ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್ರ್ನಲ್ಲಿ ಶೇರ್ ಮಾಡಿದ್ದು, ಇದೀಗ ಸಕತ್ ವೈರಲ್ ಆಗಿದೆ.
ತಮ್ಮ ಕಚೇರಿ ಬೆಳ್ಳಂಬೆಳಗ್ಗೆ ಯಾವುದಕ್ಕೆ ಸಾಕ್ಷಿಯಾಗುತ್ತದೆ ಎನ್ನುವ ಇಣುಕು ನೋಟ ಇದು ಎಂದು ಬರೆದು ಅದನ್ನು ಶೇರ್ ಮಾಡಿದ್ದಾರೆ. ಚಿತ್ರದಲ್ಲಿ ಮೂರು ನಾಯಿಗಳು ಓಲಾ ಕಚೇರಿಯಲ್ಲಿ ಸೋಫಾಗಳ ಮೇಲೆ ಮಲಗಿರುವುದನ್ನು ಮತ್ತು ವಿಶ್ರಾಂತಿ ಪಡೆಯುವುದನ್ನು ನೋಡಬಹುದಾಗಿದೆ.
‘ಓಲಾ ಕಚೇರಿಯಲ್ಲಿ ಬೆಳಿಗ್ಗೆ’ ಎಂದು ಅವರು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ತಮಾಷೆಯ ಕಮೆಂಟ್ಸ್ಗಳ ಸುರಿಮಳೆಯಾಗಿದೆ. ಹಲವಾರು ಬಳಕೆದಾರರು ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ” ನಾವು ಹೆಚ್ಚು ಹೆಚ್ಚು ಸಾಕುಪ್ರಾಣಿಗಳ ಜೊತೆ ಸ್ನೇಹ ಮಾಡಬೇಕು. ಅವುಗಳನ್ನೂ ಅಪಾಯಿಂಟ್ ಮಾಡಿಕೊಳ್ಳಬೇಕು ಎಂದು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
Mornings at the office 😄 pic.twitter.com/LlZ7XP72mL
— Bhavish Aggarwal (@bhash) February 1, 2023
Mornings at the office 😄 pic.twitter.com/LlZ7XP72mL
— Bhavish Aggarwal (@bhash) February 1, 2023
Mornings at the office 😄 pic.twitter.com/LlZ7XP72mL
— Bhavish Aggarwal (@bhash) February 1, 2023