HomeLive Newsಶಾಲೆಯ ಅಡುಗೆ ಸಹಾಯಕಿಯೊಂದಿಗೆ ಹೆಡ್ ಮಾಸ್ಟರ್ ಅಕ್ರಮ ಸಂಬಂಧ: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿ ಹಾರಹಾಕಿ...

ಶಾಲೆಯ ಅಡುಗೆ ಸಹಾಯಕಿಯೊಂದಿಗೆ ಹೆಡ್ ಮಾಸ್ಟರ್ ಅಕ್ರಮ ಸಂಬಂಧ: ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿ ಹಾರಹಾಕಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಭುವನೇಶ್ವರ: ಶಾಲೆಯ ಅಡುಗೆ ಸಹಾಯಕಿಯೊಂದಿಗೆ ಹೆಡ್​​ ಮಾಸ್ಟರ್ ಅಕ್ರಮ ಸಂಬಂಧಹೊಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆರೋಪಿಗೆ ತಕ್ಕ ಪಾಠ ಕಲಿಸಿರುವ ಘಟನೆ ಒಡಿಶಾದ ರೂರ್ಕೆಲಾದಲ್ಲಿ ನಡೆದಿದೆ.

ಇಲ್ಲಿನ ಸುಂದರಘಡ ಜಿಲ್ಲೆಯ ಸೇವಾಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಚಿತ್ರವೆಂದರೆ ಮಹಿಳೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರ ಪತ್ನಿ. ಇದರಿಂದ ಆಕ್ರೋಶಗೊಂಡ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಹೆಡ್ ಮಾಸ್ಟರ್ ನಿಗೆ ಚಪ್ಪಲಿ ಹಾರ ಹಾಕಿ ಊರ ತುಂಬಾ ಪರೇಡ್ ಮಾಡಿಸಿದ್ದಾರೆ.

ಈ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆ ಅದೇ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷನ ಪತ್ನಿಯಾಗಿದ್ದಾರೆ. ಮುಖ್ಯೋಪಾಧ್ಯಾಯ ರೋಹಿತ್ ಕುಮಾರ್ ರೇ (45) ಈಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ. ಬಿಸಿಯೂಟದ ನಂತರ ಮುಖ್ಯೋಪಾಧ್ಯಾಯ ಮತ್ತು ಮಹಿಳಾ ಕುಕ್ ಒಂದೇ ಕೋಣೆಯಲ್ಲಿ ಇರುವುದನ್ನು ಗಮನಿಸಿದ ಅಧ್ಯಕ್ಷ ಮತ್ತು ಗ್ರಾಮಸ್ಥರ ಗುಂಪು ಏಕಾಏಕಿ ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಡ್‌ಮಾಸ್ಟರ್‌ಗೆ ಹಿಗ್ಗಾಮುಗ್ಗಾ ಥಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದೆ. ಈ ವೇಳೆ ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಮಕ್ಕಳು ಭಯಭೀತರಾಗಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಪೊಲೀಸ್ ವಿಚಾರಣೆಯಲ್ಲಿ ರೋಹಿತ್ ಕುಮಾರ್ ರೇ ಈ ಹಿಂದೆ ಕೂಡ ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು ಎಂಬ ವಿಷಯ ತಿಳಿದುಬಂದಿದೆ. ಈ ಹಿಂದೆ ಅಸಿಸ್ಟೆಂಟ್ ಟೀಚರ್ ಜೊತೆ ಸರಸವಾಡಿ ಅರೆಸ್ಟ್ ಆಗಿದ್ದ ಈತ, ಶಿಕ್ಷೆ ಅನುಭವಿಸಿ ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದ. ಆದರೂ ಹಳೇ ಚಾಳಿ ಬಿಡದೆ ಈಗ ಅಧ್ಯಕ್ಷನ ಪತ್ನಿಯ ಜೊತೆಗೇ ಅಕ್ರಮ ಸಂಬಂಧ ಬೆಳೆಸಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular