ಬೆಂಗಳೂರು: ಈಶಾನ್ಯ ಧಿಕ್ಕು ದೇವತೆಗಳ ನಿವಾಸ. ಒಂದು ಮನೆ ನಿರ್ಮಿಸುವಾಗ ಈಶಾನ್ಯ ಧಿಕ್ಕನ್ನು ಅತಿ ಸೂಕ್ಷ್ಮವಾಗಿ ಗಮನಿಸಿ ನಿರ್ಮಿಸಬೇಕು. ಈಶಾನ್ಯ ಧಿಕ್ಕಿನಲ್ಲಿ ಏನಿರಬೇಕು ಏನಿರಬಾರದು ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.ಈಶಾನ್ಯ ದಿಕ್ಕನ್ನು ಉಪ ದೇಶ ಧಿಕ್ಕು ಎಂದು ಕರೆಯುತ್ತೇವೆ. ಉಪ ದಿಕ್ಕು ಎಂದು ಕರೆಯುತ್ತಾರೆ. ಎರಡು ಮುಖ್ಯ ದಿಕ್ಕುಗಳ ನಡುವಿನ ಕೋನ. ಉತ್ತರ ಮತ್ತು ಪೂರ್ವ ಧಿಕ್ಕಿನ ನಡುವಿನ ಕೋನ.
ಈಶಾನ್ಯ ದಿಕ್ಕನ್ನು ದೇವತಗಳ ನಿವಾಸ ಎಂದು ಭಾವಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯನ ಕಿರಣಗಳು ಪ್ರಥಮವಾಗಿ ಮನೆಯ ಯಾವ ಭಾಗಕ್ಕೆ ಬೀಳುತ್ತವೋ ಅದನ್ನು ಈಶಾನ್ಯ ದಿಕ್ಕು ಎಂದು ಕರೆಯಲಾಗುತ್ತದೆ.
ನಾಲ್ಕು ಕೋನಗಳಲ್ಲಿ ಇದು ಪವಿತ್ರವಾದ ಧಿಕ್ಕು. ಈಶಾನ್ಯ, ವಾಯುವ್ಯ, ಆಗ್ನೇಯ, ನೈರುತ್ಯ ದಿಕ್ಕಿನಲ್ಲಿ ಈಶಾನ್ಯ ಪವಿತ್ರ ದಿಕ್ಕು. ಆದ್ದರಿಂದ ಆರಾಧನೆ, ಸಾಧನೆ, ವಿದ್ಯಾರ್ಜನೆ, ಲೇಖನ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಶುಭ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ಈ ಕೋನ ಮನುಷ್ಯನಿಗೆ ಬುದ್ಧಿ , ಜ್ಞಾನ, ವಿವೇಕ, ದೈರ್ಯ ಸಾಹಸವನ್ನು ನೀಡಿ ಸಕಲ ಕಷ್ಟಗಳಿಂದ ರಕ್ಷಿಸುತ್ತದೆ.
ಮನೆಯ ಈಶಾನ್ಯ ದಿಕ್ಕು (Eshan-Corner) ಅತ್ಯಂತ ಪವಿತ್ರವಾದದ್ದು. ಈ ದಿಕ್ಕಿನ ಅಧಿಪತಿ ರುದ್ರ, ಆಯುಧ ತ್ರಿಶೂಲ ಮತ್ತು ಪ್ರತಿನಿಧಿ ಗ್ರಹಗಳು ಬುಧ ಹಾಗೂ ಕೇತು. ಈ ದಿಕ್ಕು ಸರಿಯಾಗಿದ್ದರೆ ಸುಖ-ಸಂಪತ್ತು, ಇಲ್ಲವಾದರೆ ವಂಶಕ್ಕೆ ಆಪತ್ತು
ಈಶಾನ್ಯ ದಿಕ್ಕಿನಲ್ಲಿ ಏನಿರಬೇಕು? (ಶುಭ ಫಲಗಳು)
ನೀರಿನ ಮೂಲ: ಬಾವಿ, ನೀರಿನ ಟ್ಯಾಂಕ್ ಅಥವಾ ನೀರಿನ ಮೂಲಗಳು ಈ ದಿಕ್ಕಿನಲ್ಲಿರುವುದು ಅತ್ಯಂತ ಶ್ರೇಷ್ಠ.
ಪೂಜಾ ಕೋಣೆ: ದೈವಿಕ ಶಕ್ತಿ ನೆಲೆಸಲು ಇದು ಸೂಕ್ತ ಜಾಗ.
ಬಾಲ್ಕನಿ ಅಥವಾ ಹಾಲ್: ಈ ದಿಕ್ಕಿನಲ್ಲಿ ದೊಡ್ಡ ಹಾಲು ಅಥವಾ ಪಡಸಾಲೆ ಇದ್ದರೆ ಮನೆಗೆ ಲಕ್ಷ್ಮಿ ಪ್ರವೇಶಿಸುತ್ತಾಳೆ.
ನೀರನ್ನು ಹೊರಹಾಕುವುದು: ಮನೆ ತೊಳೆದ ನೀರು ಈಶಾನ್ಯದ ಮೂಲಕ ಹೊರಹೋದರೆ ತುಂಬಾ ಒಳ್ಳೆಯದು.
ಸ್ವಾಗತ ಕಕ್ಷೆ (Drawing Room): ಪೂರ್ವ ಅಥವಾ ಈಶಾನ್ಯದಲ್ಲಿ ಅತಿಥಿಗಳ ಕೋಣೆ ಇರುವುದು ಶುಭ.
ಈಶಾನ್ಯ ದಿಕ್ಕಿನಲ್ಲಿ ಇರಬಾರದ್ದು ಏನು? (ಅಶುಭ ಫಲಗಳು)
ಶೌಚಾಲಯ (Toilet): ಇಲ್ಲಿ ಶೌಚಾಲಯವಿದ್ದರೆ ವಂಶ ಕ್ಷೀಣಿಸುತ್ತದೆ, ಸಂತಾನ ಸಮಸ್ಯೆ ಮತ್ತು ಮನೆಯಲ್ಲಿ ಸದಾ ಜಗಳವಿರುತ್ತದೆ.
ಅಡುಗೆ ಮನೆ: ಈ ದಿಕ್ಕಿನಲ್ಲಿ ಅಗ್ನಿ ಇದ್ದರೆ ಗೃಹ ಕಲಹ ಮತ್ತು ಧನ ನಾಶ ಖಚಿತ.
ಭಾರವಾದ ವಸ್ತುಗಳು: ಈ ದಿಕ್ಕನ್ನು ಯಾವಾಗಲೂ ಖಾಲಿಯಾಗಿ ಮತ್ತು ಸ್ವಚ್ಛವಾಗಿಡಬೇಕು. ಕಸ-ಕಡ್ಡಿ ಇದ್ದರೆ ಶತ್ರುಗಳ ಕಾಟ ಹೆಚ್ಚುತ್ತದೆ.
ಎತ್ತರದ ಗೋಡೆ ಅಥವಾ ಕಟ್ಟಡ: ಈಶಾನ್ಯ ಭಾಗ ಎತ್ತರವಾಗಿದ್ದರೆ ಧನ ಹಾನಿ ಮತ್ತು ಅನಾರೋಗ್ಯ ಕಾಡುತ್ತದೆ.
ವಾಸ್ತು ದೋಷವಿದ್ದರೆ ಆಗುವ ತೊಂದರೆಗಳು:
ವಂಶ ವಿನಾಶ: ಈಶಾನ್ಯ ಮುಚ್ಚಲ್ಪಟ್ಟಿದ್ದರೆ ಅಥವಾ ದೋಷವಿದ್ದರೆ ಮೂರನೇ ತಲೆಮಾರಿನ ಒಳಗೆ ವಂಶ ನಿಂತುಹೋಗುವ ಅಪಾಯವಿದೆ
.ಆರ್ಥಿಕ ಮುಗ್ಗಟ್ಟು: ಧನ ಸಂಪತ್ತು ಇದ್ದರೂ ಜೀವನ ನೀರಸವಾಗುತ್ತದೆ.
ಅನಾರೋಗ್ಯ: ಉತ್ತರ ದಿಕ್ಕು ಎತ್ತರವಾಗಿದ್ದು ಈಶಾನ್ಯ ದೋಷಪೂರಿತವಾಗಿದ್ದರೆ ಮನೆಯ ಸ್ತ್ರೀಯರಿಗೆ ಅಕಾಲಿಕ ಮೃತ್ಯು ಅಥವಾ ರೋಗ ಬಾಧಿಸಬಹುದು.
ಮಕ್ಕಳ ಸಮಸ್ಯೆ: ಸಂತಾನ ಭಾಗ್ಯ ಇಲ್ಲದಿರುವುದು ಅಥವಾ ವಿಕಲಾಂಗ ಮಕ್ಕಳ ಜನನಕ್ಕೆ ಈ ದಿಕ್ಕಿನ ದೋಷವೇ ಕಾರಣವಾಗಬಹುದು.
ದೋಷ ನಿವಾರಣೆಗೆ ಸರಳ ಉಪಾಯಗಳು:
ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ದೋಷವಿದ್ದರೆ ಗಾಬರಿ ಬೇಡ, ಈ ಪರಿಹಾರಗಳನ್ನು ಪಾಲಿಸಿ:
ಮನೆಯ ಮುಖ್ಯ ದ್ವಾರಕ್ಕೆ ರುದ್ರತೋರಣವನ್ನು ಕಟ್ಟಿ.
ಸೋಮವಾರದ ವ್ರತ ಮಾಡಿ, ಶಿವ ಮತ್ತು ಗಣೇಶನ ಫೋಟೋವನ್ನು ಈ ದಿಕ್ಕಿನಲ್ಲಿ ಇಡಿ.
ಈಶಾನ್ಯ ಮೂಲೆಯಲ್ಲಿ ಮಣ್ಣಿನ ಗಡಿಗೆಯನ್ನು ನೀರು ತುಂಬಿಸಿ ಇಡಿ.
ಈ ದಿಕ್ಕಿನಲ್ಲಿ ಸದಾ ಕಾಲ ಒಂದು ಮೆರ್ಕ್ಯುರಿ ಬಲ್ಬ್ (Mercury Bulb) ಬೆಳಗುವಂತೆ ಮಾಡಿ.
ವಾಸ್ತು ಶಾಂತಿ ಯಂತ್ರ ಅಥವಾ ವಾಸ್ತು ಪುರುಷ ಯಂತ್ರವನ್ನು ದೇವರ ಕೋಣೆಯಲ್ಲಿಟ್ಟು ಪೂಜಿಸಿ.

