HomeKarnatakaBREAKING : ಬೆಂಗಳೂರಿನ ಜ್ಞಾನಭಾರತಿ ವಿವಿ ಬಳಿ ಸ್ಪೋಟಕ ಮಾದರಿಯ ವಸ್ತು ಪತ್ತೆ; ಪೊಲೀಸರ ದೌಡು

BREAKING : ಬೆಂಗಳೂರಿನ ಜ್ಞಾನಭಾರತಿ ವಿವಿ ಬಳಿ ಸ್ಪೋಟಕ ಮಾದರಿಯ ವಸ್ತು ಪತ್ತೆ; ಪೊಲೀಸರ ದೌಡು

ಬೆಂಗಳೂರು: ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋಟಕ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಗರದ ಜ್ಞಾನಭಾರತಿ ವಿಶ್ವವಿದ್ಯಾಲಯದ ಸಮೀಪದ ಸೋಣೇನಹಳ್ಳಿ ಸರ್ಕಲ್ ಬಳಿ ಖಾಲಿ ಜಾಗದಲ್ಲಿ ಡೈನಾಮೈಟ್‌ನಂತೆ ಕಾಣುವ ವಸ್ತು ಪತ್ತೆಯಾಗಿದೆ.

ಖಾಲಿ ಜಾಗದಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡೈನಾಮೈಟ್ ಮಾದರಿಯ ವಸ್ತು ಪತ್ತೆ

ಸೋಣೇನಹಳ್ಳಿ ಸರ್ಕಲ್ ಬಳಿಯ ಖಾಲಿ ಜಾಗದಲ್ಲಿ ಡೈನಾಮೈಟ್ ಮಾದರಿಯ ವಸ್ತು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ವಸ್ತುವಿನ ಸ್ವರೂಪ ಮತ್ತು ಅದು ನಿಜವಾಗಿಯೂ ಸ್ಫೋಟಕವೇ ಎಂಬುದರ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಜ್ಞಾನಭಾರತಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ವಸ್ತು ಎಲ್ಲಿಂದ ಬಂತು? ಖಾಲಿ ಜಾಗದಲ್ಲಿ ಅದನ್ನು ಇಟ್ಟವರು ಯಾರು? ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಪೊಲೀಸರಿಂದ ಪರಿಶೀಲನೆ

ಅನುಮಾನಾಸ್ಪದ ವಸ್ತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ವಸ್ತುವಿನ ನೈಜ ಸ್ವರೂಪ ಹಾಗೂ ಘಟನೆಯ ಹಿಂದಿನ ಕಾರಣ ತಿಳಿಯಲು ಮುಂದಿನ ಪರಿಶೀಲನೆ ನಡೆಯಬೇಕಿದೆ.ಪತ್ತೆಯಾಗಿರುವ ವಸ್ತು ನಿಜವಾದ ಸ್ಫೋಟಕವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಪೊಲೀಸ್ ಪರಿಶೀಲನೆ ಮತ್ತು ಅಧಿಕೃತ ದೃಢೀಕರಣದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

*ದಿಲ್ಜಿತ್ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ; ಗಾಯಕನಿಗೆ ಅಭಿಜೀತ್ ದೀಪ್ಕೆ ಭಾವನಾತ್ಮಕ ಸಂದೇಶ!

ಪಂಜಾಬಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಮತ್ತು ಕಾಕ್‌ರೋಚ್ ಜನತಾ ಪಾರ್ಟಿ ನಾಯಕ ಅಭಿಜೀತ್ ದೀಪ್ಕೆ ನಡುವಿನ ಹಿಂದಿನ ಭಿನ್ನಾಭಿಪ್ರಾಯ ಮತ್ತೆ ಸುದ್ದಿಯಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ದಿಲ್ಜಿತ್ ಅವರ ಸಂಗೀತ ಕಾರ್ಯಕ್ರಮದ ಬಳಿಕ ಅಭಿಜೀತ್ ದೀಪ್ಕೆ ಅವರು ಗಾಯಕನಿಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ತಮ್ಮ ನಡುವಿನ ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ದಿಲ್ಜಿತ್ ದೋಸಾಂಜ್ ಅವರ ಧೈರ್ಯ ಮತ್ತು ಪಂಜಾಬಿ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ಸಾಧನೆಯನ್ನು ಅಭಿಜೀತ್ ಶ್ಲಾಘಿಸಿದ್ದಾರೆ. ಇದೇ ವೇಳೆ, ಜೂನ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದಿಲ್ಜಿತ್ ನೀಡಿದ್ದ ಹೇಳಿಕೆಯೊಂದು ತಮಗೆ ನೋವುಂಟು ಮಾಡಿತ್ತು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಆದರೆ ಆ ಘಟನೆಯಿಂದ ದಿಲ್ಜಿತ್ ಮೇಲಿನ ತಮ್ಮ ಗೌರವ ಮತ್ತು ಅಭಿಮಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಿಲ್ಜಿತ್ ದೋಸಾಂಜ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಭಿಜೀತ್ ದೀಪ್ಕೆ, ಜೂನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯಕ ನೀಡಿದ್ದ ಹೇಳಿಕೆಯಿಂದ ತಮಗೆ ಸ್ವಲ್ಪ ನೋವಾಗಿತ್ತು ಎಂದು ತಿಳಿಸಿದ್ದಾರೆ.

“ಪಾಜಿ, ಜೂನ್‌ನಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದಾಗ ನೀವು ನೀಡಿದ ಹೇಳಿಕೆಯಿಂದ ನನಗೆ ಸ್ವಲ್ಪ ನೋವಾಗಿತ್ತು. ಆದರೆ ನಿಮ್ಮ ವಿರುದ್ಧ ವೈಯಕ್ತಿಕವಾಗಿ ನನಗೆ ಯಾವುದೇ ದ್ವೇಷವಿರಲಿಲ್ಲ. ನೀವು ಹೇಳಿದಂತೆ, ಸದಾ ಒಂದು ಉದ್ದೇಶಕ್ಕಾಗಿ ಧ್ವನಿ ಎತ್ತುವ ವ್ಯಕ್ತಿಯಾಗಿ ನಾನು ನಿಮ್ಮನ್ನು ನೋಡಿದ್ದೇನೆ” ಎಂದು ಅಭಿಜೀತ್ ಬರೆದುಕೊಂಡಿದ್ದಾರೆ.

ತಾವು ದಿಲ್ಜಿತ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿರುವ ಅಭಿಜೀತ್, ಕಳೆದ ಮೇ ತಿಂಗಳಲ್ಲಿ ಭಾರತಕ್ಕೆ ಮರಳುವ ಮುನ್ನ ಅಮೆರಿಕದ ಚಿಕಾಗೋದಲ್ಲಿ ನಡೆದ ಅವರ ಸಂಗೀತ ಕಾರ್ಯಕ್ರಮಕ್ಕೆ ಹಾಜರಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.ಕೇವಲ ದಿಲ್ಜಿತ್ ಅವರ ಹಾಡುಗಳನ್ನು ಕೇಳುವುದಕ್ಕಾಗಿ ಮಾತ್ರವಲ್ಲ, ಅವರ ವ್ಯಕ್ತಿತ್ವದ ಮೇಲಿದ್ದ ಗೌರವದಿಂದಲೂ ಕಾರ್ಯಕ್ರಮಕ್ಕೆ ತೆರಳಿದ್ದೆ ಎಂದು ತಿಳಿಸಿದ್ದಾರೆ.ಒಂದು ಹೇಳಿಕೆ ಅಥವಾ ಭಿನ್ನಾಭಿಪ್ರಾಯದಿಂದ ವ್ಯಕ್ತಿಯ ಮೇಲಿನ ಗೌರವ ಸಂಪೂರ್ಣವಾಗಿ ಬದಲಾಗುವುದಿಲ್ಲ ಎಂಬ ಸಂದೇಶವನ್ನು ಅಭಿಜೀತ್ ತಮ್ಮ ಬರಹದ ಮೂಲಕ ನೀಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular