HomeAutoಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ....!

ಬೈಕ್ ಸವಾರ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಸಾವಿರ ರೂಪಾಯಿ ದಂಡ….!

ಒಡಿಶಾ: ಒಡಿಶಾದಲ್ಲಿ ಸ್ಕೂಟರ್ ಸವಾರನೊಬ್ಬ ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ! ಸ್ವಲ್ಪ ವಿಚಿತ್ರ ಎನಿಸಿದರೂ ಇದು ಸತ್ಯ. ರಾಜ್‌ಗಂಗ್‌ಪುರದ ದ್ವಿಚಕ್ರ ವಾಹನದ ಮಾಲೀಕ ಅಭಿಷೇಕ್ ಕರ್ ಅವರನ್ನು ಈ ದಂಡ ಚಿಂತೆಗೀಡು ಮಾಡಿದೆ.

ವರದಿಗಳ ಪ್ರಕಾರ, ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಅಭಿಷೇಕ್​ ಅವರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ನನಗೆ ದಂಡದ ಚಲನ್​ ಬಂದಿದೆ. ಅದರಲ್ಲಿರುವ ವಿವರಗಳನ್ನು ಪರಿಶೀಲಿಸಿದಾಗ, ಸೀಟ್ ಬೆಲ್ಟ್ ಧರಿಸದಿದ್ದಕ್ಕಾಗಿ ಸಾವಿರ ರೂಪಾಯಿ ದಂಡ ವಿಧಿಸಿರುವುದು ಕಂಡು ಬಂದು ಸುಸ್ತಾಗಿದ್ದೇನೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯ ನಂತರ, ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದರು. ಆದರೆ ಅವರು ಅವರಿಂದ ಯಾವುದೇ ಸೂಕ್ತ ಮಾಹಿತಿ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಎಲ್ಲಿ ಸಂಪರ್ಕಿಸಬೇಕು ಎಂದು ತಿಳಿಯದೇ ತಾವು ಅಡ್ಡಾಡುತ್ತಿರುವುದಾಗಿ ಅಭಿಷೇಕ್​ ನೋವು ತೋಡಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular