HomeLatest Newsರೋಗಗಳಿಂದ ದೂರ ಇರಬೇಕೇ? ನಿಮ್ಮ ಊಟ ಹೇಗಿರಬೇಕು ಎಂಬುದಕ್ಕೆ ನ್ಯೂಟ್ರಿಷನ್ ಸಮಿಟ್‌ನಲ್ಲಿ ತಜ್ಞರ ಉತ್ತರ

ರೋಗಗಳಿಂದ ದೂರ ಇರಬೇಕೇ? ನಿಮ್ಮ ಊಟ ಹೇಗಿರಬೇಕು ಎಂಬುದಕ್ಕೆ ನ್ಯೂಟ್ರಿಷನ್ ಸಮಿಟ್‌ನಲ್ಲಿ ತಜ್ಞರ ಉತ್ತರ

ಆರೋಗ್ಯಕರ ಜೀವನಕ್ಕೆ ಸರಿಯಾದ ಆಹಾರವೇ ಅಡಿಪಾಯ. ಪೌಷ್ಟಿಕ ಆಹಾರ, ವೈಜ್ಞಾನಿಕ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಮೂಲಕ ರೋಗಗಳನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ ಬೆಂಗಳೂರಿನಲ್ಲಿ ‘ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026’ ಸಮಿಟ್ ಆಯೋಜಿಸಿದೆ. ಆಗಸ್ಟ್ 8, 2026ರಂದು ನಡೆಯಲಿರುವ ಈ ಒಂದು ದಿನದ ವಿಶೇಷ ಸಮಾವೇಶದಲ್ಲಿ ದೇಶದ ಖ್ಯಾತ ಪೋಷಕಾಂಶ ತಜ್ಞರು, ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ಪರಿಣಿತರು ಭಾಗವಹಿಸಿ ಆರೋಗ್ಯಕರ ಬದುಕಿನ ಕುರಿತ ಮಹತ್ವದ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಈ ಸಮಿಟ್‌ನಲ್ಲಿ ಏನಿರುತ್ತೆ?

ಮನುಷ್ಯನ ದೀರ್ಘಾಯುಷ್ಯ, ಕರುಳಿನ ಆರೋಗ್ಯ, ತಾಯಿ ಮತ್ತು ಮಕ್ಕಳ ಪೋಷಣೆ ಹಾಗೂ ವೈಯಕ್ತಿಕ ಆರೋಗ್ಯದ ಬಗ್ಗೆ ಈ ಸಮಿಟ್‌ನಲ್ಲಿ ಆಳವಾದ ಚರ್ಚೆ ನಡೆಯಲಿದೆ.ಸೇಂಟ್ ಜಾನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪೋಷಕಾಂಶ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸುಮತಿ ಸ್ವಾಮಿನಾಥನ್ ಅವರು ‘ದೀರ್ಘಾಯುಷ್ಯಕ್ಕಾಗಿ ಸರಿಯಾದ ಆಹಾರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವರೊಂದಿಗೆ ಡಾ. ಆಶಾ ಬೆನಕಪ್ಪ, ಖ್ಯಾತ ತಜ್ಞರಾದ ಶೀಲಾ ಕೃಷ್ಣಸ್ವಾಮಿ, ಡಾ. ನಂದಿತಾ ಅಯ್ಯರ್, ಅದಿತಿ ಪ್ರಸಾದ್ ಆಪ್ಟೆ ಮತ್ತು ಡಾ. ಉಮೇಶ್ ವಾಧವಾನಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ವೈಯಕ್ತಿಕ ಪೋಷಕಾಂಶಗಳು, ಕರುಳಿನ ಆರೋಗ್ಯ, ತಾಯಿ-ಮಕ್ಕಳ ಪೋಷಣೆ ಮತ್ತು ಜೀವನಶೈಲಿಯ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಳ್ಳಲಿದ್ದಾರೆ.

ವಿಜ್ಞಾನ ಆಧಾರಿತ ನಂಬಿಕಾರ್ಹ ಮಾಹಿತಿ ನೀಡುವುದೇ ನಮ್ಮ ಗುರಿ

ಈ ಮಹತ್ವದ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಹ್ಯಾಪಿಯೆಸ್ಟ್ ಹೆಲ್ತ್‌ನ ಜ್ಞಾನ ವಿಭಾಗದ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್, “ಬರಲಿರುವ ರೋಗಗಳನ್ನು ಮುಂಚಿತವಾಗಿ ತಡೆಯುವಲ್ಲಿ ಪೋಷಕಾಂಶಗಳ ಪಾತ್ರ ಬಹಳ ದೊಡ್ಡದು. ಈ ಬಗ್ಗೆ ವಿಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಜನರಿಗೆ ವಿಜ್ಞಾನ ಆಧಾರಿತವಾದ, ಶೇ. 100ರಷ್ಟು ನಂಬಿಕಾರ್ಹ ಮಾಹಿತಿಯನ್ನು ನೀಡಿ, ಅವರು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುವುದೇ ‘ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026’ ಸಮಿಟ್‌ನ ಮುಖ್ಯ ಉದ್ದೇಶವಾಗಿದೆ,” ಎಂದು ಹೇಳಿದರು.

ಆಗಸ್ಟ್ 8, 2026ರಂದು ಶನಿವಾರ 135 ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಚಾನ್ಸರಿ ಪೆವಿಲಿಯನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9:30ಕ್ಕೆ ನೋಂದಣಿ ಶುರುವಾಗಲಿದೆ. ಬೆಳಿಗ್ಗೆ 10:00ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ.

ಐಟಿ ದಿಗ್ಗಜ ಅಶೋಕ್ ಸೂಟಾ ಅವರು ಸ್ಥಾಪಿಸಿರುವ ‘ಹ್ಯಾಪಿಯೆಸ್ಟ್ ಹೆಲ್ತ್’, ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ, ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ನೀಡುವ ವಿಶಿಷ್ಟ ಸಂಸ್ಥೆಯಾಗಿದ್ದು, ಕ್ಲಿನಿಕ್‌ಗಳು, ವೆಲ್‌ನೆಸ್ ಸೆಂಟರ್‌ಗಳು, ಅತ್ಯಾಧುನಿಕ ಡಯಗ್ನೊಸ್ಟಿಕ್ಸ್ ಹಾಗೂ ಡಿಜಿಟಲ್ ಹೆಲ್ತ್ ಸೇವೆಗಳನ್ನು ಒದಗಿಸುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular