HomeIndiaಹುಟ್ಟುಹಬ್ಬದ ಪಾರ್ಟಿ ಮಾಡಲು ಹೋದ ಯುವಕ ಓಯೋ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹುಟ್ಟುಹಬ್ಬದ ಪಾರ್ಟಿ ಮಾಡಲು ಹೋದ ಯುವಕ ಓಯೋ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಒಡಿಶಾದ ಖಂಡಗಿರಿಯ ಓಯೋ ಹೋಟೆಲ್ ಒಂದರಲ್ಲಿ ಯುವಕನೊಬ್ಬ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ದುರ್ಗಾ ಪ್ರಸಾದ್ ಮಿಶ್ರಾ ಎಂದು ಗುರುತಿಸಲಾದ ಈ ಯುವಕ, ಕಟಕ್ ಜಿಲ್ಲೆಯ ನಿಯಾಲಿ ಎಂಬ ಊರಿನಾತ ಎಂದು ತಿಳಿದು ಬಂದಿದೆ. ಹುಟ್ಟುಹಬ್ಬದ ಆಚರಣೆಗೆಂದು ಈ ಯುವಕ ಓಯೋ ಹೋಟೆಲ್‌ಗೆ ಭೇಟಿ ಕೊಟ್ಟಿದ್ದ ಎಂದು ಭುವನೇಶ್ವರ ಡಿಸಿಪಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯುವಕ ತನ್ನ ಸ್ನೇಹಿತೆ ವಾಶ್‌ರೂಂನಲ್ಲಿದ್ದ ವೇಳೆ ಆಕೆಯ ದುಪಟ್ಟಾ ಬಳಸಿಕೊಂಡು ನೇಣು ಬಿಗಿದುಕೊಂಡಿದ್ದು, ಈತನ ಶವವು ಸ್ನೇಹಿತರಿಗೆ ಬೆಳಿಗ್ಗೆ ಪತ್ತೆಯಾಗಿದೆ.

ಘಟನೆಯ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಭೇಟಿ ಕೊಟ್ಟ ಖಾಂದಗಿರಿ ಪೊಲೀಸ್ ಠಾಣಾ ಸಿಬ್ಬಂದಿ ಮೃತ ಯುವಕನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

ದುರ್ಗಾ ತನ್ನ ಗೆಳತಿ ಹಾಗೂ ಇನ್ನಿಬ್ಬರು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆಂದು ರೂಂ ಬುಕ್ ಮಾಡಿದ್ದ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಹುಟ್ಟುಹಬ್ಬದ ಪಾರ್ಟಿಗೆ ಕರೆದು ದುರ್ಗಾನನ್ನು ಅಲ್ಲಿಯೇ ಕೊಲ್ಲುವ ಸಂಚನ್ನು ಆತನ ಸ್ನೇಹಿತರು ಮಾಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

“ಬಿಯರ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ದುರ್ಗಾ, ಬಾತ್‌ರೂಂಗೆ ತೆರಳಿದ್ದು, ಅಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ,” ಎಂದು ಯುವಕನ ಸ್ನೇಹಿತರು ತಿಳಿಸಿದ್ದಾರೆ.

ಯುವಕನ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಸಾವಿನ ಕಾರಣ ಪತ್ತೆ ಮಾಡಲು ತನಿಖೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular