ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ. ಪ್ರೀತಿ, ಸೌಂದರ್ಯ, ಆಕರ್ಷಣೆ, ಸಂಪತ್ತು ಮತ್ತು ಐಷಾರಾಮಿ ಜೀವನಕ್ಕೆ ಶುಕ್ರನೇ ಕಾರಕ ಗ್ರಹ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಹೀಗಾಗಿ ಶುಕ್ರನ ರಾಶಿ ಬದಲಾವಣೆ, ಸಂಚಾರ ಹಾಗೂ ವಕ್ರಗತಿಯು ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.
ಸದ್ಯ ಶುಕ್ರನು ತನ್ನ ಮೂಲತ್ರಿಕೋಣ ರಾಶಿಯಾದ ತುಲಾದಲ್ಲಿ ಸಂಚರಿಸುತ್ತಿದ್ದಾನೆ. ಅಕ್ಟೋಬರ್ 3, 2026ರಂದು ಮಧ್ಯಾಹ್ನ 12:45ಕ್ಕೆ ತುಲಾ ರಾಶಿಯಲ್ಲೇ ಶುಕ್ರ ವಕ್ರಗತಿಗೆ ಬರಲಿದ್ದಾನೆ. ಸುಮಾರು 42 ದಿನಗಳ ಕಾಲ ಈ ಹಿಮ್ಮುಖ ಚಲನೆ ಮುಂದುವರಿಯಲಿದ್ದು, ನವೆಂಬರ್ 14ರಂದು ಶುಕ್ರನು ಮತ್ತೆ ನೇರ ಚಲನೆಗೆ ಮರಳಲಿದ್ದಾನೆ. ಈ ನಡುವೆ ನವೆಂಬರ್ 6ರಂದು ತುಲಾದಿಂದ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ.
ಈ ಅವಧಿಯಲ್ಲಿ ಕೆಲ ರಾಶಿಯವರಿಗೆ ಉದ್ಯೋಗ, ವ್ಯವಹಾರ, ಹಣಕಾಸು ಮತ್ತು ಕುಟುಂಬ ಜೀವನದಲ್ಲಿ ಬದಲಾವಣೆಗಳು ಕಂಡುಬರಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ವಿಶೇಷವಾಗಿ ಕರ್ಕಾಟಕ, ಮಕರ, ಮಿಥುನ, ತುಲಾ, ಧನು ಮತ್ತು ವೃಷಭ ರಾಶಿಯವರಿಗೆ ಶುಕ್ರನ ಈ ಸಂಚಾರ ಗಮನಾರ್ಹವಾಗಿರಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ಅವಧಿ ಕುಟುಂಬ ಮತ್ತು ವೈಯಕ್ತಿಕ ವಿಚಾರಗಳಲ್ಲಿ ನೆಮ್ಮದಿ ತರಬಹುದು. ಮನೆಯಲ್ಲಿದ್ದ ಕೆಲವು ಹಳೆಯ ಭಿನ್ನಾಭಿಪ್ರಾಯಗಳು ನಿಧಾನವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.
ಬಹುಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವ ಸಂದರ್ಭವೂ ಬರಬಹುದು. ಪ್ರೀತಿಪಾತ್ರರ ಜೊತೆಗಿನ ಸಂಬಂಧದಲ್ಲಿ ಆತ್ಮೀಯತೆ ಹೆಚ್ಚಾಗುವ ಸಾಧ್ಯತೆಯಿದೆ.
ಸಾಮಾಜಿಕವಾಗಿ ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗಬಹುದು. ಕಾನೂನು ಅಥವಾ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಡೆಯುತ್ತಿದ್ದ ಕೆಲಸಗಳು ಕೂಡ ಮುಂದೆ ಸಾಗುವ ಸಾಧ್ಯತೆ ಇದೆ.
ಮಕರ ರಾಶಿ
ಮಕರ ರಾಶಿಯವರಿಗೆ ಶುಕ್ರನ ವಕ್ರಗತಿಯ ಪ್ರಭಾವ ವೃತ್ತಿ ಕ್ಷೇತ್ರದಲ್ಲಿ ಹೆಚ್ಚು ಕಂಡುಬರಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು ಅಥವಾ ಬಹುಕಾಲದಿಂದ ಕಾಯುತ್ತಿದ್ದ ಅವಕಾಶವೊಂದು ಕೈಗೂಡಬಹುದು.
ಕಲೆ, ಸಂಗೀತ, ಫ್ಯಾಷನ್, ಮಾಧ್ಯಮ ಸೇರಿದಂತೆ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶ ಸಿಗಬಹುದು. ಹಿಂದೆ ಎದುರಾಗಿದ್ದ ಕೆಲವು ಅಡೆತಡೆಗಳು ದೂರವಾಗುವ ಸಾಧ್ಯತೆಯಿದೆ.
ಕೆಲಸದ ವಿಚಾರದಲ್ಲಿ ಮನ್ನಣೆ ಸಿಗುವ ಜೊತೆಗೆ ಸಾಮಾಜಿಕ ಗೌರವವೂ ಹೆಚ್ಚಾಗಬಹುದು. ಆದರೆ ಈ ಸಮಯದಲ್ಲಿ ಐಷಾರಾಮಿ ವಸ್ತುಗಳ ಖರೀದಿ ಮತ್ತು ಸೌಕರ್ಯಗಳಿಗಾಗಿ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಹಣದ ವಿಚಾರದಲ್ಲಿ ಹಿಡಿತ ಇರಲಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಶುಕ್ರನ ವಕ್ರಗತಿ ಹೊಸ ಆಲೋಚನೆಗಳಿಗೆ ದಾರಿ ಮಾಡಿಕೊಡಬಹುದು. ಸೃಜನಶೀಲ ಕೆಲಸದಲ್ಲಿ ತೊಡಗಿರುವವರಿಗೆ ಹೊಸ ಅವಕಾಶಗಳು ಸಿಗಬಹುದು.
ನಿಮ್ಮ ಯೋಜನೆಗಳು ವೃತ್ತಿ ಅಥವಾ ವ್ಯವಹಾರದಲ್ಲಿ ಫಲ ನೀಡುವ ಸಾಧ್ಯತೆಯಿದೆ. ಹೂಡಿಕೆ ವಿಚಾರದಲ್ಲಿಯೂ ಕೆಲವು ಅವಕಾಶಗಳು ಎದುರಾಗಬಹುದು. ಆದಾಯಕ್ಕೆ ಹೊಸ ಮೂಲ ಹುಡುಕುವ ಪ್ರಯತ್ನ ಯಶಸ್ವಿಯಾಗಬಹುದು.
ಹಳೆಯ ಸಾಲ ಅಥವಾ ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ದಾರಿ ಸಿಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಸುಧಾರಿಸುವುದರೊಂದಿಗೆ ನಿಮ್ಮ ಸಾಮಾಜಿಕ ಸ್ಥಾನಮಾನವೂ ಹೆಚ್ಚಾಗಬಹುದು.
ತುಲಾ ರಾಶಿ
ಶುಕ್ರನು ತುಲಾ ರಾಶಿಯಲ್ಲೇ ವಕ್ರಗತಿ ಪಡೆಯುವುದರಿಂದ ಈ ರಾಶಿಯವರಿಗೆ ಈ ಅವಧಿ ವಿಶೇಷವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಬಹುದು. ಹಿಂದೆ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವ ಸಂದರ್ಭ ಬರಬಹುದು.
ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವ್ಯಾಪಾರ ಮಾಡುವವರಿಗೆ ಹಳೆಯ ಪರಿಚಯಗಳು ಮತ್ತೆ ಉಪಯೋಗಕ್ಕೆ ಬರಬಹುದು. ಹಳೆಯ ಸಂಪರ್ಕದ ಮೂಲಕ ಹೊಸ ಒಪ್ಪಂದ ಅಥವಾ ವ್ಯವಹಾರದ ಅವಕಾಶ ಎದುರಾಗಬಹುದು.
ಹಣಕಾಸಿನ ವಿಚಾರದಲ್ಲಿಯೂ ಕೆಲವು ಬದಲಾವಣೆಗಳು ಕಾಣಬಹುದು. ವೈಯಕ್ತಿಕ ಜೀವನದಲ್ಲಿ ಹಳೆಯ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಸಿಗಬಹುದು.
ಆದರೆ ದೊಡ್ಡ ಮೊತ್ತದ ಹಣಕಾಸು ವ್ಯವಹಾರ ಅಥವಾ ಪಾಲುದಾರಿಕೆ ವಿಚಾರದಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳದೆ, ದಾಖಲೆಗಳನ್ನು ಪರಿಶೀಲಿಸುವುದು ಒಳಿತು.
ಧನು ರಾಶಿ
ಧನು ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು. ಕೆಲಸ ಬದಲಾವಣೆ ಅಥವಾ ಹೊಸ ಜವಾಬ್ದಾರಿ ಪಡೆಯುವ ಪರಿಸ್ಥಿತಿ ಎದುರಾಗಬಹುದು.
ಉದ್ಯೋಗಕ್ಕಾಗಿ ಹಲವು ದಿನಗಳಿಂದ ಪ್ರಯತ್ನಿಸುತ್ತಿರುವವರಿಗೆ ಹಿಂದೆ ಮಾಡಿದ ಪ್ರಯತ್ನವೇ ಈಗ ಫಲ ಕೊಡಬಹುದು. ವ್ಯಾಪಾರಿಗಳಿಗೆ ಹಳೆಯ ಗ್ರಾಹಕರು ಅಥವಾ ಪಾಲುದಾರರಿಂದ ಹೊಸ ವ್ಯವಹಾರ ಸಿಗುವ ಸಾಧ್ಯತೆಯಿದೆ.
ವಿದೇಶಿ ಸಂಪರ್ಕಗಳಿಂದಲೂ ಪ್ರಯೋಜನವಾಗಬಹುದು. ಆದಾಯ ಹೆಚ್ಚಿಸಲು ಹೊಸ ಮಾರ್ಗಗಳ ಬಗ್ಗೆ ಯೋಚಿಸುವ ಸಮಯ ಇದು. ಬಹುಕಾಲದಿಂದ ಮುಂದೂಡಿದ್ದ ಯೋಜನೆಗಳನ್ನು ಮತ್ತೆ ಆರಂಭಿಸಲು ಅವಕಾಶ ಸಿಗಬಹುದು.
ಕುಟುಂಬದವರ ಬೆಂಬಲ ಸಿಗುವ ಸಾಧ್ಯತೆಯಿದ್ದು, ಕೆಲಸ ಮತ್ತು ಮನೆಯ ಜವಾಬ್ದಾರಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಹಳೆಯ ವಿಷಯಗಳು ಮತ್ತೆ ಮುನ್ನೆಲೆಗೆ ಬರಬಹುದು. ಬಹುಕಾಲದಿಂದ ಬಾಕಿ ಉಳಿದಿದ್ದ ಹಣ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ಚುರುಕುಗೊಳ್ಳುವ ಸಾಧ್ಯತೆಯಿದೆ.
ಹಿಂದಿನ ಸಂಪರ್ಕಗಳಿಂದ ಹೊಸ ಅವಕಾಶ ಸಿಗಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿ ಬರಬಹುದು. ವ್ಯಾಪಾರಿಗಳಿಗೆ ಹಳೆಯ ಗ್ರಾಹಕರ ಮೂಲಕ ಮತ್ತೆ ವ್ಯವಹಾರ ದೊರೆಯುವ ಸಾಧ್ಯತೆಯಿದೆ.
ಆದಾಯ ಹೆಚ್ಚಿಸುವ ಹೊಸ ಮಾರ್ಗಗಳ ಬಗ್ಗೆ ಆಲೋಚನೆ ಮೂಡಬಹುದು. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯಲು ಅವಕಾಶ ಸಿಗಬಹುದು.ಈ ಅವಧಿಯಲ್ಲಿ ಐಷಾರಾಮಿ ವಸ್ತುಗಳ ಖರೀದಿಗೆ ಆಸಕ್ತಿ ಹೆಚ್ಚಾಗಬಹುದು. ಆದರೆ ಅನಗತ್ಯ ಖರ್ಚು ಮಾಡದೆ, ಉಳಿತಾಯಕ್ಕೂ ಗಮನ ನೀಡುವುದು ಒಳ್ಳೆಯದು.

