HomeLatest NewsBIG NEWS : ನಟಿ ರಮ್ಯಾಗೆ 'ಅಶ್ಲೀಲ ಮೆಸೇಜ್' : ತಪ್ಪಿತಸ್ಥರಿಗೆ 5 ವರ್ಷ ಜೈಲು...

BIG NEWS : ನಟಿ ರಮ್ಯಾಗೆ ‘ಅಶ್ಲೀಲ ಮೆಸೇಜ್’ : ತಪ್ಪಿತಸ್ಥರಿಗೆ 5 ವರ್ಷ ಜೈಲು ಶಿಕ್ಷೆ ಜೊತೆ ದಂಡ ಫಿಕ್ಸ್.!

ಬೆಂಗಳೂರು : ನಟಿ ರಮ್ಯಾಗೆ ಕಿಡಿಗೇಡಿಗಳು ಅಶ್ಲೀಲ ಮೆಸೇಜ್ ಮಾಡಿರುವ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಫೇಕ್ ಅಕೌಂಟ್ ನಿಂದ ಅಶ್ಲೀಲ ಮೆಸೇಜ್, ಪೋಸ್ಟ್ ಹಾಕಿದ್ದರೆ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸೈಬರ್ ತಜ್ಞೆ ಡಾ.ಶುಭಾ ಹೇಳಿದ್ದಾರೆ.

ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಶ್ಲೀಲ, ಮೆಸೇಜ್ ಪೋಸ್ಟ್ ಹಾಕಿದ್ರೆ 5 ವರ್ಷ ಜೈಲು ಶಿಕ್ಷೆ ಖಚಿತ. ದಂಡವನ್ನೂ ವಿಧಿಸಬಹುದು ಎಂದು ಹೇಳಿದ್ದಾರೆ. ಮೆಸೇಜ್ ಮಾಡಿದ್ದು ಫೇಕ್ ಅಕೌಂಟ್ ನಿಂದ ಏನೂ ಆಗಲ್ಲ ಅಂತ ಅಂದಿಕೊಂಡಿದ್ರೆ ತಪ್ಪು, ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ ಎಂದಿದ್ದಾರೆ.

ಅಶ್ಲೀಲ ಮೆಸೇಜ್ ಮಾಡಿದವರಿಗೆ ಢವಢವ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಟಿ ರಮ್ಯಾಗೆ ಮೆಸೇಜ್ ಮಾಡಿ ಕೇಸ್ ಹಿಂಪಡೆಯುಂತೆ ನಟ ದರ್ಶನ್ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ . ಅಶ್ಲೀಲ ಮೆಸೇಜ್ ವಿಚಾರಕ್ಕೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ, 43 ಖಾತೆಗಳ ವಿರುದ್ಧ ರಮ್ಯಾ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ನಟಿ ರಮ್ಯಾಗೆ ಮೆಸೇಜ್ ಮಾಡಿ ಕೇಸ್ ಹಿಂಪಡೆಯುಂತೆ ನಟ ದರ್ಶನ್ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ .ಇನ್ಮುಂದೆ ಇಂತಹ ಮೆಸೇಜ್ ಮಾಡಲ್ಲ, ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.ಈ ಕುರಿತಾಗಿ ನಟಿ ರಮ್ಯಾ ಅವರು 43 ಖಾತೆಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಗೆ ರಮ್ಯಾ 4 ಪುಟಗಳ ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ನಗರ ಪೊಲೀಸ್ ಆಯುಕ್ತ ಶ್ರೀಮಂತ್ ಕುಮಾರ್ ಸಿಂಗ್ ಅವರು, ಅಪರಾಧ ವಿಭಾಗದ ಜಂಟಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಓರ್ವ ಎಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ರಮ್ಯಾ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಸೈಬರ್ ಠಾಣೆಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular