BIG NEWS : ಬಗೆದಷ್ಟು ಬಯಲಾಗ್ತಿದೆ ‘ನಿಶಾ’ ಮಹಾಮೋಸ : ಫೈನಾನ್ಶಿಯರುಗಳಿಗೂ ಲಕ್ಷಾಂತರ ರೂ. ‘ದೋಖಾ’

ಬೆಂಗಳೂರು : ನಟ, ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರಿನಲ್ಲಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಆರೋಪಿ ನಿಶಾ ನರಸಪ್ಪ ಮಾಡಿರುವ ವಂಚನೆ ಬಗೆದಷ್ಟು ಬಯಲಾಗುತ್ತಿದೆ.ಮಕ್ಕಳ ಟ್ಯಾಲೆಂಟ್ ಶೋನಲ್ಲಿ ನಿಮ್ಮ ಮಕ್ಕಳಿಗೂ ಅವಕಾಶ ಕೊಡಿಸುವುದಾಗಿ ಹೇಳಿ ನೂರಾರು ಮಂದಿ ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಎಸಗಿದ್ದಳು.

ಇದಲ್ಲದೇ ಈಕೆ ದೊಡ್ಡ ದೊಡ್ಡ ಪೈನಾನ್ಶಿಯರಿಗೂ ವಂಚನೆ ಎಸಗಿರುವುದು ಗೊತ್ತಾಗಿದೆ. ಬಣ್ಣ ಬಣ್ಣದ ಮಾತುಗಳನ್ನಾಡಿ ಜನರನ್ನು ಮರುಳು ಮಾಡಿ ಹಣ ಪಡೆದುಕೊಳ್ಳುತ್ತಿದ್ದಳು. ತೆಗೆದುಕೊಂಡ ಹಣಕ್ಕೆ ಪ್ರತಿಯಾಗಿ 20 % ಬಡ್ಡಿ ಹಣ ನೀಡಿದ್ದಳು. ಇದನ್ನು ನಂಬಿ ಮತ್ತೆ ಮತ್ತೆ ಹಣ ಕೊಟ್ಟವರಿಗೆ ಈಕೆ ವಾಪಸ್ ಹಣ ನೀಡದೇ ದೋಖಾ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.

ಸೆಲೆಬ್ರೆಟಿಗಳ ಹೆಸರಿನಲ್ಲಿ ದೋಖಾ

ವಂಚನೆ ಹಿನ್ನೆಲೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ನಿಶಾ ಕೇವಲ ವನ್ಷಿಕಾ ಹೆಸರಷ್ಟೇ ಅಲ್ಲದೇ, ಸೆಲೆಬ್ರೆಟಿಗಳ ಹೆಸರಿನಲ್ಲಿ ಕೂಡ ದೋಖಾ ಎಸಗಿರುವುದು ಬಯಲಾಗಿದೆ. ಇನ್ಸ್ಟಾಗ್ರಾಮ್ನನ್ನು ಹೆಚ್ಚಾಗಿ ಬಳಕೆ ಮಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ನಿಶಾ ಅವರಿಗೆ ವಂಚನೆ ಎಸಗುತ್ತಿದ್ದಳು. ತುಂಬಾ ಸುಂದರವಾದ ತಾಯಿ-ಮಗಳ ಫೋಟೋ ಕಂಡ ಕೂಡಲೇ ಅವರನ್ನು ನಿಶಾ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಅವರ ಬಳಿ ಚಾಟ್ ಮಾಡಿ ಸಲುಗೆ ಬೆಳೆಸಿ ನಂತರ ಫೋಟೋಶೂಟ್ ಇದೆ ಬನ್ನಿ ಎಂದು ಕರೆಸಿ ಹಣ ಪಡೆದು ಮೋಸ ಮಾಡುತ್ತಿದ್ದಳು. ಒಂದು ಮಗುವಿನ ಆ್ಯಡ್ ಶೂಟ್ ಗೆ ಈಕೆ 10 ಸಾವಿರ ಪಡೆಯುತ್ತಿದ್ದಳು ಎನ್ನಲಾಗಿದೆ.ಪ್ರಕರಣ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಿಶಾಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read