ಮಡಿಕೇರಿ: 2025-26ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಸದಸ್ಯರನ್ನು ನೋಂದಾಯಿಸಲು ಮಾರ್ಚ್ 24 ಕೊನೆಯ ದಿನವಾಗಿದೆ.
ಆದ್ದರಿಂದ ಈ ಯೋಜನೆಯಲ್ಲಿ ಅರ್ಹ ಸದಸ್ಯರುಗಳು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು ಸಮೀಪದ ಸಹಕಾರ ಸಂಘಗಳಲ್ಲಿ ಯೋಜನೆಯ ಸದಸ್ಯತ್ವ ಪಡೆದುಕೊಂಡು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗೆ ಸಮೀಪದ ಸಹಕಾರ ಸಂಘ ಅಥವಾ ಈ ಕಚೇರಿಯ ದೂ.ಸಂ.08272-228519 ನ್ನು ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

