕಂಪನಿಗಳ ಸಿಬ್ಬಂದಿ ತಮ್ಮ ಖಾಸಗಿ ವಾಹನ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಬಿಎಂಟಿಸಿ ಆ ಕಂಪನಿಗಳಿಗೆ ಇನ್ನಷ್ಟು ಹವಾನಿಯಂತ್ರಿತ ಬಸ್ ಗಳನ್ನು ಒದಗಿಸಲಿದೆ ಎಂದು ತಿಳಿಸಿದ ಸಚಿವರು, ಈ ದಿಸೆಯಲ್ಲಿ ಕಂಪನಿಗಳೊಂದಿಗೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular