HomeLatest Newsರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ನಿಮ್ಮ ಜಮೀನಿನ 'ಮ್ಯುಟೇಷನ್' ಇನ್ಮುಂದೆ ಆಟೋಮ್ಯಾಟಿಕ್.!

ರಾಜ್ಯದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ನಿಮ್ಮ ಜಮೀನಿನ ‘ಮ್ಯುಟೇಷನ್’ ಇನ್ಮುಂದೆ ಆಟೋಮ್ಯಾಟಿಕ್.!

ಬೆಂಗಳೂರು : ರಾಜ್ಯದ ಭೂ ಮಾಲೀಕರಿಗೆ ಮತ್ತು ಕಂದಾಯ ವ್ಯವಹಾರಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ‘ಸ್ವಯಂಚಾಲಿತ ಮ್ಯುಟೇಷನ್’ (Auto Mutation) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಈ ಹೊಸ ಪದ್ಧತಿಯಡಿ, ಜಮೀನು ನೋಂದಣಿಯಾದ ನಂತರ ಹಕ್ಕು ಬದಲಾವಣೆ ಅಥವಾ ಮ್ಯುಟೇಷನ್ ಪ್ರಕ್ರಿಯೆಗಾಗಿ ಸಾರ್ವಜನಿಕರು ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ.

ಹೌದು.  ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯು ಮ್ಯುಟೇಶನ್ (ಆಸ್ತಿ ವರ್ಗಾವಣೆ) ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ‘ಸ್ವಯಂಚಾಲಿತ ಮ್ಯುಟೇಶನ್’ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಕಂದಾಯ ನಿರೀಕ್ಷಕರ (RI) ಡಿಜಿಟಲ್ ಸಹಿಯ ಅಗತ್ಯವಿಲ್ಲದೆ, ತಂತ್ರಾಂಶದ ಮೂಲಕವೇ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿಯೊಂದಿಗೆ ಸ್ವಯಂಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಸುಧಾರಣೆ ತರಲಾಗಿದೆ. ಇದರಿಂದಾಗಿ ವಿಳಂಬಕ್ಕೆ ಕಡಿವಾಣ ಬೀಳಲಿದ್ದು, ಪಾರದರ್ಶಕ ಮತ್ತು ವೇಗದ ಸೇವೆ ದೊರೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ 2024 ರಿಂದ ಫೆಬ್ರವರಿ 20, 2026ರ ವರೆಗೆ ಪೋಡಿ, ಕೋರ್ಟ್ ಆದೇಶ, ಭೂಸ್ವಾಧೀನ ಸೇರಿದಂತೆ ಒಟ್ಟು 9 ರೀತಿಯ 35 ಲಕ್ಷಕ್ಕೂ ಹೆಚ್ಚು ಮ್ಯುಟೇಶನ್‌ಗಳು ಯಾವುದೇ ನೋಟಿಸ್ ಇಲ್ಲದೆ ಸ್ವಯಂಚಾಲಿತವಾಗಿ ಅನುಮೋದನೆಗೊಂಡಿವೆ.

ವಿಳಂಬಕ್ಕೆ ಮುಕ್ತಿ: ಈ ಹಿಂದೆ ಕಂದಾಯ ನಿರೀಕ್ಷಕರು ಮ್ಯುಟೇಷನ್‌ಗೆ ಡಿಜಿಟಲ್ ಸಹಿ ಮಾಡಲು ಕಚೇರಿಗೆ ಬರಬೇಕಿತ್ತು, ಆದರೆ ಈಗ ನೋಟೀಸು ಅವಧಿ ಮುಗಿದ ತಕ್ಷಣ ಸಿಸ್ಟಮ್ ಮೂಲಕವೇ ಅನುಮೋದನೆಯಾಗುತ್ತದೆ.

ಮಾನವ ಹಸ್ತಕ್ಷೇಪ ಮುಕ್ತ: ಈ ಹಿಂದೆ ಕಂದಾಯ ನಿರೀಕ್ಷಕರು (RI) ಡಿಜಿಟಲ್ ಸಹಿ ಮಾಡಲು ಕಚೇರಿಗೆ ಬರಬೇಕಿತ್ತು. ಈಗ ತಂತ್ರಾಂಶದ ಮೂಲಕ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತದೆ.

ಆಕ್ಷೇಪಣೆ ಸಲ್ಲಿಸಲು ಅವಕಾಶ: ನೋಂದಾಯಿತ ದಾಖಲೆಗಳಿಗೆ 7 ರಿಂದ 15 ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ಈ ಅವಧಿಯಲ್ಲಿ ಯಾರಾದರೂ ಆಕ್ಷೇಪಣೆ ಸಲ್ಲಿಸಿದರೆ ಪ್ರಕರಣವನ್ನು ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗುತ್ತದೆ.

ಸರ್ಕಾರಿ ಜಮೀನುಗಳಿಗೆ ರಕ್ಷಣೆ: ಸರ್ಕಾರಿ ಜಮೀನುಗಳು ಮತ್ತು ಪಿ.ಟಿ.ಸಿ.ಎಲ್ (PTCL) ವ್ಯಾಪ್ತಿಯ ಜಮೀನುಗಳನ್ನು ತಂತ್ರಾಂಶದಲ್ಲಿ ಲಾಕ್ ಮಾಡಲಾಗಿದ್ದು, ಇವು ಸ್ವಯಂಚಾಲಿತ ಮ್ಯುಟೇಶನ್ ವ್ಯಾಪ್ತಿಗೆ ಬರುವುದಿಲ್ಲ.

ಮಾಹಿತಿ ಲಭ್ಯತೆ: ಮ್ಯುಟೇಶನ್ ಪೂರ್ಣಗೊಂಡ ನಂತರ ಸಂಬಂಧಪಟ್ಟವರಿಗೆ SMS ಮೂಲಕ ಮಾಹಿತಿ ನೀಡಲಾಗುತ್ತದೆ ಮತ್ತು ನೋಟಿಸ್‌ಗಳನ್ನು ‘ಇ-ಚಾವಡಿ’ ತಂತ್ರಾಂಶದಲ್ಲಿ ವೀಕ್ಷಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular